ಭಾರತದ ವಿರುದ್ಧ ದ್ವೇಷ, ನಕಲಿ ಸುದ್ದಿ ಪ್ರಸಾರ; ಪಾಕಿಸ್ತಾನದ 35 ಯೂಟ್ಯೂಬ್‌ ಚಾನೆಲ್‌ ಬ್ಯಾನ್

ಹೊಸದಿಲ್ಲಿ: ಕಳೆದ ತಿಂಗಳು ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರ ನಿಧನ, ದೇಶ ವಿರೋಧಿ ಸೇರಿ ಹಲವು ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪ್ರಸರಿಸುತ್ತಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ 35 ಯೂಟ್ಯೂಬ್‌ ಚಾನೆಲ್‌ ಮತ್ತು ಸಾಮಾಜಿಕ ಜಾಲತಾಣಗಳ ವಿವಿಧ ಖಾತೆಗಳನ್ನು ಕೇಂದ್ರ ಸರಕಾರ ಬ್ಲಾಕ್‌ ಮಾಡಿದೆ. ‘ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನದ 35 ಯೂಟ್ಯೂಬ್‌ ಚಾನೆಲ್‌, ಟ್ವಿಟರ್‌ನ ಎರಡು, ಇನ್‌ಸ್ಟಾಗ್ರಾಂನ ಎರಡು ಖಾತೆ, ಎರಡು ವೆಬ್‌ಸೈಟ್‌ ಹಾಗೂ ಫೇಸ್‌ಬುಕ್‌ನ ಒಂದು ಖಾತೆ ಬ್ಲಾಕ್‌ ಮಾಡಲಾಗಿದೆ’ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್‌ ಸಹಾಯ್‌ ತಿಳಿಸಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಕೇಂದ್ರ ಸರಕಾರ ಕ್ರಮ ತೆಗೆದುಕೊಂಡಿದೆ. ‘ಜನರಲ್‌ ರಾವತ್‌ ಅವರಿಗೆ ಕೇಂದ್ರ ಸರಕಾರವೇ ಕಾರಣ, ರಾವತ್‌ ಅವರ ಪುತ್ರಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ, ಉತ್ತರ ಕೊರಿಯಾ ಸೇನೆಯು ಕಾಶ್ಮೀರಕ್ಕೆ ಲಗ್ಗೆ ಇಡುತ್ತಿದೆ, ಭಾರತೀಯ ಸೇನೆ, ಜಮ್ಮು- ಕಾಶ್ಮೀರ, ಭಾರತವು ಬೇರೆ ದೇಶಗಳೊಂದಿಗೆ ಹೊಂದಿರುವ ಸಂಬಂಧ ಸೇರಿ ಹಲವು ವಿಷಯಗಳ ಕುರಿತು ಪಾಕಿಸ್ತಾನದಲ್ಲಿ ಕುಳಿತು ಯೂಟ್ಯೂಬ್‌ ಚಾನೆಲ್‌ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವದಂತಿ ಹರಡಿಸಲಾಗುತ್ತಿದೆ. ಹಾಗಾಗಿ ಕೇಂದ್ರ ಸರಕಾರ ಈ ಕ್ರಮ ತೆಗೆದುಕೊಂಡಿದ್ದು, ಇನ್ನೂ ಹಲವು ಖಾತೆ, ಚಾನೆಲ್‌ಗಳ ಮೇಲೆ ನಿಗಾ ಇರಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಭಾರಿ ಅಪಾಯಕಾರಿ: ಭಾರತದ ಕುರಿತು ತಪ್ಪು ಮಾಹಿತಿಯನ್ನು ಕೋಟ್ಯಂತರ ಜನರಿಗೆ ತಲುಪಿಸಲು ಪಾಕಿಸ್ತಾನದ ದುಷ್ಕರ್ಮಿಗಳು ಯೂಟ್ಯೂಬ್‌ ಅನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿದ್ದಾರೆ. ಅಪ್ನಿ ದುನಿಯಾ ನೆಟ್‌ವರ್ಕ್‌ನ 14, ತಲ್ಹಾ ಫಿಲ್ಮ್ಸ್ ನೆಟ್‌ವರ್ಕ್‌ನ 13 ಯೂಟ್ಯೂಬ್‌ ಚಾನೆಲ್‌ಗಳು ಸೇರಿ ಒಟ್ಟು 35 ಚಾನೆಲ್‌ಗಳಿಗೆ 1.2 ಕೋಟಿ ಚಂದಾದಾರರಿದ್ದಾರೆ.


from India & World News in Kannada | VK Polls https://ift.tt/3FQj2AM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...