ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ ನೇರ ಹೊಣೆ: ಶಿವಸೇನೆ ಆರೋಪ

ಪಣಜಿ: ಪ್ರತಿಪಕ್ಷಗಳ ಮೈತ್ರಿಕೂಟ ಸೇರಲು ನಿರಾಕರಿಸಿದ ಕಾಂಗ್ರೆಸ್‌ ತೀರ್ಮಾನವನ್ನು ಖಂಡಿಸಿರುವ ಶಿವಸೇನೆಯು, ಗೋವಾದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಅದರ ಹೊಣೆಯನ್ನು ಕಾಂಗ್ರೆಸ್‌ ಹೊರಬೇಕಾಗುತ್ತದೆ ಎಂದು ಹೇಳಿದೆ. ಬಿಜೆಪಿ ವಿರುದ್ಧ ಹೋರಾಟ ನಡೆಸಲು ಮೈತ್ರಿಕೂಟ ರಚಿಸುವ ಸಂಬಂಧ ಕಾಂಗ್ರೆಸ್‌ ನಾಯಕರಾದ ದಿನೇಶ್‌ ಗುಂಡೂರಾವ್‌, ದಿಗಂಬರ್‌ ಕಾಮತ್‌ ಮತ್ತು ಗಿರೀಶ್‌ ಚೋಡಂಕರ್‌ ಜತೆ ನಮ್ಮ ಪಕ್ಷದ ಮುಖಂಡರು ಸಭೆ ನಡೆಸಿದರು. ಎನ್‌ಸಿಪಿ, ಗೋವಾ ಫಾರ್ವರ್ಡ್‌ ಪಾರ್ಟಿ, ಶಿವಸೇನೆ, ಕಾಂಗ್ರೆಸ್‌ ಒಳಗೊಂಡ ಮೈತ್ರಿಕೂಟ ರಚಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಕಾಂಗ್ರೆಸ್‌ ಮೈತ್ರಿಗೆ ನಿರಾಕರಿಸಿತು. ಇದರಿಂದ ಮತ ವಿಭಜನೆಯಾಗಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಅದಕ್ಕೆ ಕಾಂಗ್ರೆಸ್‌ ನೇರ ಹೊಣೆ ಎಂದು ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಬ್ಯಾನರ್ಜಿ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಮೈತ್ರಿಗಾಗಿ ಕಾಂಗ್ರೆಸ್‌ ಜತೆ ಮಾತುಕತೆ ನಡೆಸಿದೆವು. ಆದರೆ ಚುನಾವಣಾ ಮೈತ್ರಿಗೆ ಆ ಪಕ್ಷ, ವಿಶೇಷವಾಗಿ ಪಿ.ಚಿದಂಬರಂ ಒಪ್ಪಲೇ ಇಲ್ಲ. ಇದರಿಂದ ಬಿಜೆಪಿಗೆ ಅನುಕೂಲವಾಗುವುದು ನಿಶ್ಚಿತ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಚಿದಂಬರಂ ಅವರೇ ಅದಕ್ಕೆ ಹೊಣೆಗಾರರಾಗುತ್ತಾರೆ’ ಎಂದು ಅಭಿಷೇಕ್‌ ಹೇಳಿದ್ದಾರೆ. ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌, ಎನ್‌ಸಿಪಿ, ಟಿಎಂಸಿ, ಶಿವಸೇನೆಗಳು ಒಗ್ಗೂಡಿ ಚುನಾವಣೆ ಎದುರಿಸುವುದು ಉತ್ತಮ ಎಂದು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಕೆಲದಿನಗಳ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಬಳಿಕ ಟಿಎಂಸಿ, ಶಿವಸೇನೆಗಳು ಕಾಂಗ್ರೆಸ್‌ ಜತೆ ಮೈತ್ರಿ ಮಾತುಕತೆ ನಡೆಸಲು ಮುಂದಾಗಿದ್ದವು. ‘ಗೋವಾದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಮಾತ್ರ ಪ್ರಬಲ ಪೈಪೋಟಿ ನೀಡಬಲ್ಲದು. ಉಳಿದ ಪಕ್ಷಗಳು ಬಿಜೆಪಿಯೇತರ ಮತಗಳನ್ನು ವಿಭಜಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತವೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದರು.


from India & World News in Kannada | VK Polls https://ift.tt/33ykb37

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...