ಹಲ್ಲೆ, ಜಾತಿ ನಿಂದನೆ ಆರೋಪ: ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಐವರ ವಿರುದ್ಧ ಕೇಸ್‌..!

: ತಾಲೂಕಿನ ಮುಗದ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ಹುದ್ದೆಯ ವಿಚಾರವಾಗಿ ಸಂಸ್ಥೆಯ ನಾಲ್ವರು ಸೇರಿ ವ್ಯಕ್ತಿಯೊಬ್ಬನ ಮೇಲೆ , ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ವಿಧಾನ ಪರಿಷತ್‌ ಬಸವರಾಜ ಹೊರಟ್ಟಿ 5ನೇ ಆರೋಪಿ ಎಂಬುದು ಚರ್ಚಾ ವಸ್ತುವಾಗಿದೆ..! ಅಣ್ಣಿಗೇರಿ ತಾಲೂಕಿನ ಕೊಂಡಿ ಕೊಪ್ಪದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಧಾರವಾಡ ಜಿಲ್ಲಾ ಅಧ್ಯಕ್ಷ ಮೋಹನ ಗುಡಸಲಮನಿ ಎಂಬುವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಘಟನೆ ವೇಳೆ ಆರೋಪಿಗಳಾದ ವೆಂಕಟೇಶ ಲಕ್ಷನಿ, ಚೈತ್ರಾ ಮೇಟಿ, ನಿರ್ಮಲಾ ಚವ್ಹಾಣ, ದೊಡ್ಡಪ್ಪ ಕೆಂಗಣ್ಣವರ ಅವರು ಗುಡಸಲಮನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ವೆಂಕಟೇಶ ಜಾತಿ ನಿಂದನೆ ಮಾಡಿದ್ದಲ್ಲದೆ ಕೊಠಡಿಯಲ್ಲಿ ಕೂಡಿ ಹಾಕಿ ಕಾರನ್ನು ಚಚ್ಚಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಎಲ್ಲ ಬೆಳಣಿಗೆಗಳಿಗೆ ಸಭಾಪತಿ ಹೊರಟ್ಟಿ ಅವರು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನೂ 5ನೇ ಆರೋಪಿಯನ್ನಾಗಿ ದೂರು ದಾಖಲಿಸಲಾಗಿದೆ. ತಾಲೂಕಿನ ಮುಗದ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಗೆ ಮೋಹನ ಗುಡಸಲಮನಿ ಮಂಗಳವಾರ ಹೋಗಿದ್ದರು. ಸಭಾಪತಿ ಹೊರಟ್ಟಿ ಸರ್ವೋದಯ ಶಿಕ್ಷಣ ಸಂಸ್ಥೆಯ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ. ಸಂಸ್ಥೆಯಲ್ಲಿ ಅಳವಡಿಸಿರುವ ಅವರ ನಾಮಫಲಕ ತೆಗೆದು ಹಾಕುವಂತೆ ಕೇಳಿದಾಗ, ಸಿಟ್ಟಿಗೆದ್ದ ನಾಲ್ವರು ಆರೋಪಿಗಳು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದಾಗ ಇರಲಿಲ್ಲ: ಹೊರಟ್ಟಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಹೊರಟ್ಟಿ, 'ಘಟನೆ ನಡೆದಾಗ ನಾನು ಅಲ್ಲಿಇರಲೇ ಇಲ್ಲ. ಮಂಗಳವಾರ ನಾನು ಪೊಲೀಸ್‌ ಎಸ್ಕಾಟ್‌ನಲ್ಲಿಯೇ ಬೆಂಗಳೂರಿಗೆ ಹೋಗಿದ್ದೇನೆ. ಹೀಗಿದ್ದಾಗಿಯೂ ನನ್ನ ಮೇಲೆ ಕೇಸ್‌ ದಾಖಲು ಮಾಡಲಾಗಿದೆ. ಒಬ್ಬ ಸಭಾಪತಿ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಿಸಿ ಕಿರುಕುಳ ನೀಡಲಾಗಿದೆ. ಇನ್ನು ಜನ ಸಾಮಾನ್ಯರ ಸ್ಥಿತಿ ಏನು? ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದಿದ್ದೇನೆ. ಘಟನೆ ನನಗೆ ನೋವು ತರಿಸಿದೆ' ಎಂದು ಹೇಳಿದರು. ಈ ಪ್ರಕರಣ ತೀರ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆದರೆ ಈ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಅವರನ್ನು ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರಕರಣದ ತನಿಖೆ ಎಲ್ಲಿಗೆ ಬಂತು ಎಂಬುದರ ಬಗ್ಗೆಯೂ ಯಾರೂ ಮಾಹಿತಿ ನೀಡುತ್ತಿಲ್ಲ. ಸಾಂವಿಧಾನಿಕ ಬಿಕ್ಕಟ್ಟು ರಾಜ್ಯದಲ್ಲಿ ರಾಜ್ಯಪಾಲರು, ಸಭಾಪತಿ, ಸಭಾಧ್ಯಕ್ಷ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ ಪ್ರಮಾಣ ವಚನ ಬೋಧಿಸುವ ಅಧಿಕಾರ ಇದೆ. ಇವು ಸಾಂವಿಧಾನಿಕ ಹುದ್ದೆಗಳಾಗಿದ್ದರಿಂದ ಇಲ್ಲಿ ಸಭಾಪತಿ ಸೇರಿದಂತೆ ಈ ನಾಲ್ವರ ಮೇಲೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗೆ ಮಾಡಬೇಕೆಂದಲ್ಲಿ ಕೆಲ ನಿಯಮಗಳನ್ನು ಪಾಲಿಸಬೇಕು. ಆದರೆ, ಇದಾವುದನ್ನು ಯೋಚಿಸದೇ ಪರಿಷತ್‌ ಸಭಾಪತಿ ಮೇಲೆ ಪ್ರಕರಣ ದಾಖಲಿಸಿರುವುದು ಪೊಲೀಸರ ಕಾರ್ಯ ವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಜಾತಿ ನಿಂದನೆ ಪ್ರಕರಣ ದಾಖಲಾದಾಗ ಆರೋಪಿಗಳನ್ನು ತನಿಖಾಧಿಕಾರಿ ವಿವೇಚನೆಯ ಮೇಲೆ ಬಂಧಿಸಬಹುದು. ಇದು ಅನಿವಾರ್ಯ ಆದಲ್ಲಿ ಸಭಾಪತಿಗಳನ್ನು ಬಂಧಿಸಬಹುದೇ ಎಂಬುದರ ಬಗ್ಗೆ ಪೊಲೀಸರಿಗೆ ಅರಿವಿಲ್ಲದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


from India & World News in Kannada | VK Polls https://ift.tt/33UnJwL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...