(ಕೇರಳ): ಮಾಲ್‌ಗಳು ಪಾರ್ಕಿಂಗ್ ಶುಲ್ಕ ವಿಧಿಸುವುದು ಕಾನೂನುಬಾಹಿರ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಮಾಲ್‌ಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸಲು ಅವಕಾಶ ನೀಡಿದರೆ ಲಿಫ್ಟ್ ಸೇವೆಗೂ ಶುಲ್ಕ ವಿಧಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಹೈಕೋರ್ಟ್ ಹೇಳಿದೆ. ಎಡಾಪಳ್ಳಿ ಲುಲು ಮಾಲ್‌ನಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಬೋಸ್ಕೋ ಲೂಯಿಸ್ ಮತ್ತು ಪಾಲಿ ವಡಕ್ಕನ್ ಸಲ್ಲಿಸಿರುವ ಅರ್ಜಿಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಪರಾಮರ್ಶೆ ನಡೆಸಿದ್ದಾರೆ. ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಮುಂದುವರಿಸಬಹುದು. ಆದರೆ ಇದುವರೆಗೆ ವಿಧಿಸಲಾದ ಶುಲ್ಕ ಅರ್ಜಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರಬೇಕು ಎಂದು ಕೇರಳ ಹೈಕೋರ್ಟ್ ವ್ಯಕ್ತಪಡಿಸಿದೆ. ಅರ್ಜಿಯನ್ನು ಒಂದು ತಿಂಗಳ ಬಳಿಕದ ಪರಿಗಣನೆಗೆ ಮುಂದೂಡಲಾಗಿದೆ. ಕೇರಳದ ಶಾಲೆಗಳಲ್ಲೂ ಹಿಜಾಬ್‌ಗೆ ನಿಷೇಧ ತಿರುವನಂತಪುರಂ: ಕೇರಳದ ಪ್ರೌಢಶಾಲೆಗಳಲ್ಲಿ ಎನ್‌ಸಿಸಿ ಮಾದರಿಯ ‘ಸ್ಟೂಡೆಂಟ್ ಪೊಲೀಸ್ ಕೆಡೆಟ್ಸ್’ (ಎಸ್‌ಪಿಸಿ) ಘಟಕದ ವಿದ್ಯಾರ್ಥಿಗಳಿಗೆ ಹಿಜಾಬ್ ಹಾಗೂ ಪೂರ್ತಿ ತೋಳಿನ ಉಡುಪು ಧರಿಸಲು ಅನುಮತಿ ಇಲ್ಲ ಎಂದು ಅಲ್ಲಿನ ರಾಜ್ಯ ಸರಕಾರ ತಿಳಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಗೂ ಪೂರ್ತಿ ತೋಳಿನ ಉಡುಪು ಧರಿಸಲು ಅನುಮತಿ ನೀಡಬೇಕು ಎಂದು ಎಂಟನೇ ತರಗತಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸರಕಾರ, ‘ಅನುಮತಿ ನೀಡಿದರೆ ರಾಜ್ಯದಲ್ಲಿರುವ ಜಾತ್ಯತೀತತೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಅನುಮತಿ ನೀಡಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ವಿದ್ಯಾರ್ಥಿನಿಯು ಕೇರಳ ಹೈಕೋರ್ಟ್ ಮೊರೆ ಹೋಗಿದ್ದಳು. ರಾಜ್ಯ ಸರಕಾರವೇ ಇದನ್ನು ತೀರ್ಮಾನಿಸಲಿ ಎಂದು ಕೋರ್ಟ್ ನಿರ್ದೇಶಿಸಿತ್ತು. ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ಕೌಶಲ ಅಭಿವೃದ್ಧಿ, ಸಮಾಜಮುಖಿ ಕೆಲಸ, ನಾಯಕತ್ವ, ಕಾನೂನು, ನಾಗರಿಕ ಪ್ರಜ್ಞೆ, ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಸೇರಿ ಹಲವು ರೀತಿಯಲ್ಲಿ ಮಾರ್ಗದರ್ಶನ ನೀಡುವ ದಿಸೆಯಲ್ಲಿ ಸರಕಾರವು ಎಸ್‌ಪಿಸಿ ಯೋಜನೆ ಜಾರಿಗೆ ತಂದಿದೆ.
from India & World News in Kannada | VK Polls https://ift.tt/3ouvlNB