ಕೋವಿಡ್‌ 3ನೇ ಅಲೆಯಲ್ಲಿ ಮಕ್ಕಳು ಸೇಫ್‌! ಏನಂತಾರೆ ಆರೋಗ್ಯ ತಜ್ಞರು?

ಮಹಾಬಲೇಶ್ವರ ಕಲ್ಕಣಿ, ಬೆಂಗಳೂರುಐತಿಚಂಡ ರಮೇಶ್‌ ಉತ್ತಪ್ಪ ಮೈಸೂರು ರಾಜ್ಯದಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಾಗಿನಿಂದ ಯುವಕರು ಹೆಚ್ಚು ಪ್ರಮಾಣದಲ್ಲಿ ಸೋಂಕಿಗೆ ತುತ್ತಾಗುತ್ತಿದ್ದರೆ, ಹಿರಿಯ ನಾಗರಿಕರು ಹೆಚ್ಚು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಆದರೆ, ಮಕ್ಕಳಿಗೆ ಮಾತ್ರ ಸೋಂಕು ಯಾವುದೇ ಗಂಭೀರ ಪರಿಣಾಮ ಬೀರುತ್ತಿಲ್ಲ. ಮೂರನೇ ಅಲೆಯಲ್ಲೂ ಇದು ಮುಂದುವರೆದಿದೆ. ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಮಕ್ಕಳ ಮೇಲೆ ಇದುವರೆಗೆ ಹೆಚ್ಚೇನೂ ಪರಿಣಾಮ ಬೀರಿಲ್ಲ; ಸಾವಿನ ಸಂಖ್ಯೆ ಇಲ್ಲವೇ ಇಲ್ಲ. ಕಳೆದ 25 ದಿನಗಳಲ್ಲಿ 9 ವರ್ಷದೊಳಗಿನವರ ಪೈಕಿ ಒಬ್ಬ ಹಾಗೂ 10 ರಿಂದ 19 ವರ್ಷದೊಳಗಿನವರಲ್ಲಿ 3 ಜನರು ಸೋಂಕಿಗೆ ಬಲಿಯಾಗಿದ್ದಾರೆ. 20 ರಿಂದ 49 ವರ್ಷ ವಯೋಮಾನದ 32 ಜನರು ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ಈ ಅವಧಿಯಲ್ಲಿ 60-69 ವರ್ಷದ 40 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಮಕ್ಕಳಿಗೆ ಸೋಂಕು ತುಸು ಹೆಚ್ಚು 2021ರ ಡಿಸೆಂಬರ್‌ನಲ್ಲಿ 18 ವರ್ಷದೊಳಗಿನ 10.37 ಲಕ್ಷ ಮಕ್ಕಳಿಗೆ ಕೋವಿಡ್‌ ಪರೀಕ್ಷೆ ನಡೆಸಿದಾಗ 2,238 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದವು. 2022ರ ಜನವರಿ 17ರವರೆಗೆ 7.64 ಲಕ್ಷ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 43,463 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಡಿಸೆಂಬರ್‌ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಸೋಂಕಿನ ಪ್ರಮಾಣ ಅಧಿಕವಾಗಿದೆ. ಆದರೆ ಯಾರಲ್ಲೂ ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಂಡಿಲ್ಲ. 50 ವರ್ಷ ಮೇಲ್ಪಟ್ಟವರಲ್ಲಿ ಸಾವು ಅಧಿಕ ರಾಜ್ಯಾದ್ಯಂತ 2021ರಿಂದ ಡಿ.25ರಿಂದ 2022ರ ಜ.19ರ ಅವಧಿಯಲ್ಲಿ 3.24 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 247 ಜನರು ಸೋಂಕಿನಿಂದ ಉಸಿರು ಚೆಲ್ಲಿದ್ದಾರೆ. ಈ ಪೈಕಿ 41 ಜನ 49 ವರ್ಷ ದೊಳಗಿನವರು ಸೋಂಕಿಗೆ ಬಲಿಯಾದರೆ, 50 ವರ್ಷ ಮೇಲ್ಪಟ್ಟ 206 ಮಂದಿ ಮೃತರಾಗಿದ್ದಾರೆ. 2022ರ ಜ.13ರವರೆಗೆ 49 ವರ್ಷದೊಳಗಿನ 27.01 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದರೆ, 50 ವರ್ಷ ಮೇಲ್ಪಟ್ಟ 8.52 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಇದೇ ವೇಳೆ 49 ವರ್ಷದೊಳಗಿನ 8,387 ಹಾಗೂ 50 ವರ್ಷ ಮೇಲ್ಪಟ್ಟ 30,024 ಜನರು ಮೃತರಾಗಿದ್ದಾರೆ. ಸಿದ್ಧತೆ ಕೈಗೊಳ್ಳಲಾಗಿತ್ತು ಎರಡನೇ ಅಲೆ ಕೊನೆಗೊಳ್ಳುತ್ತಿದ್ದಂತೆ ಮೂರನೇ ಅಲೆಯನ್ನು ಎದುರಿಸಲು ರಾಷ್ಟ್ರಮಟ್ಟದಲ್ಲಿ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು. ತಜ್ಞರ ವರದಿಯಂತೆ ಆಸ್ಪತ್ರೆಗಳಲ್ಲಿ ಮಕ್ಕಳನ್ನು ದಾಖಲಿಸಲು ಹಾಸಿಗೆ, ಆಕ್ಸಿಜನ್‌, ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಯಿತು. ಹೆಚ್ಚುವರಿಯಾಗಿ ಆಸ್ಪತ್ರೆಗಳನ್ನು ಕೂಡ ತೆರೆಯಲಾಯಿತು. ಮಕ್ಕಳ ತಜ್ಞರ ಸಂಖ್ಯೆ ಕಡಿಮೆ ಇರುವುದು ಆತಂಕಕಾರಿಯಾಗಿದ್ದರೂ ಸಮಸ್ಯೆಯಾಗದಂತೆ ಇತರ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಮಕ್ಕಳ ಚಿಕಿತ್ಸೆಗೆ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲಾಗಿತ್ತು. ಶಾಲೆಗಳು ಆತಂಕಕಾರಿಯಾಗಿಲ್ಲ 3ನೇ ಅಲೆ ಆರಂಭವಾದಾಗ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು. ಆದರೆ, ಇದೀಗ ಶಾಲೆಗಳು ಸೇಫ್‌ ಭಾವನೆ ಮೂಡಿಸಿವೆ. ಬೆಂಗಳೂರು ಹೊರತುಪಡಿಸಿದಂತೆ ಉಳಿದೆಡೆ ಶಾಲಾ ಕಾಲೇಜುಗಳು ನಡೆಯುತ್ತಿವೆ. ಕೆಲವೆಡೆ ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ. ಆದರೆ, ಅದು ವ್ಯಾಪಕವಾಗಿ ಇತರ ಮಕ್ಕಳಲ್ಲಿ ಹರಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಶಾಲೆಗಳಿಗೆ ಮಕ್ಕಳನ್ನು ಧೈರ್ಯದಿಂದ ಕಳುಹಿಸುತ್ತಿದ್ದಾರೆ. ಏಕೆ ಸೇಫ್‌? ಮಕ್ಕಳ ಮೂಗಿನಲ್ಲಿ ಎಸಿ-2 ರೆಸೆಪ್ಟರ್ಸ್‌ ಕಡಿಮೆ ಇರುತ್ತದೆ. ಹೀಗಾಗಿ ಸೋಂಕು ಗಂಟಲಿಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಮಕ್ಕಳಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡರೂ, ಅವರಲ್ಲಿ ರೋಗ ನಿರೋಧಕ ಶಕ್ತಿ ತಕ್ಷಣ ಹೆಚ್ಚಿಸಿಕೊಳ್ಳುವ ಗುಣವಿರುತ್ತದೆ. ಸದ್ಯ ಮಕ್ಕಳಲ್ಲಿ ಮೂರು ರೀತಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೆಲವರಿಗೆ ಜ್ವರ, ಇನ್ನೂ ಕೆಲವರಿಗೆ ಜ್ವರ, ಕೆಮ್ಮು ಮತ್ತು ಶೀತ ಹಾಗೂ 3ನೇ ವರ್ಗದವರಲ್ಲಿ ಜ್ವರ, ವಾಂತಿ, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ಔಷಧದಲ್ಲಿಯೇ ಎರಡು ಮೂರು ದಿನದಲ್ಲಿ ಗುಣಮುಖರಾಗುತ್ತಾರೆ. -ಡಾ. ಶಿವಾನಂದ, ಮಾಜಿ ನಿರ್ದೇಶಕರು, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಅಲ್ಲದೆ, ಮಕ್ಕಳಿಗಿಂತ ಹಿರಿಯರಲ್ಲಿ ಸೋಂಕಿನ ಪ್ರಮಾಣ ಅಧಿಕ. ಮಕ್ಕಳಲ್ಲಿ ಸೋಂಕಿನ ತೀವ್ರತೆಯೂ ಹೆಚ್ಚಿಲ್ಲ. ಆದರೂ, ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ. ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಗುರಿ. -ಡಾ. ಕೆ.ಸುಧಾಕರ್‌, ಆರೋಗ್ಯ ಸಚಿವ ರಾಜ್ಯದಲ್ಲಿ ಶೇ.99.9 ಮೊದಲ ಡೋಸ್‌ ಪೂರ್ಣ ಬೆಂಗಳೂರು: ಲಸಿಕೆಯ ಮೊದಲ ಡೋಸ್‌ ಶೇ. 99.9 ಗುರಿ ಸಾಧಿಸುವ ಮೂಲಕ ರಾಜ್ಯವಾರು ಸಾಧನೆ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನಲ್ಲಿದೆ. ಈ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ. ಸುಧಾಕರ್‌,''ಮೊದಲ ಡೋಸ್‌ ವಿತರಣೆಯಲ್ಲಿ ಶೇ.100 ಗುರಿ ಸಾಧನೆಗೆ ಶೇ.0.1ರಷ್ಟು ಮಾತ್ರ ಬಾಕಿ ಇದೆ,'' ಎಂದು ತಿಳಿಸಿದ್ದಾರೆ. ''15 ವರ್ಷ ಮೇಲ್ಪಟ್ಟ 5.9 ಕೋಟಿ ಮಂದಿಗೆ ಲಸಿಕೆಯ ಮೊದಲ ಡೋಸ್‌ ನೀಡಲಾಗಿದ್ದು, ದೇಶದಲ್ಲೇ ನಾವು ಮುಂಚೂಣಿಯಲ್ಲಿದ್ದೇವೆ,''ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯದ ಲಸಿಕೆ ಮಾಹಿತಿ
  • ಮೊದಲ ಡೋಸ್‌ ಪಡೆದವರು: 5,10,10,207
  • ಎರಡನೇ ಡೋಸ್‌ ಪಡೆದವರು: 4,15,33,375
  • ಕೊವ್ಯಾಕ್ಸಿನ್‌ ಮೊದಲ ಡೋಸ್‌ ಪಡೆದ ಮಕ್ಕಳು: 2.09 ಲಕ್ಷ ಮಕ್ಕಳು(15ರಿಂದ 17 ವರ್ಷ)
  • ಬೆಂಗಳೂರು ನಗರ ಜಿಲ್ಲೆ, ಬಿಬಿಎಂಪಿ ವ್ಯಾಪ್ತಿ ಪ್ರದೇಶ: ಶೇ.100 ಸಾಧನೆ


from India & World News in Kannada | VK Polls https://ift.tt/3Iu2y2S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...