ಮುಂಬೈ ವಿರುದ್ಧ 5 ರನ್‌ಗಳ ರೋಚಕ ಜಯ ದಾಖಲಿಸಿದ ಎಲ್‌ಎಸ್‌ಜಿ!

Lucknow Super Giants (LSG) vs Mumbai Indians (MI) Highlights: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯು ಇದೀಗ ಕ್ಲೈ ಮ್ಯಾಕ್ಸ್‌ ಹಂತದಲ್ಲಿದೆ. ಪ್ಲೇ ಆಫ್ ಸಲುವಾಗಿ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್‌ ಎದುರು ರೋಚಕ ಜಯ ದಾಖಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಪ್ಲೇ ಆಫ್‌ ಹಂತಕ್ಕೆ ಮತ್ತೊಂದು ಹೆಜ್ಜೆ ಹತ್ತಿರವಾಗಿದೆ. ಅಂಕಪಟ್ಟಿಯಲ್ಲಿ ಸ್ಥಾನ ಪಲ್ಲಟವಾಗಿದ್ದು, ಎಲ್‌ಎಸ್‌ಜಿ 3ನೇ ಸ್ಥಾನಕ್ಕೇರಿದರೆ ಮುಂಬೈ ಇಂಡಿಯನ್ಸ್‌ 4ನೇ ಸ್ಥಾನಕ್ಕೆ ಕಾರಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4MacZdu

GT vs SRH: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಭುವನೇಶ್ವರ್‌ ಕುಮಾರ್‌!

Bhuvneshwar Kumar takes 5 wicket haul: ಗುಜರಾತ್‌ ಟೈಟನ್ಸ್ ವಿರುದ್ಧ 5 ವಿಕೆಟ್‌ ಸಾಧನೆ ಮಾಡಿದ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್‌ ತಂಡ 34 ರನ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದ ಸೋಲಿನ ಮೂಲಕ ಏಡೆನ್‌ ಮಾರ್ಕ್ರಮ್‌ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್‌ ತಂಡ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಾಕ್‌ಔಟ್‌ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು. ಅಂದಹಾಗೆ 5 ವಿಕೆಟ್‌ ಸಾಧನೆ ಮಾಡಿದ ಭುವನೇಶ್ವರ್‌ ಕುಮಾರ್‌ ಹದಿನಾರನೇ ಆವೃತ್ತಿಯಲ್ಲಿ ವಿಶೇಷ ದಾಖಲೆ ಬರೆದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/JvTF61f

ಪ್ಲೇ-ಆಫ್ಸ್‌ಗೆ ಅಧಿಕೃತವಾಗಿ ಕಾಲಿಟ್ಟ ಗುಜರಾತ್‌ ಟೈಟನ್ಸ್‌, ಎಸ್‌ಆರ್‌ಎಚ್ ಔಟ್‌!

Gujarat Titans Trash Sunrisers Hyderabad: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡಿಫೆಂಡಿಂಗ್‌ ಚಾಂಪಿಯನ್ಸ್‌ ಗುಜರಾತ್‌ ಟೈಟನ್ಸ್‌ ತಂಡ ಪ್ಲೇ-ಆಫ್ಸ್‌ಗೆ ಅರ್ಹತೆ ಪಡೆದ ಮೊತ್ತ ಮೊದಲ ತಂಡ ಎನಿಸಿಕೊಂಡಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರವಾಸಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 34 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಟ್ಟಾರೆ 18 ಅಂಕಗಳನ್ನು ತನ್ನದಾಗಿಸಿಕೊಂಡು ಅಗ್ರಸ್ಥಾನ ಖಾತ್ರಿ ಪಡಿಸಿಕೊಳ್ಳುವುದರೊಂದಿಗೆ ಪ್ಲೇ-ಆಫ್ಸ್‌ಗೆ ಪ್ರವೇಶಿಸಿದೆ. ಸನ್‌ರೈಸರ್ಸ್‌ ಸ್ಪರ್ಧೆಯಿಂದ ಹೊರಬಿದ್ದಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3pQDsC4

ಡಿ.ಕೆ ಕೆರಿಯರ್ ಮುಗಿಸಿದ್ದಾರೆ, ಯುವ ಕೀಪರ್‌ ಅನುಜ್ ರಾವತ್‌ ಆಟಕ್ಕೆ ಫ್ಯಾನ್ಸ್ ಫಿದಾ!

Fans heap praise on Anuj Rawat: ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ (ಮೇ 14) ನಡೆದ ಪಂದ್ಯದಲ್ಲಿ ಆರ್‌ಸಿಬಿ ಹೊರತಂದ ಸಂಘಟಿತ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್ ಗಳ ಭರ್ಜರಿ ಗೆಲುವು ದಕ್ಕಿಸಿಕೊಂಡಿದೆ. ಪಂದ್ಯದಲ್ಲಿ ತಮ್ಮ ಸ್ಫೋಟಕ ಪ್ರದರ್ಶನದಿಂದ 11 ಎಸೆತಗಳಲ್ಲೇ 29* ರನ್ ಸಿಡಿಸಿ ವಿಕೆಟ್ ಕೀಪರ್ ರೂಪದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಅಮೋಘವಾಗಿ ರನೌಟ್ ಮಾಡಿದ ಯುವ ಆಟಗಾರ ಅನುಜ್ ರಾವತ್ ಅವರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/XYjgRFM

59ಕ್ಕೆ ಆಲ್‌ಔಟ್‌, ಹೀನಾಯ ಸೋಲಿನಿಂದ ಮಾತೇ ಬರುತ್ತಿಲ್ಲ ಎಂದ ಸಂಜು ಸ್ಯಾಮ್ಸನ್‌!

Sanju Samson on RR Loss Agaisnt RCB: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲ ಐದು ಪಂದ್ಯಗಳಲ್ಲಿ ಅಧಿಕಾರಯುತ ಪ್ರದರ್ಶನ ನೀಡಿ ಪ್ಲೇ-ಆಫ್ಸ್‌ ತಲುಪುವ ಫೇವರಿಟ್‌ ತಂಡವಾಗಿದ್ದ ಕಳೆದ ಬಾರಿಯ ರನ್ನರ್ಸ್‌-ಅಪ್‌ ರಾಜಸ್ಥಾನ್‌ ರಾಯಲ್ಸ್‌, ನಂತರದ ಪಂದ್ಯಗಳಲ್ಲಿ ಸಾಲು ಸಾಲು ವೈಫಲ್ಯದ ಪರಿಣಾಮ ಸ್ಪರ್ಧೆಯಿಂದ ಹೊರಬೀಳುವ ಸ್ಥಿತಿಗೆ ತಲುಪಿದೆ. ಅದರಲ್ಲೂ ಭಾನುವಾರ (ಮೇ 14) ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಎದುರು 112 ರನ್‌ಗಳಿಂದ ಸೋತು, ಸಂಕಷ್ಟ ಮೈಮೇಲೆ ಎಳೆದುಕೊಂಡಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/HVMWieR

IPL 2023: ಸೂರ್ಯ ಬದಲಿಗೆ ರಶೀದ್‌ ಖಾನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತೆಂದ ಫ್ಯಾನ್ಸ್‌!

Fans praise Rashid Khan: ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್‌ ಟೈಟನ್ಸ್ ಸೋಲು ಅನುಭವಿಸಿದ ಹೊರತಾಗಿಯೂ 4 ವಿಕೆಟ್‌ ಹಾಗೂ 79 ರನ್‌ ಸಿಡಿಸಿದ ರಶೀದ್‌ ಖಾನ್ ಆಲ್‌ರೌಂಡ್‌ ಆಟಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 219 ರನ್‌ ಗುರಿ ಹಿಂಬಾಲಿಸಿದ ಗುಜರಾತ್‌ ಟೈಟನ್ಸ್ ಪರ ಕೆಳ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ರಶೀದ್‌ ಖಾನ್‌ ಕೇವಲ 32 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 79 ಸಿಡಿಸಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/z4EstnI

ಸೂರ್ಯ ಶತಕದ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ 27 ರನ್‌ಗಳ ಭರ್ಜರಿ ಜಯ!

Mumbai Indians Beat Gujarat Titans: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಪ್ಲೇ-ಆಫ್ಸ್‌ ಹಂತಕ್ಕೆ ಒಂದು ಹೆಜ್ಜೆ ಹತ್ತಿರವಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 12) ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ರೋಹಿತ್‌ ಶರ್ಮಾ ಬಳಗ ಹಾರ್ದಿಕ್ ಪಾಂಡ್ಯ ಪಡೆಯ ಎದುರು 27 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಸೂರ್ಯಕುಮಾರ್‌ ಯಾದವ್‌ ಶತಕ ಬಾರಿಸಿ ಮುಂಬೈ ಗೆಲುವಿನ ರೂವಾರಿ ಎನಿಸಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/NL9E8z0

IPL 2023: 'ಯುಜ್ವೇಂದ್ರ ಚಹಲ್ ಪ್ರದರ್ಶನ ಹೇಗಿದೆ?'-ಆರ್‌ಸಿಬಿಯನ್ನು ಟ್ರೋಲ್‌ ಮಾಡಿದ ಫ್ಯಾನ್ಸ್!

Fans react as Yuzvendra Chahals IPL record: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಸಂಯೋಜನೆ ತೋರಿದ ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (25 ಕ್ಕೆ 4) ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 186 ವಿಕೆಟ್ ಪಡೆದಿರುವ ಯುಜಿ ಸಾಧನೆಯನ್ನು ಕೊಂಡಾಡಿರುವ ಅಭಿಮಾನಿಗಳು, 2022ರ ಮೆಗಾ ಹರಾಜಿನಲ್ಲಿ ಕೈ ಬಿಟ್ಟಿದ್ದ ಬೆಂಗಳೂರು ಫ್ರಾಂಚೈಸಿಯನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ. ಟೂರ್ನಿಯಲ್ಲಿ ಅತಿ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/PlDZMwX

ಡ್ವೇನ್ ಬ್ರಾವೋಗೆ ಸಡ್ಡು ಹೊಡೆದು ಇತಿಹಾಸ ನಿರ್ಮಿಸಿದ ಯುಜ್ವೇಂದ್ರ ಚಹಲ್‌!

Yuzvendra Chahal Becomes Leading Wicket-Taker in IPL: ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ ದಿಗ್ಗಜ ಯುಜ್ವೇಂದ್ರ ಚಹಲ್ (25 ಕ್ಕೆ4) ನಾಲ್ಕು ವಿಕೆಟ್‌ ಪಡೆಯುವ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಚಹಲ್ ಒಟ್ಟಾರೆ 186 ವಿಕೆಟ್ ಕಬಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ನ ಮಾಜಿ ವೇಗಿ ಡ್ವೇನ್ ಬ್ರಾವೋ ಹೆಸರಿನಲ್ಲಿದ್ದ ದಾಖಲೆ ಮುರಿದು ಗಮನ ಸೆಳೆದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OhB4CuP

ಇಶಾನ್ ಕಿಶನ್, ಕೆ.ಎಸ್ ಭರತ್ ಬದಲಿಗೆ ಹಿರಿಯ ಕೀಪರ್‌ಗೆ ಸ್ಥಾನ ನೀಡಬೇಕಿತ್ತು ಎಂದ ಅನಿಲ್ ಕುಂಬ್ಳೆ!

Anil Kumble On Wriddhiman Saha's Omission: ಇಂಗ್ಲೆಂಡ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ಜೂ. 7 ರಿಂದ 11ರವರೆಗೂ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ಆಯೋಜನೆಯ 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟ್ರೋಫಿಗಾಗಿ ಟೀಮ್ ಇಂಡಿಯಾ ಕಾದಾಟ ನಡೆಸಲಿದೆ. ಫೈನಲ್ ಪಂದ್ಯದ ಸಲುವಾಗಿ ಬಿಸಿಸಿಐ ತಂಡವನ್ನು ಘೋಷಿಸಿದ್ದು, ವಿಕೆಟ್ ಕೀಪರ್ ರೂಪದಲ್ಲಿ ಕೆ.ಎಸ್ ಭರತ್ ಹಾಗೂ ಇಶಾನ್ ಕಿಶನ್‌ಗೆ ಸ್ಥಾನ ಕಲ್ಪಿಸಿದೆ. ಆದರೆ ಇವರಿಬ್ಬರ ಬದಲಿಗೆ ಹಿರಿಯ ಅನುಭವಿ ವೃದ್ಧಿಮಾನ್ ಸಹಾಗೆ ಸ್ಥಾನ ನೀಡಬೇಕಿತ್ತೆಂದು ಅನಿಲ್ ಕುಂಬ್ಳೆ ಆಗ್ರಹಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/KwgIG8N

ತಮ್ಮ ಪುತ್ರಿಯ ಚೊಚ್ಚಲ ಮತದಾನಕ್ಕೆ ಸಾಥ್ ನೀಡಿದ ಕ್ರಿಕೆಟಿಗ ದೊಡ್ಡ ಗಣೇಶ್‌!

Cricketer Dodda Ganesh cast votes: ಭಾರತ ಹಾಗೂ ಕರ್ನಾಟಕ ಕ್ರಿಕೆಟ್‌ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್‌ ಅವರು ಬುಧವಾರ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಬೆಂಗಳೂರಿನ ರಾಜ ರಾಜೇಶ್ವರಿ ನಗರದ ವಾರ್ಡ್‌ 38ರಲ್ಲಿ ತಮ್ಮ ಪುತ್ರಿ ಶಾಶ್ವತಿ ದೊಡ್ಡ ಗಣೇಶ್‌ ಅವರೊಂದಿಗೆ ದೊಡ್ಡ ಗಣೇಶ್‌ ಮತ ಚಲಾಯಿಸಿದ್ದಾರೆ. ಮಾಜಿ ಆಟಗಾರನ ಪುತ್ರಿಗೆ ಇದು ಚೊಚ್ಚಲ ಮತದಾನವಾಗಿದೆ. ಇದರಿಂದ ದೊಡ್ಡ ಗಣೇಶ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/86suoOU

ಮಿಂಚಿದ ಸೂರ್ಯಕುಮಾರ್‌ ಯಾದವ್‌, ಬೆಚ್ಚಿದ ಆರ್‌ಸಿಬಿ!

MI vs RCB Highlights: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 6ನೇ ಸೋಲುಂಡಿದೆ. ಇದರೊಂದಿಗೆ ಪ್ಲೇ-ಆಫ್ಸ್‌ ತಲುಪಬೇಕಾದರೆ ಆರ್‌ಸಿಬಿ ತಂಡ ತನ್ನ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಸಂಕಷ್ಟಕ್ಕೆ ಆರ್‌ಸಿಬಿ ಸಿಲುಕಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ (ಮೇ 9) ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ (83) ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ರಾಯಲ್‌ ಚಾಲೆಂಜರ್ಸ್‌ ತಂಡಕ್ಕೆ ಸೋಲಿನ ಬರೆ ಎಳೆದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/XUwcft9

ಮುಂಬೈ ಸಮರಕ್ಕೆ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಕನಿಷ್ಠ 1 ಬದಲಾವಣೆ!

MI vs RCB Predicted Playing XI: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ 5 ಮತ್ತು 6ನೇ ಸ್ಥಾನದಲ್ಲಿರುವ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ ( ಮೇ 9) ಸಂಜೆ 7.30 ಕ್ಕೆ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಪ್ಲೇ-ಆಫ್ಸ್ ದೃಷ್ಟಿಯಿಂದ ಇತ್ತಂಡಗಳಿಗೂ ಗೆಲುವು ಮುಖ್ಯವಾಗಿದೆ. ಆರ್‌ಸಿಬಿ ತಂಡ ಮುಂದಿನ 4 ಪಂದ್ಯಗಳಲ್ಲಿ 3 ಜಯ ದಾಖಲಿಸಲೇ ಬೇಕಾದ ಇಕ್ಕಟಿಗೆ ಸಿಲುಕಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/JaXBkpc

RR vs SRH: 'ಇಷ್ಟು ದಿನ ಎಲ್ಲಿದ್ರಿ?'-ಗ್ಲೆನ್ ಫಿಲಿಪ್ಸ್ ಸಿಡಿಲಬ್ಬರದ ಆಟಕ್ಕೆ ಫ್ಯಾನ್ಸ್ ಸಲಾಂ!

Fans go berserk on Glenn Phillips: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ನ್ಯೂಜಿಲೆಂಡ್‌ ಆಟಗಾರ ಗ್ಲೆನ್‌ ಫಿಲಿಪ್ಸ್‌ ಸನ್‌ರೈಸರ್ಸ್ ಹೈದರಾಬಾದ್‌ಗೆ 4 ವಿಕೆಟ್‌ ಭರ್ಜರಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಕುಲ್ದೀಪ್ ಯಾದವ್ ಅವರ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ ಪಂದ್ಯದ ದಿಕ್ಕನ್ನು ಬದಲಿಸಿದ್ದರು. ಅಂತಿಮವಾಗಿ ಕೊನೆಯ ಪಂದ್ಯದಲ್ಲಿ ಎಸ್‌ಆರ್‌ಎಚ್‌ ಗೆಲುವು ಕಸಿದುಕೊಂಡಿತು. ಪಂದ್ಯದ ಬಳಿಕ ಅಭಿಮಾನಿಗಳು ಗ್ಲೆನ್‌ ಫಿಲಿಪ್ಸ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/DAgXwMd

RR vs SRH: ಹೈದರಾಬಾದ್‌ ಎದುರು 4 ವಿಕೆಟ್ ಕಿತ್ತು ವಿಶೇಷ ದಾಖಲೆ ಬರೆದ ಯುಜ್ವೇಂದ್ರ ಚಹಲ್!

Yuzvendra Chahal equals Dwayne Bravo's record: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಮ್ಮ ಸ್ಪಿನ್ ಮೋಡಿಯಿಂದ 4 ವಿಕೆಟ್ ಪಡೆದ ಯುಜ್ವೇಂದ್ರ ಚಹಲ್ ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಒಟ್ಟು 183 ವಿಕೆಟ್ ಪಡೆದಿರುವ ಚಹಲ್, ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಡ್ವೇನ್ ಬ್ರಾವೊ ಅವರ ದಾಖಲೆ ಸರಿಗಟ್ಟಿದ್ದಾರೆ. ಚಹಲ್ ಅವರ ಈ ಪ್ರದರ್ಶನದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/eaHZd23

ರಾಯಲ್ಸ್‌ಗೆ ನೋ-ಬಾಲ್‌ ಟ್ರಬಲ್‌, ರೋಚಕ ಪಂದ್ಯ ಗೆದ್ದ ಸನ್‌ರೈಸರ್ಸ್‌!

SRH Last Ball Win Over RR: ರಾಜಸ್ಥಾನ್ ರಾಯಲ್ಸ್‌ ತಂಡ ತನ್ನದೇ ತಪ್ಪುಗಳಿಗೆ ಭಾರಿ ಬೆಲೆ ತೆತ್ತಿತು. ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 214 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದರೂ ರಾಜಸ್ಥಾನ್ ರಾಯಲ್ಸ್‌ ಗುರಿ ಕಾಯ್ದುಕೊಳ್ಳಲು ವಿಫಲವಾಗಿ 4 ವಿಕೆಟ್‌ಗಳ ಸೋಲುಂಡಿತು. ಇನಿಂಗ್ಸ್‌ನ ಅಂತಿಮ ಎಸೆತ ನೋ-ಬಾಲ್ ಆಗದೇ ಇದ್ದಿದ್ದರೆ ರಾಜಸ್ಥಾನ್ ರಾಯಲ್ಸ್‌ ತಂಡ 5 ರನ್‌ಗಳ ಜಯ ದಕ್ಕಿಸಿಕೊಂಡಿರುತ್ತಿತ್ತು. ಆದರೆ, ನೋ-ಬಾಲ್ ಕಾರಣ ಎಸ್‌ಆರ್‌ಎಚ್‌ಗೆ ಮತ್ತೊಂದು ಅವಕಾಶ ಲಭ್ಯವಾಯಿತು. ಇದರ ಸದ್ಬಳಕೆ ಮಾಡಿದ ಅಬ್ದುಲ್ ಸಮದ್‌ ಸಿಕ್ಸರ್‌ ಬಾರಿಸಿ ಹೈದರಾಬಾದ್‌ಗೆ ಜಯ ತಂದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/IBz2cZb

ರಾಜಸ್ಥಾನ್ ರಾಯಲ್ಸ್‌ ಎದುರು ಸೇಡು ತೀರಿಸಿಕೊಂಡ ಟೈಟನ್ಸ್‌!

Rajasthan Royals vs Gujarat Titans Highlights: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್‌ ಟೈಟನ್ಸ್‌ ತಂಡ ರಾಜಸ್ಥಾನ್‌ ರಾಯಲ್ಸ್‌ ಎದುರು 9 ವಿಕೆಟ್‌ಗಳ ಭರ್ಜರಿ ಜಯ ದಕ್ಕಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ಸಂಜು ಸ್ಯಾಮ್ಸನ್ ಪಡೆ 118 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಗುರಿ ಬೆನ್ನತ್ತಿದ ಗುಜರಾತ್‌ ಟೈಟನ್ಸ್‌ ತಂಡ ಇನ್ನು 6.1 ಓವರ್‌ಗಳು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/clRqmZg

ಪವರ್‌-ಪ್ಲೇ ಓವರ್‌ಗಳಲ್ಲಿ ಶಮಿ ಖದರ್‌!

ಪವರ್‌-ಪ್ಲೇ ಓವರ್‌ಗಳಲ್ಲಿ ಶಮಿ ಖದರ್‌!

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/O1FXB5C

ಸೂರ್ಯ-ಕಿಶನ್‌ ಆರ್ಭಟ, ಪಂಜಾಬ್‌ಗೆ 6 ವಿಕೆಟ್‌ ಸೋಲಿನ ಬರೆಯೆಳೆದ ಮುಂಬೈ ಇಂಡಿಯನ್ಸ್‌

Mumbai Indians vs Punjab Kings Highlights: ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತನ್ನ ಶ್ರೇಷ್ಠ ಲಯಕ್ಕೆ ಮರಳಿದಂತ್ತಿದೆ. ಸತತ ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಮೆಟ್ಟಿನಿಂತಿರುವ ರೋಹಿತ್‌ ಶರ್ಮಾ ಬಳಗ ಅಂಕಪಟ್ಟಿಯಲ್ಲಿ ಈಗ 6ನೇ ಸ್ಥಾನಕ್ಕೇರಿದೆ. ಮೊಹಾಲಿಯ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಟಾರ್‌ ಬ್ಯಾಟರ್‌ಗಳ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನದ ಬಲದಿಂದ ಮುಂಬೈ ಇಂಡಿಯನ್ಸ್‌ 6 ವಿಕೆಟ್‌ಗಳ ಜಯ ಜಯ ತನ್ನದಾಗಿಸಿಕೊಂಡಿತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/K0XArN9

ಕೊನೆಯಲ್ಲಿ ನನಗೆ ನರ್ವಸ್‌ ಆಗಿತ್ತು, ಆದ್ರೆ ಇಶಾಂತ್‌ ನಮ್ಮನ್ನು ಕಾಪಾಡಿದ್ರು: ಡೇವಿಡ್‌ ವಾರ್ನರ್‌!

David Warner on Ishant Sharma's Bowling Performance: ಹಾಲಿ ಚಾಂಪಿಯನ್ಸ್ ಗುಜರಾತ್‌ ಟೈಟನ್ಸ್ ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪರಣಾಮಕಾರಿ ಬೌಲಿಂಗ್‌ ಪ್ರದರ್ಶನದಿಂದ ಕೇವಲ 5 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಇದರ ಶ್ರೇಯ ಕೊನೆಯ ಓವರ್‌ನಲ್ಲಿ ಕೇವಲ 6 ರನ್‌ಗಳಿಗೆ ರಾಹುಲ್‌ ತೆವಾಟಿಯ ಮತ್ತು ಹಾರ್ದಿಕ್‌ ಪಾಂಡ್ಯ ಅವರನ್ನು ನಿಯಂತ್ರಿಸಿದ ಇಶಾಂತ್ ಶರ್ಮಾಗೆ ಸಲ್ಲಬೇಕು. ಪಂದ್ಯ ಮುಗಿದ ಬಳಿಕ ಡೇವಿಡ್‌ ವಾರ್ನರ್‌ ಕೂಡ ಇದೇ ಮಾತನ್ನು ಹೇಳಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/nCbAoVF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...