ಡಿಆರ್‌ಎಸ್‌ ವಿವಾದ, ಕ್ಯಾಮೆರಾಮನ್‌ಗಳ ವಿರುದ್ಧ ಹರಿಹಾಯ್ದ ಕೊಹ್ಲಿ!

ಕೇಪ್‌ ಟೌನ್‌: ಸರಣಿ ನಿರ್ಣಾಯಕ ಮೂರನೇ ಟೆಸ್ಟ್‌ ಪಂದ್ಯದಲ್ಲಿ ತಂಡ ಎರಡನೇ ಇನಿಂಗ್ಸ್‌ ಬ್ಯಾಟಿಂಗ್‌ ಮಾಡುವಾಗ 21ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ನಡೆದ ಹೈ ಡ್ರಾಮಾ ಭಾರಿ ವಿವಾದ ಸೃಷ್ಟಿಮಾಡಿದೆ. ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಬೌಲಿಂಗ್‌ನಲ್ಲಿ ಚಳ್ಳೆ ಹಣ್ಣು ತಿಂದಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಹಾಗೂ ಎಡಗೈ ಬ್ಯಾಟ್ಸ್‌ಮನ್‌ ಪ್ಲಂಬ್‌ ಎಲ್‌ಬಿಡಬ್ಲ್ಯು ಆಗಿದ್ದರು. ಸ್ಟ್ರೈಕ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಕೂಡ ಔಟ್‌ ಎಂದು ತೀರ್ಪು ಕೊಟ್ಟಿದ್ದರು. ಆದರೆ, ಡಿಆರ್‌ಎಸ್‌ ತೀರ್ಮಾನ ಎಲ್ಲವನ್ನೂ ಬದಲಾಯಿಸಿ ಬಿಟ್ಟಿತು. 3ಡಿ ಸ್ಪಿನ್‌ ವಿಷನ್‌ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಆದರೆ, ಚೆಂಡು ಎಲ್ಗರ್‌ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ವಿಕೆಟ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂಬಂತ್ತಿತ್ತು. ಡಿಆರ್‌ಎಸ್‌ ತೀರ್ಪು ಕಂಡ ಆನ್‌ ಫೀಲ್ಡ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಕೂಡ 'ಇದು ಅಸಾಧ್ಯ' ಎಂದು ಹೇಳಿದ್ದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ. ಆರ್‌ ಅಶ್ವಿನ್‌ ಕೂಡ ಕೂಡಲೇ ಪ್ರತಿಕ್ರಿಯೆ ನೀಡಿ, "ಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ಗೆಲ್ಲಲು ನೀವು ಇನ್ನು ಒಳ್ಳೆಯ ಮಾರ್ಗ ಕಂಡುಕೊಳ್ಳಬೇಕಿತ್ತು," ಎಂದು ಕಿಚಾಯಿಸಿದ್ದಾರೆ. ಡಿಆರ್‌ಎಸ್‌ ಕೃಪಾ ಕಟಾಕ್ಷದಿಂದ ಜೀವದಾನ ಪಡೆದ ಎಲ್ಗರ್‌, ಕೊನೆಗೆ ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ನಲ್ಲಿ ಕಾಟ್‌ ಬಿಹೈಂಡ್‌ ಆದರು. ಆನ್‌ ಫೀಲ್ಡ್‌ ಅಂಪೈರ್‌ ನಾಟ್‌ ಔಟ್‌ ನೀಡಿದರೂ, ಡಿಆರ್‌ಎಸ್‌ನಲ್ಲಿ ಯಶಸ್ಸು ಭಾರತ ತಂಡದ ಕೈ ಹಿಡಿಯಿತು. ಎಲ್ಗರ್‌ ವಿಕೆಟ್‌ ಪತನದೊಂದಿಗೆ ದಿನದಾಟಕ್ಕೆ ತೆರೆ ಬಿದ್ದಿತು. ಕೊಹ್ಲಿ, ಕೆಎಲ್ ರಾಹುಲ್ ಕೆಂಡಾಮಂಡಲಡಿಆರ್‌ಎಸ್‌ ತೀರ್ಪು ಕಂಡು ನಾಯಕ ಕೆಂಡಾಮಂಡಲವಾದರು. ಅಷ್ಟೇ ಅಲ್ಲದೆ ಸ್ಟಂಪ್‌ ಮೈಕ್‌ ಬಳಿ ತೆರಳಿ "ಕ್ಯಾಮೆರಾಮನ್‌ಗಳು ಮೊದಲು ನಿಮ್ಮ ತಂಡದ ಕಡೆಗೆ ಫೋಕಸ್‌ ಮಾಡಿ, ಎದುರಾಳಿ ತಂಡವನ್ನಲ್ಲ," ಎಂದರು. ಟೀಮ್ ಇಂಡಿಯಾ ವೈಸ್‌ ಕ್ಯಾಪ್ಟನ್‌ ಕೆಎಲ್‌ ರಾಹುಲ್‌ ಕೂಡ ಮಾತಿಗಳಿದು, "ಟೀಮ್ ಇಂಡಿಯಾದ 11 ಆಟಗಾರರ ವಿರುದ್ಧ ಇಡೀ ದಕ್ಷಿಣ ಆಫ್ರಿಕಾ ಆಡುತ್ತಿದೆ," ಎಂದು ಗುಡುಗಿದರು. ಎರಡನೇ ಇನಿಂಗ್ಸ್‌ನಲ್ಲಿ 212 ರನ್‌ಗಳ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗಳ ನಷ್ಟದಲ್ಲಿ 101 ರನ್‌ಗಳನ್ನು ಗಳಿಸಿದೆ. ಕೈಲಿರುವ 8 ವಿಕೆಟ್‌ಗಳಲ್ಲಿ ಕೇವಲ 111 ರನ್‌ಗಳನ್ನು ಮಾತ್ರವೇ ಗಳಿಸಬೇಕಿದೆ. ಇದಕ್ಕೂ ಮುನ್ನ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಎರಡನೇ ಇನಿಂಗ್ಸ್‌ನಲ್ಲಿ ರಿಷಭ್‌ ಪಂತ್‌ ಏಕಾಂಗಿ ಹೋರಾಟ ನಡೆಸಿ ಅಜೇಯ 100 ರನ್‌ ಗಳಿಸುವ ಮೂಲಕ ಭಾರತ ತಂಡಕ್ಕೆ ಸವಾಲಿನ ಮೊತ್ತ ತಂದುಕೊಟ್ಟರು. 2ನೇ ಇನಿಂಗ್ಸ್‌ನಲ್ಲಿ ಭಾರತ 198 ರನ್‌ಗಳಿಗೆ ಆಲ್‌ಔಟ್‌ ಆದರೂ ಎದುರಾಳಿಗೆ 212 ರನ್‌ಗಳ ಗುರಿ ನೀಡಿತು. ಮೊದಲ ಇನಿಂಗ್ಸ್‌ನಲ್ಲಿ ಭಾರತಕ್ಕೆ 13 ರನ್‌ಗಳ ಮುನ್ನಡೆ ಸಿಕ್ಕಿತ್ತು. ಕೇಪ್‌ ಟೌನ್‌ ಟೆಸ್ಟ್‌ ಪಂದ್ಯದ ಸಂಕ್ಷಿಪ್ತ (ಭಾರತದ 2ನೇ ಇನಿಂಗ್ಸ್‌ ಅಂತ್ಯಕ್ಕೆ)ಭಾರತ: ಮೊದಲ ಇನಿಂಗ್ಸ್‌ 77.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್‌ಔಟ್‌ (ಕೆಎಲ್ ರಾಹುಲ್ 12, ಮಯಾಂಕ್‌ ಅಗರ್ವಾಲ್‌ 15, ಚೇತೇಶ್ವರ್‌ ಪೂಜಾರ 43, ವಿರಾಟ್‌ ಕೊಹ್ಲಿ 79, ರಿಷಭ್ ಪಂತ್‌ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್‌ 55ಕ್ಕೆ 3, ಡುವಾನ್‌ ಓಲಿವಿಯರ್‌ 42ಕ್ಕೆ 1, ಕೇಶವ್‌ ಮಹಾರಾಜ್‌ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1). ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌ 76.3 ಓವರ್‌ಗಳಲ್ಲಿ 210 ರನ್‌ಗಳಿಗೆ ಆಲ್‌ಔಟ್‌ (ಕೇಶವ್‌ ಮಹಾರಾಜ್‌ 25, ಕೀಗನ್‌ ಪೀಟರ್ಸನ್‌ 72, ವ್ಯಾನ್‌ ಡೆರ್‌ ಡುಸೆನ್‌ 21, ತೆಂಬಾ ಬವೂಮ 28; ಜಸ್‌ಪ್ರೀತ್‌ ಬುಮ್ರಾ 42ಕ್ಕೆ 5, ಉಮೇಶ್‌ ಯಾದವ್‌ 64ಕ್ಕೆ 2, ಮೊಹಮ್ಮದ್‌ ಶಮಿ 39ಕ್ಕೆ 2). ಭಾರತ: ಎರಡನೇ ಇನಿಂಗ್ಸ್‌ 67.3 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲ್‌ಔಟ್‌ (ವಿರಾಟ್‌ ಕೊಹ್ಲಿ 29, ರಿಷಭ್ ಪಂತ್‌ ಅಜೇಯ 100; ಮಾರ್ಕೊ ಯೆನ್ಸನ್‌ 36ಕ್ಕೆ 4, ಲುಂಗಿ ಎನ್ಗಿಡಿ 21ಕ್ಕೆ 3, ಕಗಿಸೊ ರಬಾಡ 51ಕ್ಕೆ 3).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/339ybA8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...