ಬನ್ನೇರುಘಟ್ಟ ರೋಡ್ ನಮ್ಮ ಮೆಟ್ರೋ ಕಾಮಗಾರಿ ವಿಳಂಬ: ವಾಹನ ಸವಾರರ ಪರದಾಟ..

: ಬನ್ನೇರುಘಟ್ಟ ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದರೂ ಯಾವುದೇ ಪ್ರಗತಿ ಆಗಿಲ್ಲಎಂದು ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ದೂರಿದ್ದಾರೆ. ಮೆಟ್ರೋ ಕಾಮಗಾರಿಯಿಂದಾಗಿ ದಟ್ಟಣೆ ಹೆಚ್ಚಾಗಿ ಪ್ರತಿನಿತ್ಯ ಈ ಮಾರ್ಗದಲ್ಲಿಸಂಚರಿಸುವ ಸವಾರರು ಹೈರಾಣಾಗಿದ್ದಾರೆ. ನಮ್ಮ ಮೆಟ್ರೋ ಡೈರಿ ಸರ್ಕಲ್‌ - ಕಾಳೇನ ಅಗ್ರಹಾರ ನಡುವಿನ 7.5 ಕಿ. ಮೀ. ಉದ್ದದ ಗುಲಾಬಿ ಮಾರ್ಗದಲ್ಲಿ ಶೇ.37ರಷ್ಟು ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) 2021ರ ಮಾರ್ಚ್‌ನಲ್ಲಿ ಹೊರಡಿಸಿದ್ದ ಪತ್ರದಲ್ಲಿ ತಿಳಿಸಿದೆ. 2021ರ ನವೆಂಬರ್‌ನಲ್ಲಿ ಹೊರಡಿಸಿದ್ದ ಪತ್ರದಲ್ಲಿ ಶೇ.39ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದೆ. ಆದರೆ 2021ರ ಡಿಸೆಂಬರ್‌ನಲ್ಲಿ ಹೊರಡಿಸಿದ್ದ ನೂತನ ಪತ್ರದಲ್ಲಿ ಶೇ.30ರಷ್ಟು ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದೆ. 2017ರ ಸೆಪ್ಟೆಂಬರ್‌ನಲ್ಲಿ ಬನ್ನೇರುಘಟ್ಟ ರಸ್ತೆ ಕಾಮಗಾರಿಗಾಗಿ ಕೋಲ್ಕೊತ್ತಾ ಮೂಲದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್ಸ್ ಸಂಸ್ಥೆಗೆ 579 ಕೋಟಿ ರೂ. ಮೊತ್ತದ ಗುತ್ತಿಗೆಯನ್ನು ಬಿಎಂಆರ್‌ಸಿಎಲ್‌ ನೀಡಿತ್ತು. ಆದರೆ ಕಾಮಗಾರಿಯಲ್ಲಿ ನಿಧಾನಗತಿಯ ಪ್ರಗತಿಯಿಂದಾಗಿ 2021ರ ಜನವರಿಯಲ್ಲಿ ಅದರ ಗುತ್ತಿಗೆಯನ್ನು ಬಿಎಂಆರ್‌ಸಿಎಲ್‌ ರದ್ದುಗೊಳಿಸಿತು. 2021ರ ಆಗಸ್ಟ್‌ನಲ್ಲಿ ಬಾಕಿ ಉಳಿದಿರುವ ಕಾಮಗಾರಿಯ ಗುತ್ತಿಗೆಯನ್ನು ಉದಯಪುರ ಮೂಲದ ಜಿಆರ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ (ಜಿಆರ್‌ಐಎಲ್‌)ಗೆ 365 ಕೋಟಿ ರೂ. ಮೊತ್ತದ ಗುತ್ತಿಗೆ ನೀಡಿತು. ಜಿಆರ್‌ಐಎಲ್‌ ಸಂಸ್ಥೆಗೆ ಮೆಟ್ರೋ ಯೋಜನೆಗಳಲ್ಲಿ ಕೆಲಸ ಮಾಡಿರುವ ಯಾವುದೇ ಪೂರ್ವ ಅನುಭವ ಇಲ್ಲ. ಆದ್ದರಿಂದ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಸಜ್ಜುಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಅರೆಕೆರೆ ಬಳಿ ಜಿಆರ್‌ಐಎಲ್‌ ಕಾಮಗಾರಿ ಪ್ರಾರಂಭಿಸಿತು. ಬನ್ನೇರುಘಟ್ಟ ರಸ್ತೆಯಲ್ಲಿ ಐದು ಮೆಟ್ರೋ ನಿಲ್ದಾಣಗಳು ಬರಲಿವೆ. 'ಡೈರಿ ಸರ್ಕಲ್‌ - ಕಾಳೇನ ಅಗ್ರಹಾರ ನಡುವಿನ ಮೆಟ್ರೋ ಕಾರಿಡಾರ್‌, 2014ರಲ್ಲಿ ಅನುಮೋದನೆಯಾದ ಮೆಟ್ರೋ ಎರಡನೇ ಹಂತದ ಭಾಗವಾಗಿದೆ. ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್ಸ್ ಸಂಸ್ಥೆಯು 2019ರಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ನಿಗದಿತ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅದು ವಿಫಲವಾಯಿತು. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ನಿಧಾನಗತಿಯ ಕಾಮಗಾರಿಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರರು ನರಕಯಾತನೆ ಅನುಭವಿಸುತ್ತಿದ್ದಾರೆ' ಎಂದು ವಾಹನ ಸವಾರ ರಾಮ್‌ ಕುಮಾರ್‌ ದೂರಿದರು. 'ಹಬ್ಬದ ಸಮಯದಲ್ಲಿ ಅನೇಕ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದ ಪರಿಣಾಮ ಕಾಮಗಾರಿಯಲ್ಲಿ ಸ್ವಲ್ಪ ವಿಳಂಬವಾಯಿತು. ಆದರೆ ಕಾಮಗಾರಿ ಈಗ ವೇಗ ಪಡೆದುಕೊಂಡಿದೆ. 2024ರ ವೇಳೆಗೆ ಮೆಟ್ರೋ ಗುಲಾಬಿ ಮಾರ್ಗ ಸಂಪೂರ್ಣ ಸಿದ್ಧವಾಗಲಿದೆ' ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಹೇಳಿದರು.


from India & World News in Kannada | VK Polls https://ift.tt/3qNz4HA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...