ಕೊರೊನಾ ಲಸಿಕೆ ಅಭಿಯಾನಕ್ಕೆ 1 ವರ್ಷ: ದೇಶದಲ್ಲಿ 157 ಕೋಟಿ ದಾಟಿದ ವ್ಯಾಕ್ಸಿನೇಷನ್‌: ಪ್ರಧಾನಿ ಶ್ಲಾಘನೆ

: ವಿಶ್ವದಲ್ಲೇ ಅತಿ ದೊಡ್ಡ ಲಸಿಕಾ ಅಭಿಯಾನ ಎಂಬ ಹಿರಿಮೆಗೆ ಪಾತ್ರವಾಗಿರುವ ಭಾರತದ ಕೋವಿಡ್‌-19 ಲಸಿಕಾ ಅಭಿಯಾನಕ್ಕೆ ಒಂದು ವರ್ಷ ಸಂದಿದೆ. ಕೋವಿಡ್‌ ವಿರುದ್ಧ ಹೋರಾಟದಲ್ಲಿ ಪ್ರಮುಖ ಅಸ್ತ್ರವೆಂದೇ ಪರಿಗಣಿಸಲಾಗಿರುವ ಲಸಿಕಾ ಅಭಿಯಾನಕ್ಕೆ 2021ರ ಜನವರಿ 16ರಂದು ಚಾಲನೆ ನೀಡಲಾಗಿತ್ತು. ಒಂದೇ ವರ್ಷದಲ್ಲಿ ದೇಶದ ಸುಮಾರು 90% ಜನರು ಮೊದಲ ಡೋಸ್‌ ಪಡೆದುಕೊಂಡಿದ್ದು, 70% ಅರ್ಹ ವಯಸ್ಕರು ಎರಡನೇ ಡೋಸ್‌ ಸಹ ಪಡೆದಿದ್ದಾರೆ. ಅಭಿಯಾನದ ಯಶಸ್ವಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. , ದಾದಿಯರು, ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. 'ಇಂದು ಲಸಿಕಾ ಅಭಿಯಾನಕ್ಕೆ ಒಂದು ವರ್ಷ ಸಂದಿದೆ. ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ವಂದನೆಗಳು. ಕೋವಿಡ್‌ ವಿರುದ್ಧ ನಮ್ಮ ಹೋರಾಟಕ್ಕೆ ನಮ್ಮ ಲಸಿಕಾ ಅಭಿಯಾನವು ಅತಿ ದೊಡ್ಡ ಶಕ್ತಿಯಾಗಿದೆ. ಜೀವ ಮತ್ತು ಜನ ಜೀವನವನ್ನು ಈ ಅಭಿಯಾನ ಕಾಪಾಡಿದೆ' ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ. ಭಾರತದ ಲಸಿಕಾ ಹಾದಿ * 1,57,13,69,300: ಒಟ್ಟು ಡೋಸ್‌ (90%) * 91,07,15,606: ಮೊದಲ ಡೋಸ್‌ (70%) * 3 ಕೋಟಿಗೂ ಹೆಚ್ಚು ಮಕ್ಕಳಿಗೆ * 65,63,43,245: ಎರಡೂ ಡೋಸ್‌ * 43,10,449: ಬೂಸ್ಟರ್‌ ಡೋಸ್‌ ಕರ್ನಾಟಕ ರಾಜ್ಯದ ವ್ಯಾಕ್ಸಿನ್‌ ಸ್ಥಿತಿಗತಿ * 9,14,66,125: ಮೊದಲ ಡೋಸ್‌ ಪಡೆದವರು * 4,06,03,779: ಎರಡೂ ಡೋಸ್‌ ಪಡೆದವರು ಕರ್ನಾಟಕ ರಾಜ್ಯದಲ್ಲಿ ಭಾನುವಾರ 34,000 + ಕೇಸ್‌ ರಾಜ್ಯದಲ್ಲಿ ಭಾನುವಾರವೂ ಕೋವಿಡ್‌ ಸೋಂಕಿನ ಸ್ಫೋಟ ಮುಂದುವರಿದಿದ್ದು, 24 ಗಂಟೆಯಲ್ಲಿ 34,047 ಹೊಸ ಪ್ರಕರಣಗಳು ವರದಿಯಾಗಿವೆ. 13 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 21 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಸೋಮವಾರ ಸಿಎಂ ಸಭೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಮವಾರದಿಂದ ಅವರು ಭೌತಿಕ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲು ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. 1.47 ಲಕ್ಷ ಮಕ್ಕಳು ಅನಾಥ ಕೋವಿಡ್‌ ಸೋಂಕಿನಿಂದ ಸಾವು ಹಾಗೂ ಇತರ ಕಾರಣಗಳಿಂದಾಗಿ 2020ರ ಏಪ್ರಿಲ್‌ 1 ರಿಂದ ಈವರೆಗೆ ದೇಶದಲ್ಲಿ 1,47,492 ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆಯೋಗ ಈ ಮಾಹಿತಿ ನೀಡಿದೆ. ಈ ಮಕ್ಕಳಲ್ಲಿ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡವರೂ ಸೇರಿದ್ದಾರೆ.


from India & World News in Kannada | VK Polls https://ift.tt/3GEELgj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...