ಬೆಂಗಳೂರಿನಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಯತ್ನ: ಪತ್ನಿ ಸಾವು, ಪತಿ, ಮಗಳು ಪಾರು..

ದಾಸರಹಳ್ಳಿ (): ಕೊರೊನಾ ಸಂದರ್ಭದಲ್ಲಿ ಸಂಬಂಧಿಕರು, ಸ್ನೇಹಿತರ ಬಳಿ ಸಾಲ ಮಾಡಿಕೊಂಡ ಕ್ಯಾಬ್‌ ಚಾಲಕರೊಬ್ಬರು, ಅದನ್ನು ತೀರಿಸಲಾಗದೇ ಮನನೊಂದು ತನ್ನ , ಮಗಳಿಗೆ ವಿಷ ಉಣಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನು ಪ್ರಕಾಶ್‌ (40), ಪತ್ನಿ ಗೀತಾ (37) ಹಾಗೂ ಲೇಖನ (14) ಆತ್ಮಹತ್ಯೆಗೆ ಯತ್ನಿಸಿದ್ದು, ಭಾನು ಪ್ರಕಾಶ್‌ ಹಾಗೂ ಲೇಖನ ಬದುಕುಳಿದಿದ್ದಾರೆ. ಘಟನೆಯಲ್ಲಿ ಗೀತಾ ಮೃತ ಪಟ್ಟಿದ್ದಾರೆ. ದಂಪತಿಗೆ 8 ತಿಂಗಳ ಮತ್ತೊಂದು ಹೆಣ್ಣು ಮಗು ಇದೆ. ಕ್ಯಾಬ್‌ ಚಾಲಕನಾಗಿದ್ದ ಬೆಂಗಳೂರಿನ ಭಾನು ಪ್ರಕಾಶ್‌, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕತ್ತಿ ನಾಗೇನ ಹಳ್ಳಿಯ ಗೀತಾ ಅವರನ್ನು 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಡದಿ, ಮಕ್ಕಳ ಜತೆ ಅನ್ಯೋನ್ಯವಾಗಿದ್ದರು. ಕ್ಯಾಬ್‌ ಜತೆಗೆ ಚೀಟಿ ವ್ಯವಹಾರ ಕೂಡ ನಡೆಸುತ್ತಿದ್ದರು. ಸ್ನೇಹಿತರ ಬಳಿ ಶೇ. 2 - 3 ಬಡ್ಡಿಗೆ ಲಕ್ಷಾಂತರ ರೂ. ಸಾಲ ಪಡೆದು, ಬೇರೆಯವರಿಗೆ ಶೇ. 5ರ ಬಡ್ಡಿಗೆ ಸಾಲ ನೀಡುತ್ತಿದ್ದರು ಎನ್ನಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಚೀಟಿ ಎತ್ತಿದವರು, ಸಾಲ ಪಡೆದವರು ಹಣ ಮರಳಿಸದ ಕಾರಣ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಸಾಲ ನೀಡಿದವರು ವಾಪಸ್‌ ಕೊಡುವಂತೆ ಒತ್ತಡ ಹಾಕಿದ್ದರು. ಇದರಿಂದ ಕಂಗೆಟ್ಟ ಭಾನು ಪ್ರಕಾಶ್‌, ಪತ್ನಿ ಮತ್ತು ಮಗಳಿಗೆ ತಿಳಿಯದಂತೆ ಕೃಷಿಗೆ ಬಳಸುವ ರಾಸಾಯನಿಕವನ್ನು ಹಾಲಿನಲ್ಲಿ ಬೆರೆಸಿ ಕುಡಿಸಿ, ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಮಗಳು ಲೇಖನ ತನ್ನ ದೊಡ್ಡಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಅವರು ಮನೆಗೆ ಬಂದು ನೋಡುವಷ್ಟರಲ್ಲಿ ಗೀತಾ ಮೃತಪಟ್ಟಿದ್ದರು. ಭಾನು ಪ್ರಕಾಶ್‌ ಮತ್ತು ಲೇಖನ ಇಬ್ಬರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಬಳಿಕ ತಂದೆ, ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶವ ಪರೀಕ್ಷೆ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


from India & World News in Kannada | VK Polls https://ift.tt/3r7eWjM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...