ಹೊಸದಿಲ್ಲಿ: ಹದಿನೈದನೇ ಆವೃತ್ತಿಯ ಟೂರ್ನಿಯಲ್ಲಿ ಹೊಸ ತಂಡವಾಗಿ ಕಣಕ್ಕಿಳಿಯುತ್ತಿರುವ ತಂಡವನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮುನ್ನಡೆಸಲಿದ್ದಾರೆ. ಫೆ.12-13ರಂದು ನಡೆಯಲಿರುವ ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್‌ಗೂ ಮುನ್ನ ಲಖನೌ ಫ್ರಾಂಚೈಸಿ ಬರೋಬ್ಬರಿ 17 ಕೋಟಿ ರೂ.ಗಳ ಭಾರಿ ಸಂಭಾವನೆ ನೀಡಿ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಕೆಎಲ್ ರಾಹುಲ್ ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿದೆ. ಅವರೊಟ್ಟಿಗೆ ಆಲ್‌ರೌಂಡರ್ ಮಾರ್ಕಸ್ ಸ್ಟೊಯ್ನಿಸ್ (9.2 ಲೋಟಿ ರೂ. ಮತ್ತು ಯುವ ಲೆಗ್ ಸ್ಪಿನ್ನರ್ (4 ಕೋಟಿ ರೂ.) ಅವರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ನೂತನ ಫ್ರಾಂಚೈಸಿ ಜೊತೆಗೆ ಕ್ಯಾಪ್ಟನ್ ಆಗಿ ಹೊಸ ಇನಿಂಗ್ಸ್ ಆರಂಭಿಸಲು ಎದುರು ನೋಡುತ್ತಿರುವ ಕರ್ನಾಟಕದ ಕಲಿ ಕೆಎಲ್ ರಾಹುಲ್, ಈ ಸಂದರ್ಭದಲ್ಲಿ ನೀಡಿರುವ ವಿಶೇಷ ಸಂದರ್ಶನ ಒಂದರಲ್ಲಿ ಐಪಿಎಲ್‌ನ ಭಿಷ್ಯದ ಸೂಪರ್ ಸ್ಟಾರ್ ಆಟಗಾರ ಯಾರೆಂದು ಹೆಸರಿಸಿದ್ದಾರೆ. ಲಖನೌ ತಂಡದ ಮೂಲಕ ಟೀಮ್ ಇಂಡಿಯಾಗೆ ಮತ್ತಷ್ಟು ಹೊಸ ಪ್ರತಿಭೆಗಳನ್ನು ಹೆಕ್ಕಿಕೊಡುವ ಆಶಾಭಾವನೆಯನ್ನೂ ರಾಹುಲ್ ಹೊರಹಾಕಿದ್ದಾರೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್, ತಂಡದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರಲ್ಲಿ ಟೀಮ್ ಇಂಡಿಯಾದ ಬಹುದೊಡ್ಡ ತಾರೆಯಾಗಿ ಮಿಂಚುವ ಸಾಮರ್ಥ್ಯವಿದೆ ಎಂದು ಶ್ಲಾಘಿಸಿದ್ದಾರೆ. "ಐಸಿಸಿ ಕಿರಿಯರ ವಿಶ್ವಕಪ್ ಟೂರ್ನಿಯಿಂದ ಬಂದು ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ರವಿ ಬಿಷ್ಣೋಯ್ ಅವರ ಸಾಮರ್ಥ್ಯ ಏನೆಂಬುದು ಗೊತ್ತಾಗಿದೆ. ಐಪಿಎಲ್ ಬಹುದೊಡ್ಡ ವೇದಿಕೆ. ಆದರೂ ಕಿಂಚಿತ್ತೂ ಭಯವಿಲ್ಲದೆ ಅವರು ಅದ್ಭುತ ಆಟವಾಡಿದರು," ಎಂದು ರಾಹುಲ್ ಗುಣಗಾನ ಮಾಡಿದ್ದಾರೆ. 2020ರ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಟೇಕರ್ ಎನಿಸಿದ್ದ ಲೆಗ್ ಸ್ಪಿನ್ನರ್ ಬಿಷ್ಣೋಯ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಖರೀದಿ ಮಾಡಿತ್ತು. ಬಳಿಕ 2021ರ ಟೂರ್ನಿ ನಂತರ ಹರಾಜಿಗೆ ಬಿಟ್ಟುಕೊಟ್ಟಿತು. ಪಂಜಾಬ್ ಕಿಂಗ್ಸ್ ತನ್ನ ಓಪನರ್ ಮಯಾಂಕ್ ಅಗರ್ವಾಲ್ ಮತ್ತು ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮಾತ್ರವೇ ಉಳಿಸಿಕೊಂಡು ಉಳಿದವರನ್ನು ಹರಾಜಿಗೆ ಬಿಟ್ಟು ಭಾರಿ ಅಚ್ಚರಿ ಮೂಡಿಸಿತ್ತು. "ಬಿಷ್ಣೋಯ್, ಹೋರಾಟಕ್ಕೆ ಸದಾ ಮುನ್ನುಗ್ಗುವ ಆಟಗಾರ. ಸ್ಪಿನ್ನರ್‌ಗಳ ಎದುರು ಅತ್ಯುತ್ತಮವಾಗಿ ಬ್ಯಾಟ್ ಮಾಡುವ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಎದುರು ಬೌಲಿಂಗ್ ಮಾಡಲು ಚಡಪಡಿಸುತ್ತಿದ್ದರು. ಆಗ ಅವರಿಗೆ ಚೆಂಡು ನೀಡಿ ಇದು ಕಷ್ಟದ ಕೆಲಸ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದೆ. ಆದರೆ ಆತ ಇವೆಲ್ಲವೂ ತಮಗೆ ಲೆಕ್ಕಕ್ಕಿಲ್ಲ, ಖಂಡಿತಾ ವಿಕೆಟ್ ಪಡೆಯುತ್ತೇನೆ ಎಂದಿದ್ದ. ಆತನಲ್ಲಿ ಆ ಪರಿಯ ಆತ್ಮವಿಶ್ವಾಸವಿದೆ. ಆತನ ದೇಹ ಚಿಕ್ಕದಾದರೂ, ಗುಂಡಿಗೆ ದೊಡ್ಡದಿದೆ," ಎಂದಿದ್ದಾರೆ. ಲಖನೌ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್1. ಕೆಎಲ್ ರಾಹುಲ್ (ನಾಯಕ/ಓಪನರ್) 2. ಇಶಾನ್ ಕಿಶನ್ (ವಿಕೆಟ್‌ಕೀಪರ್/ಓಪನರ್) 3. ಮನೀಶ್ ಪಾಂಡೆ (ಬ್ಯಾಟ್ಸ್‌ಮನ್) 4. ಮಾರ್ಕಸ್ ಸ್ಟೋಯ್ನಿಸ್ (ಆಲ್‌ರೌಂಡರ್) 5. ಶಾರುಖ್ ಖಾನ್ (ಆಲ್‌ರೌಂಡರ್) 6. ಶಿಮ್ರಾನ್ ಹೆಟ್ಮಾಯೆರ್ (ಬ್ಯಾಟ್ಸ್‌ಮನ್) 7. ಹರ್ಷಲ್ ಪಟೇಲ್ (ಬಲಗೈ ವೇಗಿ) 8. ರವಿ ಬಿಷ್ಣೋಯ್ (ಲೆಗ್ ಸ್ಪಿನ್ನರ್) 9. ಮೊಹಮ್ಮದ್ ಶಮಿ (ಬಲಗೈ ವೇಗಿ) 10. ಕಗಿಸೊ ರಬಾಡ (ಬಲಗೈ ವೇಗಿ) 11. ಯುಜ್ವೇಂದ್ರ ಚಹಲ್ (ಲೆಗ್ ಸ್ಪಿನ್ನರ್)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3g27QGE