1.67 ಕೋಟಿ ರೂ. ರಾಜಸ್ವ ಹಣ ವಂಚಿಸಿದ್ದ ಚಿತ್ರದುರ್ಗದ ಸ್ಟಾಂಪ್‌ ವೆಂಡರ್‌ ಬಂಧನ

: ಉಪ ನೋಂದಣಿ ಕಚೇರಿಗೆ ಬರೋಬ್ಬರಿ 1.67 ಕೋಟಿಗೂ ಹೆಚ್ಚು ರಾಜಸ್ವ ಹಣ ವಂಚಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ದಾಸ್ತಾವೇಜು ಬರಹಗಾರ (ಸ್ಟಾಂಪ್‌ ವೆಂಡರ್‌) ಸಿ. ಮಂಜುನಾಥ ಯಾದವ್‌ ಬಂಧಿತ ಆರೋಪಿ. ಜಿಲ್ಲಾ ನೋಂದಣಾಧಿಕಾರಿ ರವೀಂದ್ರ ಪೂಜಾರ್‌ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಚಿತ್ರದುರ್ಗ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ 194 ದಾಸ್ತಾವೇಜುಗಳ ಸರಕಾರಕ್ಕೆ ಶುಲ್ಕ ಪಾವತಿಗೆ ಸಂಬಂಧಿಸಿದಂತೆ 2020 ಅಕ್ಟೋಬರ್‌ 28 ರಿಂದ 2021 ಆಗಸ್ಟ್‌ 31 ರವರೆಗಿನ ಅವಧಿಯಲ್ಲಿ ದಾಸ್ತಾವೇಜನ್ನು ಆರೋಪಿ ಮೋಸ ಮಾಡಿದ್ದಾನೆ. ಈತ ಸಹಿ ಮಾಡಿರುವ ಎಲ್ಲ ದಾಸ್ತಾವೇಜುಗಳನ್ನು ಕಾನೂನು ಬಾಹಿರವಾಗಿ ಸರಕಾರಿ ದಾಖಲೆಗಳಾದ ಕೆ2 ಚಲನ್‌ಗಳನ್ನು ತಿದ್ದು ಕೊಟ್ಟಿದ್ದಲ್ಲದೇ, ಕೆ2 ಚಲನ್‌ಗಳನ್ನು ಈತನೇ ಸೃಷ್ಟಿಸಿದ್ದಾನೆ. ನಂತರ ತನ್ನ ಚಿತ್ರದುರ್ಗದ ಆಕ್ಸಿಸ್‌ ಮತ್ತು ಐಸಿಐಸಿಐ ಬ್ಯಾಂಕ್‌ ಶಾಖೆಗಳ ಖಾತೆಯಿಂದ ದಾಸ್ತಾವೇಜುಗಳ ಮೌಲ್ಯಕ್ಕೆ ಅನುಗುಣವಾಗಿ ಸರಕಾರಿ ಶುಲ್ಕವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಇ - ಪೇಮೆಂಟ್‌ ಮೂಲಕ ಕಡಿಮೆ ಶುಲ್ಕದಲ್ಲಿ ಪಾವತಿಸಿದ್ದಾನೆ. ಅಲ್ಲದೇ ಸರಿಯಾದ ಶುಲ್ಕ ಪಾವತಿಸಿರುವಂತೆ ಕೆ - 2 ಚಲನ್‌ ತಿದ್ದಿ ಸರಕಾರಕ್ಕೆ 1.67.71.170 ರೂ.ನಷ್ಟು ರಾಜಸ್ವ ವಂಚಿಸಿದ್ದಾನೆ. ಕರ್ನಾಟಕ ಮುದ್ರಾಂಕ ಕಾಯ್ದೆ 1957 ಹಾಗೂ ಕಲಂ 83 ಭಾರತೀಯ ನೋಂದಣಿ ಕಾಯ್ದೆ 1908 ರೀತ್ಯಾ ಪ್ರಕರಣ ದಾಖಲಿಸಿದ್ದು, ಚಿತ್ರದುರ್ಗ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕ ಎಸ್‌.ಪಾಂಡುರಂಗ ತನಿಖೆ ಕೈಗೊಂಡಿದ್ದಾರೆ. ಜಾಮೀನು ಸಿಗದೇ ಪೊಲೀಸರಿಗೆ ಶರಣಾದ ಆರೋಪಿ: ಆರೋಪಿಯು ತನ್ನ ಮೇಲೆ ಪ್ರಕರಣ ದಾಖಲಾದ ಮಾಹಿತಿ ತಿಳಿದ ಕೂಡಲೇ ತಲೆ ಮರೆಸಿಕೊಂಡಿದ್ದ. ಅಲ್ಲದೇ ಚಿತ್ರದುರ್ಗ ನ್ಯಾಯಾಲಯ ಮತ್ತು ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಎರಡೂ ನ್ಯಾಯಾಲಯದಲ್ಲಿ ಜಾಮೀನು ಸಿಗದೆ ಇದ್ದಾಗ ಜನವರಿ 11 ರಂದು ನ್ಯಾಯಾಲಯಕ್ಕೆ ಶರಣಾಗತಿಯಾಗಿದ್ದಾನೆ. ಜನವರಿ 14 ರಂದು ನ್ಯಾಯಾಲಯದಿಂದ ಪೊಲೀಸ್‌ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿ ಸದರಿ ಆರೋಪಿ ಕಡೆಯಿಂದ 1 ಲ್ಯಾಪ್‌ ಟಾಪ್‌, 1 ಸಿಪಿಯು, 1 ಮೊಬೈಲ್‌ ಹಾಗೂ ಹೆಚ್ಚಿನ ತನಿಖೆಗಾಗಿ ಚಿತ್ರದುರ್ಗ ಜಿಲ್ಲಾ ಉಪ ನೋಂದಣಾಧಿಕಾರಿ ಕಚೇರಿಯ 3 ಸಿಪಿಯುಗಳನ್ನು ಕೂಡ ಜಪ್ತಿ ಮಾಡಲಾಗಿದೆ. ಇದೀಗ ಜಪ್ತಿ ಮಾಡಲಾಗಿರುವ ಯಂತ್ರೋಪಕರಣಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ ಕೇಂದ್ರಕ್ಕೆ ಕಳುಹಿಸಲಾಗಿದ್ದು ತನಿಖೆ ಮುಂದುವರೆದಿದೆ.


from India & World News in Kannada | VK Polls https://ift.tt/3GDcYNa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...