ನಾಲ್ಕನೇ ಬಾರಿ ಬಿಬಿಎಲ್‌ ಕಿರೀಟ ಮುಡಿಗೇರಿಸಿಕೊಂಡ ಪರ್ತ್‌ ಪಡೆ!

ಮೆಲ್ಬೋರ್ನ್‌: ಆಲ್‌ರೌಂಡರ್‌ ಲಾರೆನ್‌ ಈವನ್ಸ್‌ (41 ಎಸೆತಗಳಲ್ಲಿ ಅಜೇಯ 76 ರನ್‌) ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಮತ್ತು ಆಂಡ್ರೂ ಟೈ (15ಕ್ಕೆ 3) ಅವರ ಮಾರಕ ಬೌಲಿಂಗ್‌ ಬಲದಿಂದ ಮಿಂಚಿದ ತಂಡ ದಾಖಲೆಯ ನಾಲ್ಕನೇ ಬಾರಿ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದಿದೆ. ಇತಿಹಾಸ ಪ್ರಸಿದ್ಧ ಎಂಸಿಜಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆಧಿಪತ್ಯ ಮೆರೆದ ಪರ್ತ್‌ ತಂಡ ಎದುರು ಬರೋಬ್ಬರಿ 79 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವೆನಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಪರ್ತ್‌ ಸ್ಕಾರ್ಚರ್ಸ್‌ ತಂಡ 25 ರನ್‌ ಗಳಿಸುವ ಹೊತ್ತಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಜೊತೆಯಾದ ಕ್ಯಾಪ್ಟನ್‌ ಆಷ್ಟನ್‌ ಟರ್ನರ್‌ (54 ರನ್) ಮತ್ತು ಲಾರೆನ್‌ ಈವನ್ಸ್‌ (76*) ಅವರ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನದ ಫಲವಾಗಿ ಪರ್ತ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 171 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಸಿಡ್ನಿ ತಂಡದ ಪರ ಸ್ಟೀವ್‌ ಓ'ಕೀಫ್‌ (43ಕ್ಕೆ 2) ಮತ್ತು ನೇಥನ್‌ ಲಯಾನ್‌ (24ಕ್ಕೆ 2) ವಿಕೆಟ್‌ ಪಡೆದು ಗಮನ ಸೆಳೆದರು. ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್‌ ಪರ ಡೇನಿಯೆಲ್‌ ಹ್ಯೂಸ್‌ 33 ಎಸೆತಗಳಲ್ಲಿ 42 ರನ್‌ಗಳನ್ನು ಸಿಡಿಸಿದರಾದರೂ ಪ್ರಯೋಜನವಾಗಲಿಲ್ಲ. 16.2 ಓವರ್‌ಗಳಲ್ಲಿ 92 ರನ್‌ಗಳಿಗೆ ಸಿಡ್ನಿ ಸಿಕ್ಸರ್ಸ್‌ ತಂಡ ಆಲ್‌ಔಟ್‌ ಆಯಿತು. ಆಂಡ್ರೂ ಟೈ ಯಶಸ್ವಿ ಬೌಲರ್‌ ಆಗಿ ಮುರು ವಿಕೆಟ್‌ ಕಿತ್ತರೆ, ಜೇ ರಿಚರ್ಡ್ಸನ್‌ (20ಕ್ಕೆ 2) ಆರಂಭಿಕ ಯಶಸ್ಸು ತಂದುಕೊಟ್ಟರು. ಅಂದಹಾಗೆ ಲೀಗ್‌ ಇತಿಗಹಾಸದಲ್ಲಿ ಸಿಡ್ನಿ ಸಿಕ್ಸರ್ಸ್‌ ಕೂಡ ಮೂರು ಬಾರಿ ಟ್ರೋಫಿ ಗೆದ್ದ ದಾಖಲೆ ಹೊಂದಿದೆ. ಸಂಕ್ಷಿಪ್ತ ಸ್ಕೋರ್‌ಪರ್ತ್‌ ಸ್ಕಾರ್ಚರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 171 ರನ್‌ (ಜಾಶ್‌ ಇಂಗ್ಲಿಶ್ 13, ಆಷ್ಟನ್‌ ಟರ್ನರ್‌ 54, ಲಾರೆನ್‌ ಈವನ್ಸ್‌ 76*, ಆಷ್ಟನ್‌ ಅಗರ್‌ 15; ನೇಥನ್‌ ಲಯಾನರ್ 24ಕ್ಕೆ 2, ಸ್ಟೀವ್‌ ಓ'ಕೀಫ್ 43ಕ್ಕೆ 2, ಜಾಕ್ಸನ್‌ ಬರ್ಡ್‌ 6ಕ್ಕೆ 1). ಸಿಡ್ನಿ ಸಿಕ್ಸರ್ಸ್‌: 16.2 ಓವರ್‌ಗಳಲ್ಲಿ 92 ರನ್‌ಗಳಿಗೆ ಆಲ್‌ಔಟ್‌ (ನಿಕೋಲಸ್‌ ಬೆರ್ಟಸ್‌ 15, ಡೇನಿಯೆಲ್‌ ಹ್ಯೂಸ್‌ 42, ಜೇ ಲೆನ್ಟನ್ 10; ಆಂಡ್ರೂ ಟೈ 15ಕ್ಕೆ 3, ಜೇ ರಿಚರ್ಡ್ಸನ್ 20ಕ್ಕೆ 2, ಆಷ್ಟನ್‌ ಟರ್ನರ್‌ 6ಕ್ಕೆ 1, ಜೇಸನ್‌ ಬೆಹ್ರೆನ್‌ ಡಾರ್ಫ್ 12ಕ್ಕೆ 1, ಪೀಟರ್‌ 13ಕ್ಕೆ 1, ಆಷ್ಟನ್‌ ಅಗರ್ 25ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3r7fGW4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...