ಕರ್ನಾಟಕದಲ್ಲಿ ಜನವರಿ 25ಕ್ಕೆ ಕೋವಿಡ್ ಉತ್ತುಂಗಕ್ಕೇರುವ ಸಾಧ್ಯತೆ: ಆದ್ರೆ ಅಬ್ಬರ ತುಂಬಾ ದಿನ ಇರಲ್ಲ..!

: ಜನವರಿ 25 ಅಥವಾ 26ಕ್ಕೆ ರಾಜ್ಯದಲ್ಲಿ ಕೋವಿಡ್‌ ಗರಿಷ್ಠ ಮಟ್ಟಕ್ಕೆ ತಲುಪಿ ನಂತರ ಇಳಿಯುವ ಸಾಧ್ಯತೆ ಇದೆ ಎಂದು ತಾಂತ್ರಿಕ ಸಲಹಾ ತಜ್ಞರ ಸಮಿತಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದೆ. ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿ, ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ವರ್ಚ್ಯುವಲ್‌ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಶುಕ್ರವಾರ ಸಿಎಂ ಅಧ್ಯಕ್ಷತೆಯಲ್ಲಿ ಮತ್ತೊಂದು ಸುತ್ತಿನ ಮಹತ್ವದ ನಡೆಯಲಿದ್ದು, ತೀರ್ಮಾನ ಕೈಗೊಳ್ಳಲಿದೆ. ಕಡಿಮೆಯಾಗುವ ಸೂಚನೆ ಇರುವುದರಿಂದ ವಾರಾಂತ್ಯದ ನಿರ್ಬಂಧ ಸಡಿಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸಚಿವ ಆರ್‌. ಅಶೋಕ್‌, 'ಶುಕ್ರವಾರದವರೆಗೆ ಕಾಯಿರಿ, ಸೋಂಕು ಕಡಿಮೆಯಾದರೆ ಒಳ್ಳೆಯ ಸುದ್ದಿ ಬರಬಹುದು' ಎಂದಿದ್ದಾರೆ. ಈ ಸಭೆಯಲ್ಲಿ ಸಚಿವರಾದ ಡಾ. ಕೆ. ಸುಧಾಕರ್‌, ಆರ್‌. ಅಶೋಕ್‌, ಡಾ. ಸಿ. ಎನ್‌. ಅಶ್ವತ್ಥ ನಾರಾಯಣ ಇದ್ದರು. ಸದ್ಯದಲ್ಲೇ ಸಭೆ: ರಾಜ್ಯದಲ್ಲಿ ಇನ್ನೂ 40 ಲಕ್ಷಕ್ಕೂ ಹೆಚ್ಚು ಮಂದಿ ಎರಡನೇ ಡೋಸ್‌ ಲಸಿಕೆ ಪಡೆಯಬೇಕಿದೆ. ಎರಡನೇ ಡೋಸ್‌ ಲಸಿಕೆ ಪಡೆದವರ ಸಂಖ್ಯೆ ಕಡಿಮೆಯಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒಗಳೊಂದಿಗೆ ಸಿಎಂ, ಸಚಿವರು ಸದ್ಯದಲ್ಲೇ ವಿಡಿಯೋ ಸಂವಾದ ನಡೆಸಲು ತೀರ್ಮಾನಿಸಲಾಯಿತು. ಕೋವಿಡ್‌ ಮೊದಲ ಅಲೆ ಗರಿಷ್ಠ ತಲುಪಲು 4 ತಿಂಗಳು, ಎರಡನೇ ಅಲೆ ಗರಿಷ್ಠಕ್ಕೇರಲು ಮೂರು ತಿಂಗಳಾಗಿತ್ತು. ಪೀಕ್‌ ಅವರ್‌ ಸಿದ್ಧತೆ ಏನೇನು? - ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗಕ್ಕೆ ಹೆಚ್ಚಿನ ಗಮನ ನೀಡುವ ಜತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಳ್ಳಬೇಕು. ಜನ ಟ್ರಯಾಜಿಂಗ್‌ ಕೇಂದ್ರಕ್ಕೆ ದಾಖಲಾಗುವುದನ್ನು ನಿಯಂತ್ರಿಸುವತ್ತಲೂ ಗಮನಿಸಬೇಕು. - 'ಹೋಮ್‌ ಐಸೊಲೇಷನ್‌ ಕರೆ' ಪ್ರಮಾಣ ಹೆಚ್ಚಿಸಬೇಕು. ನಾನಾ ಆರೋಗ್ಯ ಸಮಸ್ಯೆಯಿರುವವರಿಗೆ (ಕೋ- ಮಾರ್ಬಿಡಿಟಿ) ನಿತ್ಯ ಒಮ್ಮೆ ಕರೆ ಮಾಡಿ ಆರೋಗ್ಯ ಸ್ಥಿತಿ ಅವಲೋಕಿಸಬೇಕು. - ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕೋವಿಡ್‌, ಸೋಂಕು ಸಂಬಂಧ ಜನರಲ್ಲಿರುವ ನಕಾರಾತ್ಮಕ ಮನೋಭಾವ ತೊಡೆದು ಹಾಕಲು ಪ್ರಯತ್ನಿಸಬೇಕು, ಔಷಧ ಕಿಟ್‌ ಮನೆಗೆ ತಲುಪಿಸಬೇಕು. - ಗ್ರಾಮೀಣ ಭಾಗದಲ್ಲಿ ಸ್ಥಳೀಯ ಮಟ್ಟದಲ್ಲೇ ವೈದ್ಯರು ಸಮಾಲೋಚನೆ ಮಾಡಬೇಕು. ಸೋಂಕಿತ ಮಕ್ಕಳ ಬಗ್ಗೆ ಅದರಲ್ಲೂ ವಿಶೇಷವಾಗಿ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ತುಂಬಬೇಕು - ಆಸ್ಪತ್ರೆಗಳಲ್ಲಿ ಜನರೇಟರ್‌ ವ್ಯವಸ್ಥೆಯಾಗಬೇಕು, ಆಕ್ಸಿಜನ್‌ ಪ್ಲಾಂಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಂಡು ಅಗತ್ಯ ಸಿಬ್ಬಂದಿ, ಪರಿಕರಗಳನ್ನು ಹೊಂದಿಸಿಕೊಳ್ಳಬೇಕು. ಐಸಿಎಂಆರ್‌ ಸಲಹೆಯಂತೆ ಪರೀಕ್ಷೆ ಐಸಿಎಂಆರ್‌ ಸಲಹೆಯಂತೆ ಅಗತ್ಯ ಇರುವವರಿಗೆ ಮಾತ್ರ ಪರೀಕ್ಷೆ ಮುಂದುವರಿಯಲಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಪರೀಕ್ಷೆ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ಹೇಳಿದರು. 17 ವರ್ಷದೊಳಗಿನ ಎಷ್ಟು ಮಕ್ಕಳಿಗೆ ಪಾಸಿಟಿವಿಟಿ ಪ್ರಮಾಣವಿದೆ (ಶೇ. 5ರಿಂದ ಶೇ.10.7) ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆದರೆ ಯಾವುದೇ ರೀತಿಯ ತೀವ್ರತೆ ಕಾಣದಿರುವುದು ಸಮಾಧಾನಕರ ಎಂದು ಹೇಳಿದರು. ಈ ನಡುವೆ, ಸದ್ಯ 2 ಲಕ್ಷ ಪರೀಕ್ಷೆ ನಡೆಸಲಾಗುತ್ತಿದೆ. ಅತಿ ಹೆಚ್ಚು ಪರೀಕ್ಷೆ ಪ್ರಯೋಜನಕಾರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. 1.50 ಲಕ್ಷ ಪರೀಕ್ಷೆಗೆ ಸೀಮಿತಗೊಳಿಸಿದರೆ ಸಾಕು ಎಂಬ ಕುರಿತು ಚರ್ಚೆಯಾಯಿತು ಎಂದು ಸಚಿವ ಆರ್‌. ಅಶೋಕ್‌ ತಿಳಿಸಿದರು. ಲಾಕ್‌, ಬಿಗಿ ಕ್ರಮ ಇಲ್ಲ ಎಂದ ಅಶೋಕ್‌ 'ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವುದಿಲ್ಲ. ಹೊಸ ಬಿಗಿ ಕ್ರಮಗಳ ಜಾರಿ ಇಲ್ಲ. ಇನ್ನು ಏನಿದ್ದರೂ ವಿನಾಯಿತಿ' ಎಂದು ಸಭೆಯ ಬಳಿಕ ಸಚಿವ ಆರ್‌. ಅಶೋಕ್‌ ಹೇಳಿದರು. ಸದ್ಯ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ನಿರ್ಬಂಧ ಕ್ರಮದಲ್ಲಿ ಬದಲಾವಣೆ ಬೇಕೆ, ಬೇಡವೇ ಎಂಬ ಚರ್ಚೆ ನಡೆದು ಶುಕ್ರವಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು ಎಂದರು.


from India & World News in Kannada | VK Polls https://ift.tt/3nBuWs9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...