ವಿವಾದಾತ್ಮಕ ಹೇಳಿಕೆ ನೀಡಿದ್ದ ಋಷಿ ಕುಮಾರ ಸ್ವಾಮಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ

ಮಂಡ್ಯ/ ಶ್ರೀರಂಗಪಟ್ಟಣ: ಕೋಮು ಸೌರ್ಹಾದತೆಗೆ ಧಕ್ಕೆ ತರುವ ಪ್ರಚೋದನಕಾರಿ ಹೇಳಿಕೆ ನೀಡಿ ಮಂಗಳವಾರ ಬಂಧಿತನಾಗಿ ನ್ಯಾಯಾಂಗ ವಶದಲ್ಲಿದ್ದ ಚಿಕ್ಕಮಗಳೂರು ಕಾಳಿ ಮಠದ ಶ್ರೀ ಋಷಿ ಕುಮಾರ ಸ್ವಾಮಿಯನ್ನು ಬುಧವಾರ ಷರತ್ತು ಬದ್ಧ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಮೂರು ದಿನಗಳ ಹಿಂದೆ ಶ್ರೀರಂಗ ಪಟ್ಟಣಕ್ಕೆ ಬಂದಿದ್ದ ಸಮಯದ ಲ್ಲಿ ‘ಶ್ರೀರಂಗ ಪಟ್ಟಣದ ಜಾಮಿಯಾ ಮಸೀದಿಯು (ಟಿಪ್ಪು ಮಸೀದಿ) ಮೂಲತಃ ಹನು ಮಂತನ ದೇವಾಲಯ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುತ್ತಿರುವಂತೆಯೇ ಶ್ರೀರಂಗ ಪಟ್ಟಣದ ಜಾಮಿಯಾ ಮಸೀದಿಯನ್ನು ಕೆಡವಿ, ಹನುಮಂತನ ದೇವಾಲಯವನ್ನು ಮರು ನಿರ್ಮಾಣ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಭಾರತೀಯ ಪುರಾತತ್ವ ಮತ್ತು ಸಂಗ್ರಹಾಲಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಶ್ರೀ ರಂಗ ಪಟ್ಟಣದ ಪೊಲೀಸರು ಚಿಕ್ಕಮಗಳೂರಿಗೆ ತೆರಳಿ ಋಷಿಕುಮಾರ ಸ್ವಾಮಿಯನ್ನು ಬಂಧಿಸಿ, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲದೇ ರಿಷಿಕುಮಾರ ಸ್ವಾಮಿಯನ್ನು ಜ.31 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು. ನಂತರ ಸ್ವಾಮಿಯನ್ನು ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಕಾಳಿ ಸ್ವಾಮಿ ಪರ ವಕೀಲರಾದ ಬಾಲರಾಜು, ಎಸ್‌.ಆರ್‌.ಸಿದ್ದೇಶ್‌ ಬುಧವಾರ ಸಲ್ಲಿಸಿದ ಜಾಮೀನು ಅರ್ಜಿಯನ್ನು ಮನ್ನಿಸಿದ ಶ್ರೀರಂಗಪಟ್ಟಣದ ಅಡಿಷನಲ್‌ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಧೀಶರಾದ ಬಿ.ಮಜೀದಾ ಆಯಿಷಾ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ರಿಷಿ ಕುಮಾರ ಸ್ವಾಮಿಯಿಂದ 1 ಲಕ್ಷ ರೂ. ಮೌಲ್ಯದ ಬಾಂಡ್‌ ಪೇಪರ್‌ ಮತ್ತು ಸ್ಥಳೀಯ ವ್ಯಕ್ತಿಯ ಭದ್ರತೆಯನ್ನು ಜಾಮೀನಿಗೆ ಪಡೆದುಕೊಳ್ಳಲಾಗಿದೆ. ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವವರೆಗೆ ರಿಷಿ ಕುಮಾರ ಸ್ವಾಮಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ 1 ಗಂಟೆ ಅವಧಿಯಲ್ಲಿ ಶ್ರೀರಂಗ ಪಟ್ಟಣಕ್ಕೆ ಆಗಮಿಸಿ ಠಾಣೆಯಲ್ಲಿ ಸಹಿ ಹಾಕುವಂತೆ ಷರತ್ತು ವಿಧಿಸಲಾಗಿದೆ.


from India & World News in Kannada | VK Polls https://ift.tt/3KrGyaT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...