ಕೇಂದ್ರ ಬಜೆಟ್‌ನತ್ತ ಕಲಬುರಗಿ ಜನರ ಚಿತ್ತ; ಹೊಸ ಯೋಜನೆ ಘೋಷಣೆಯಾಗಲಿ ಎಂಬ ನಿರೀಕ್ಷೆ

ವೆಂಕಟೇಶ ಏಗನೂರು ಕಲಬುರಗಿ: ಕೇಂದ್ರ ಸರಕಾರ ಮಂಗಳವಾರ (ಇಂದು) ಬಜೆಟ್‌ ಮಂಡಿಸಲಿದ್ದು, ಅದರಲ್ಲೂ ಜಿಲ್ಲೆಗೆ ಹೊಸ ಯೋಜನೆಗಳು ಸಿಗಬಹುದಾ ಎಂಬ ನಿರೀಕ್ಷೆಗಳು ಗರಿಗೆದರಿವೆ. ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಗೆ ನಿರೀಕ್ಷೆಯಂತೆಯೇ ಹಲವು ಯೋಜನೆಗಳನ್ನು ಕೇಂದ್ರ ಸರಕಾರದಿಂದ ನಿರೀಕ್ಷೆ ಮಾಡಲಾಗಿದೆ. ಜಿಲ್ಲೆಗೆ ಮಂಜೂರಾದ ಯೋಜನೆಗಳು ಕಳೆದುಕೊಳ್ಳುತ್ತಿರುವ ಮಧ್ಯೆಯೂ ಕೇಂದ್ರ ಈ ಬಾರಿ ಹೊಸ ಯೋಜನೆಗಳನ್ನು ಘೋಷಿಸಲಿದೆಯಾ ಅಥವಾ ಅನುದಾನ ಏನಾದರೂ ಹರಿಸಲಿದ್ದಾರಾ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಬಜೆಟ್‌ ಲೆಕ್ಕದ ಮೇಲೆ ಜಿಲ್ಲೆಯ ಜನರ ಚಿತ್ತವಿದ್ದು, ಜಿಲ್ಲೆಗೆ ಏನು ಸಿಗಲಿದೆ ಎಂಬ ಲೆಕ್ಕಾಚಾರದ ಚರ್ಚೆಯಲ್ಲಿ ತೊಡಗಿದ್ದಾರೆ. ನಿಮ್ಸ್‌ಗೆ ದೊರೆಯುವುದೇ ಚಾಲನೆ: ಅಂದಿನ ಯುಪಿಎ ಸರಕಾರ 2014ರಲ್ಲಿ ಜಿಲ್ಲೆಗೆ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಸ್‌)ವನ್ನು ಘೋಷಿಸಲಾಗಿತ್ತು. ಆದರೆ, ಈ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಈ ಯೋಜನೆಗೆ ಕೇಂದ್ರ ಅನುದಾನ ಘೋಷಿಸಿ ಚಾಲನೆ ನೀಡಬೇಕಾದ ಅನಿವಾರ್ಯತೆಯಿದ್ದು, ಈ ಬಾರಿ ಈ ಯೋಜನೆಯತ್ತ ಸರಕಾರ ಗಮನ ಹರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವೂ ಆಗಿದೆ. ಘೋಷಣೆಯಾಗಲಿ ಏಮ್ಸ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ರಾಜ್ಯಕ್ಕೆ ಒಂದು ಏಮ್ಸ್‌ ನೀಡುತ್ತೇವೆ ಎಂದು ಈ ಹಿಂದೆ ಘೋಷಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲಿಯೂ ಕಲಬುರಗಿ ಏಮ್ಸ್‌ಗೆ ಸೂಕ್ತ ಎಂದು ಘೋಷಿಸಿದ್ದರು. ಕಲಬುರಗಿಯಲ್ಲಿ ಇರುವ ಇಎಸ್‌ಐಸಿ ಆಸ್ಪತ್ರೆ 1,400 ಕೋಟಿ ರೂ.ಯಲ್ಲಿ ನಿರ್ಮಾಣಗೊಂಡಿದ್ದು, ಇದರಲ್ಲಿ ಕೇವಲ ಶೇ 12ರಷ್ಟು ಮಾತ್ರ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಮ್ಸ್‌ ಘೋಷಣೆಯಾದರೆ ಜಿಲ್ಲೆ ಮೆಡಿಕಲ್‌ ಹಬ್‌ ಆಗಿ ಪರಿವರ್ತನೆಯಾಗಿ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ.


from India & World News in Kannada | VK Polls https://ift.tt/skyePB4zg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...