ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನು ಪಟ್ಟಿಗೆ ಸೇರಿಸುವ ಪ್ರಸ್ತಾವ ಸಲ್ಲಿಕೆಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ಸಿದ್ಧತೆ ನಡೆಸಿವೆ. ಹಂಪಿ ಹಾಗೂ ಪಟ್ಟದಕಲ್ಲು ದೇಗುಲಗಳು ಮಾತ್ರ ಯುನೆಸ್ಕೊ ಪಟ್ಟಿಯಲ್ಲಿವೆ. ಈ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲೆಯ ಬೇಲೂರಿನ ಚನ್ನಕೇಶವ, ಹಳೇಬೀಡಿನ ಹೊಯ್ಸಳೇಶ್ವರ, ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಿ ದೇಗುಲ, ಹಳೇಬೀಡಿದ ಪಾಶ್ರ್ವನಾಥ ಬಸದಿ, ಕೋರವಂಗಲದ ಬುಚೇಶ್ವರ ದೇಗುಲ, ಅರಸೀಕೆರೆಯ ಈಶ್ವರ ದೇಗುಲ, ಹಾರನಹಳ್ಳಿಯ ಕೇಶವ ದೇಗುಲ, ಮಂಡ್ಯದ ಹೊಸವಳಲು ಲಕ್ಷ್ಮೀನಾರಾಯಣ ದೇಗುಲ, ಗೋವಿಂದನ ಹಳ್ಳಿಯ ಪಂಚಲಿಂಗೇಶ್ವರ ದೇಗುಲ, ಮೈಸೂರು ಜಿಲ್ಲೆ ಸೋಮನಾಥಪುರದ ಕೇಶವ ದೇಗುಲ, ಚಿಕ್ಕಮಗಳೂರು ಜಿಲ್ಲೆಯ ಅಮೃತಾಪುರದ ಅಮೃತೇಶ್ವರ ಹಾಗೂ ಬೆಳವಾಡಿ ವೀರನಾರಾಯಣ ದೇಗುಲಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲು ತಜ್ಞರ ತಂಡ ಶಿಫಾರಸು ಮಾಡಿದೆ. ವಿಶ್ವ ಮಟ್ಟದಲ್ಲಿ ಸ್ಥಾನ: ಹಾಸನ ಜಿಲ್ಲೆ ಒಂದೇ ಅಲ್ಲ ಮಂಡ್ಯ, ಮೈಸೂರು, ಚಿಕ್ಕಮಗಳೂರು ಪ್ರಸಿದಟಛಿ ದೇಗುಲಗಳು ಗ್ರೂಪ್ ಆಫ್ ಮಾನಿಮೆಂಟ್ ಎಂದು ಪರಿಗಣಿಸಿ ಯುನೆಸ್ಕೊ ಪಟ್ಟಿಗೆ ಸೇರ್ಪಡೆಗೊಂಡಿದ್ದೇ ಆದಲ್ಲಿ ವಿಶ್ವಮಟ್ಟದಲ್ಲಿ ದೇಗುಲಗಳು ಸ್ಥಾನ ಪಡೆಯಲಿವೆ. ವಿಶ್ವಮಟ್ಟದಲ್ಲಿ ಸ್ಥಾನ ಪಡೆಯುವ ಮೂಲಕ ಪ್ರವಾಸೋದ್ಯಮದ ಚಿತ್ರಣವೇ ಬದಲಾಗಲಿದೆ. ಆ ಮೂಲಕ ಒಂದಿಷ್ಟು ಉದ್ಯೋಗಗಳು ಸೃಷ್ಟಿಯಾಗಿ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಯಾವ್ಯಾವ ದೇವಾಲಯ: ಹಾಸನ ಜಿಲ್ಲೆಯ ಲಕ್ಷ್ಮಿದೇವಿ ದೇವಾ ಲಯ(1113), ಚನ್ನಕೇಶವ ದೇವಾಲಯ (1117), ಹೊಯ್ಸಳೇಶ್ವರ ದೇವಾಲಯ (1121), ಪಾಶ್ರ್ವನಾಥ ಬಸದಿ (1133), ಬುಚೇಶ್ವರ ದೇವಾಲಯ (1173), ಈಶ್ವರ ದೇವಾಲಯ (1220), ಕೇಶವ ದೇವಾಲಯ (1234), ಚಿಕ್ಕಮ ಗಳೂರು ಜಿಲ್ಲೆಯ ಅಮೃತೇಶ್ವರ ದೇವಾಲಯ(1196), ವೀರನಾರಾಯಣ ದೇವಾಲಯ (1206), ಮಂಡ್ಯ ಜಿಲ್ಲೆಯ ಲಕ್ಷ್ಮೀನಾರಾಯಣ ದೇವಾಲಯ (1235 -1240), ಪಂಚಲಿಂಗೇಶ್ವರ ದೇವಾಲಯ (1237-1238), ಮೈಸೂರಿನ ಕೇಶವ ದೇವಾಲಯ(1268). ಪ್ರಾಚೀನ ದೇಗುಲಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲು ಸಭೆ ನಡೆಸಿ ಚರ್ಚಿಸಲಾಗಿದ್ದು, ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. -ಗಿರೀಶ್ ಜಿಲ್ಲಾಧಿಕಾರಿ, ಹಾಸನ
from India & World News in Kannada | VK Polls https://ift.tt/305YUY1