ರಾಜ್ಯದಲ್ಲಿ 46,426 ಹೊಸ ಕೋವಿಡ್‌ ಪ್ರಕರಣ, 32 ಸೋಂಕಿತರ ಸಾವು!

ಹೊಸದಿಲ್ಲಿ: ರಾಜ್ಯದಲ್ಲಿ ಸೋಮವಾರ 46,426 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ ಸೋಂಕಿನಿಂದಾಗಿ 32 ಮೃತಪಟ್ಟಿದ್ದಾರೆ. ಇಂದು ಒಂದೇ ದಿನ 41,703 ಮಂದಿ ಸೋಂಕಿತರು ಗುಣವಾಗಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 31,62,977 ಮಂದಿ ಸೋಂಕಿತರು ಗುಣವಾಗಿದ್ದಾರೆ. ಆದರೆ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,62,487ಕ್ಕೆ ಏರಿಕೆಯಾಗಿದೆ. ಇಂದು 32 ಸೋಂಕಿತರು ಮೃತಪಟ್ಟಿರುವುದು ಸೇರಿದಂತೆ ಇದುವರೆಗೆ ಒಟ್ಟು 38,614 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬರೋಬ್ಬರಿ ಶೇ.32.95ಕ್ಕೆ ತಲುಪಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 21,569 ಕೋವಿಡ್‌ ಪ್ರಕರಣ ವರದಿಯಾಗಿದೆ. ಮೈಸೂರಿನಲ್ಲಿ 4,105 ಮಂದಿಗೆ ಸೋಂಕು ತಗುಲಿದೆ. ಇಂದು ಏಳು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 1 ಸಾವಿರದ ಗಡಿ ದಾಟಿವೆ. ಜಿಲ್ಲಾವಾರು ಪ್ರಕರಣಗಳ ಸಂಖ್ಯೆ ಬಾಗಲಕೋಟೆ 291, ಬಳ್ಳಾರಿ 817, ಬೆಳಗಾವಿ 625, ಬೆಂಗಳೂರು ಗ್ರಾಮಾಂತರ 1,607, ಬೆಂಗಳೂರು ನಗರ 21,569, ಬೀದರ್ 284, ಚಾಮರಾಜನಗರ 656, ಚಿಕ್ಕಬಳ್ಳಾಪುರ 905, ಚಿಕ್ಕಮಗಳೂರು 144, ಚಿತ್ರದುರ್ಗ 642, ದಕ್ಷಿಣ ಕನ್ನಡ 655, ದಾವಣಗೆರೆ 467, ಧಾರವಾಡ 1,407, ಗದಗ 257, ಹಾಸನ 1,908, ಹಾವೇರಿ 304, ಕಲಬುರಗಿ 379, ಕೊಡಗು 657, ಕೋಲಾರ 661, ಕೊಪ್ಪಳ 525, ಮಂಡ್ಯ 1,837, ಮೈಸೂರು 4,105, ರಾಯಚೂರು 281, ರಾಮನಗರ 288, ಶಿವಮೊಗ್ಗ 537, ತುಮಕೂರು 2,960, ಉಡುಪಿ 677, ಉತ್ತರ ಕನ್ನಡ 626, ವಿಜಯಪುರ 270 ಮತ್ತು ಯಾದಗಿರಿಯಲ್ಲಿ 85 ಪಾಸಿಟಿವ್ ಪ್ರಕರಣ ದಾಖಲಾಗಿದೆ.


from India & World News in Kannada | VK Polls https://ift.tt/3nQjh8H

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...