ಟಿ20 ವಿಶ್ವಕಪ್: ಈ ಬಾರಿಯೂ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತದೆ: ಅಖ್ತರ್‌ ಭವಿಷ್ಯ!

ಹೊಸದಿಲ್ಲಿ: ಐಸಿಸಿ ವಿಶ್ವಕಪ್‌ ಟೂರ್ನಿಗಳಲ್ಲಿ ವಿರುದ್ಧ ಗೆಲ್ಲಲಾಗದೇ ಉಳಿದಿದ್ದ ತಂಡ, ಕಳೆದ ವರ್ಷ ಯುಎಇ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಸೂಪರ್‌ 12 ಹಂತದಲ್ಲಿ ಬಳಗಕ್ಕೆ ಶಾಕ್‌ ಕೊಟ್ಟು ಮೊದಲು ಜಯದ ಸಂಭ್ರಮ ಆಚರಿಸಿತ್ತು. ಇದೀಗ ಅಚ್ಚರಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡಕ್ಕೆ ಮತ್ತೊಂದು ಅವಕಾಶ ಸಿಕ್ಕಿದೆ. ಇದೇ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯ ಸೂಪರ್‌ 12 ಹಂತದ ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಟೀಮ್ ಇಂಡಿಯಾ, ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕೆ ಎದುರಾಳಿ ಪಾಕಿಸ್ತಾನ ಎದುರು ಅಕ್ಟೋಬರ್‌ 23ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ (ಎಂಸಿಜಿ)ನಲ್ಲಿ ಆಡಲಿದೆ. ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಈ ಬಾರಿಯೂ ಟೀಮ್ ಇಂಡಿಯಾ ಎದುರು ಪಾಕಿಸ್ತಾನವೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಗಂಟೆಗೆ 161.3 ಕಿ.ಮೀ. ವೇಗದಲ್ಲಿ ಬೌಲಿಂಗ್‌ ಮಾಡಿದ ವಿಶ್ವ ದಾಖಲೆ ಹೊಂದಿರುವ 46 ವರ್ಷದ ಬಲಗೈ ವೇಗದ ಬೌಲರ್‌ ಅಖ್ತರ್, ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಸೋಲು ಭಾರತಕ್ಕೆ ಈಗ ಸ್ವಾಭಾವಿಕವಾಗಿದೆ: ಅಖ್ತರ್ ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕಿಂತಲೂ ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ತಂಡ ಈಗ ಬಲಿಷ್ಠವಾಗಿದೆ ಎಂದು ಅಖ್ತರ್‌ ಹೇಳಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಬಾಬರ್‌ ಬಳಗ ಭಾರತದ ಎದುರು 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಇದರ ಬಳಿಕ ಮಾಧ್ಯಮಗಳಿಂದ ಭಾರತ ತಂಡದ ಮೇಲೆ ವ್ಯಾಪಕ ಒತ್ತಡ ಎದುರಾಗಿದು, ಇದರಿಂದ ಭಾರತ ತಂಡ ದುರ್ಬಲವಾಗುತ್ತಿದೆ ಎಂದು ಅಖ್ತರ್ ಅಭಿಪ್ರಾಯ ಪಟ್ಟಿದ್ದಾರೆ. "ಮೆಲ್ಬೋರ್ನ್‌ನಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ಮತ್ತೆ ಗೆಲ್ಲಲಿದೆ. ಟಿ20 ಕ್ರಿಕೆಟ್‌ನಲ್ಲಿ ಈಗ ಭಾರತಕ್ಕಿಂತಲೂ ಪಾಕಿಸ್ತಾನ ಅತ್ಯಂತ ಬಲಿಷ್ಠವಾಗಿದೆ. ಭಾರತೀಯ ಮಾಧ್ಯಮಗಳು ಟೀಮ್ ಇಂಡಿಯಾ ಮೇಲೆ ಅನಗತ್ಯ ಒತ್ತಡ ಹೇರುತ್ತಿವೆ. ಇತ್ತಂಡಗಳು ಮುಖಾಮುಖಿ ಆದಾಗಲೆಲ್ಲಾ ಭಾರತೀಯ ಮಾಧ್ಯಮಗಳಿ ಟೀಮ್ ಇಂಡಿಯಾ ಮೇಲೆ ಒತ್ತಡ ಹೇರುತ್ತವೆ. ಹೀಗಾಗಿ ಭಾರತ ತಂಡಕ್ಕೆ ಸೋಲುವುದು ಸ್ವಾಭಾವಿಕವಾಗಿಬಿಟ್ಟಿದೆ," ಎಂದಿದ್ದಾರೆ. ಆದರೆ, ಈ ಬಾರಿ ವಿರಾಟ್‌ ಕೊಹ್ಲಿ ಬದಲು ಭಾರತ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದಾರೆ. ಹೀಗಾಗಿ ಇತ್ತಂಡಗಳ ನಡುವೆ ಭಾರಿ ಪೈಪೋಟಿಯನ್ನೇ ನಿರೀಕ್ಷಿಸಲಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ ಬಳಿಕ ಕೊಹ್ಲಿ ಟಿ20 ತಂಡದ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. ಐಪಿಎಲ್‌ನಲ್ಲಿ ಐದು ಬಾರಿ ಮುಂಬೈ ಇಂಡಿಯನ್ಸ್‌ಗೆ ಟ್ರೋಫಿ ಗೆದ್ದಿಕೊಟ್ಟಿರುವ ರೋಹಿತ್‌, ಭಾರತ ತಂಡಕ್ಕೆ ಎರಡನೇ ಐಪಿಎಲ್‌ ಗೆದ್ದುಕೊಡುತ್ತಾರೆ ಎಂಬ ನಿರೀಕ್ಷೆಯಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AtAom2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...