ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಕ್ಷರಶಃ ಸಮರಾಂಗಣವಾಗಿ ಬದಲಾಗಿರುವ ಪಂಜಾಬ್‌ನ ಮೇಲು ರಸ್ತೆಯೊಂದರ ಮೇಲೆ ಪ್ರಧಾನಿ ಬುಧವಾರ 20 ನಿಮಿಷಗಳ ಕಾಲ ಕಾಯುವಂತಾದ ಘಟನೆ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಭದ್ರತಾ ಲೋಪದಾಚೆಗೂ ಇದು ಚರ್ಚೆಯಾಗುತ್ತಿದ್ದು, ಪಂಜಾಬ್‌ನ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಒತ್ತಾಯಗಳೂ ಕೇಳಿ ಬಂದಿವೆ. ಬಿಜೆಪಿ ಕಾರ್ಯಕರ್ತರು, ನಾಯಕರಾಚೆಗೆ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್‌ರಂತವರೂ ಈ ರೀತಿಯಾಗಿ ಆಗ್ರಹಿಸಿರುವುದು ಸಹಜವಾಗಿಯೇ ರಾಷ್ಟ್ರಪತಿ ಆಳ್ವಿಕೆ, ಆರ್ಟಿಕಲ್ 356 ಸುತ್ತ ಚರ್ಚೆ ಹುಟ್ಟುಹಾಕಿದೆ. ಅಷ್ಟಕ್ಕೂ ‘ಭದ್ರತಾ ಲೋಪ’ಕ್ಕೆ ಪಂಜಾಬ್‌ನ ಸರಕಾರವನ್ನು ಕೇಂದ್ರ ವಜಾಗೊಳಿಸಬಹುದೇ? ರಾತೋ ರಾತ್ರಿ ಹೇರಬಹುದೇ? ಎಂಬುದು ಸದ್ಯದ ಪ್ರಶ್ನೆ. ಆರ್ಟಿಕಲ್ 356 ಇದಕ್ಕೆ ಉತ್ತರ ಕಂಡುಕೊಳ್ಳಲು ಸಂವಿಧಾನ ಪುಸ್ತಕವನ್ನೊಮ್ಮೆ ತಿರುವಿ ಹಾಕಬೇಕಾಗುತ್ತದೆ. ರಾಷ್ಟ್ರಪತಿ ಆಳ್ವಿಕೆ ಎಂದರೆ ರಾಜ್ಯ ಸರ್ಕಾರವನ್ನು ಅಮಾನತುಗೊಳಿಸಿ, ಅದೇ ರಾಜ್ಯದಲ್ಲಿ ನೇರವಾಗಿ ಕೇಂದ್ರ ಸರ್ಕಾರದ ಆಡಳಿತವನ್ನು ಹೇರುವುದು. ಭಾರತದ ಸಂವಿಧಾನದ 356ನೇ ವಿಧಿಯಲ್ಲಿ ಇಂಥಹದ್ದೊಂದು ವಿಶೇಷ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ದಯಪಾಲಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ರಾಜ್ಯ ಸರ್ಕಾರವು ‘ಸಾಂವಿಧಾನಿಕ ನಿಬಂಧನೆ’ಗಳ ಪ್ರಕಾರ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ, ಈ ಕೆಲಸವನ್ನು ಕೇಂದ್ರ ಮಾಡಬಹುದು. ಅರ್ಥಾತ್ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಕೇಂದ್ರದಿಂದ ನೇಮಕಗೊಂಡಿರುವ ರಾಜ್ಯಪಾಲರು ಅಧಿಕಾರ ಚಲಾಯಿಸುತ್ತಾರೆ. ಅವರಿಗೆ ಸಹಾಯ ಮಾಡಲು ಅಧಿಕಾರಿಗಳ ನೇಮಕ ನಡೆಯುತ್ತದೆ. ರಾಷ್ಟ್ರಪತಿ ಆಳ್ವಿಕೆ ಹೆಚ್ಚು ಆಳಕ್ಕಿಳಿಯದೇ, ಸಾಮಾನ್ಯವಾಗಿ ಈ ಕೆಳಗಿನ ಸಂದರ್ಭಗಳಲ್ಲಿ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗುತ್ತದೆ.
- ರಾಜ್ಯಪಾಲರು ಸೂಚಿಸಿದ ಅವಧಿಯೊಳಗೆ ರಾಜ್ಯ ಶಾಸಕಾಂಗಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಸಾಧ್ಯವಾಗದೇ ಇದ್ದಾಗ
- ಸಮ್ಮಿಶ್ರ ಸರಕಾರಗಳ ಸಂದರ್ಭ ಮೈತ್ರಿ ಮುರಿದು ಬಿದ್ದು ಮುಖ್ಯಮಂತ್ರಿ ಬಹುಮತ ಕಳೆದುಕೊಂಡು, ನಿಗದಿತ ಅವಧಿಯೊಳಗೆ ಬಹುಮತ ಸಾಬೀತುಪಡಿಸಲು ಆಗದೇ ಇದ್ದಲ್ಲಿ
- ಅವಿಶ್ವಾಸ ನಿರ್ಣಯದಿಂದ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಾಗ
- ಯುದ್ಧ, ಸಾಂಕ್ರಾಮಿಕ ಅಥವಾ ನೈಸರ್ಗಿಕ ವಿಕೋಪಗಳಂತಹ ಅನಿವಾರ್ಯ ಕಾರಣಗಳಿಗಾಗಿ ಚುನಾವಣೆ ಮುಂದೂಡಲ್ಪಟ್ಟಾಗ
- ರಾಜ್ಯದ ಸಾಂವಿಧಾನಿಕ ಸಂಸ್ಥೆಗಳು ಅಥವಾ ಶಾಸಕಾಂಗ ಸಾಂವಿಧಾನಿಕ ಮಾನದಂಡಗಳನ್ನು ಅನುಸರಿಸಲು ವಿಫಲವಾದಲ್ಲಿ, ರಾಜ್ಯದ ರಾಜ್ಯಪಾಲರ ವರದಿಯ ಮೇಲೆ ರಾಷ್ಟ್ರಪತಿ ಆಡಳಿತ ಹೇರಬಹುದು
- ಸದನದಲ್ಲಿ ಬಹುಮತ ಪರೀಕ್ಷಿಸಬೇಕು
- ಕೇಂದ್ರವು ರಾಜ್ಯಕ್ಕೆ ಎಚ್ಚರಿಕೆ ನೀಡಿ ಉತ್ತರ ನೀಡಲು 1 ವಾರ ಕಾಲಾವಕಾಶ ನೀಡಬೇಕು.
- ರಾಷ್ಟ್ರಪತಿಗಳಿಗೆ ಸಂಪುಟ ನೀಡಿದ ಸಲಹೆಯನ್ನು ನ್ಯಾಯಾಲಯ ಪ್ರಶ್ನಿಸಲಾಗದು. ಆದರೆ ಸಲಹೆಯನ್ನು ಯಾವ ಆಧಾರದ ಮೇಲೆ ರಾಷ್ಟ್ರಪತಿಗಳು 'ತೃಪ್ತಿಕರವಾಗಿದೆ' ಎಂದು ಒಪ್ಪಿಕೊಂಡಿದ್ದಾರೆ ಎಂಬುದನ್ನು ವಿಮರ್ಶಿಸಬಹುದು. ರಾಷ್ಟ್ರಪತಿ ಆಳ್ವಿಕೆ ಘೋಷಣೆಯ ಹಿಂದೆ ನೈಜ ಕಾರಣವಿದೆಯೇ? ಕಾರಣಗಳು ಸಂಬಂಧಿಸಿದವೇ? ಅಧಿಕಾರದ ದುರುಪಯೋಗವಾಗಿದೆಯೇ? ಎಂಬುದನ್ನು ನ್ಯಾಯಾಲಯ ನಿಕಷಕ್ಕೆ ಒಡ್ಡಬಹುದು.
- ಆರ್ಟಿಕಲ್ 356 ಅನ್ನು ಅನುಚಿತವಾಗಿ ಬಳಸಿದರೆ ನ್ಯಾಯಾಲಯ ಪರಿಹಾರವನ್ನು ನೀಡಲಿದೆ
- ಆರ್ಟಿಕಲ್ 356(3)ರ ಅಡಿಯಲ್ಲಿ ರಾಷ್ಟ್ರಪತಿಗಳ ಅಧಿಕಾರಕ್ಕೆ ಮಿತಿಯಿದೆ. ಸಂಸತ್ತಿನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಅನುಮೋದನೆ ಸಿಗವ ಮೊದಲೇ ವಿಧಾನಸಭೆಯನ್ನು ವಿಸರ್ಜಿಸಬಾರದು.
- 356ನೇ ವಿಧಿಯು ಸಾಂವಿಧಾನಿಕ ಸಂಸ್ಥೆಗಳು ಸ್ಥಗಿತಗೊಂಡ ಸಂದರ್ಭದಲ್ಲಿ ಮಾತ್ರ ಸಮರ್ಥಿಸಲ್ಪಡುತ್ತದೆಯೇ ಹೊರತು ಆಡಳಿತ ಯಂತ್ರ ಸ್ಥಗಿತಗೊಂಡಾಗ ಅಲ್ಲ!
from India & World News in Kannada | VK Polls https://ift.tt/3HEtk8z