‘ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅವರೇ ಮಂತ್ರಿಗಳಾಗಬೇಕೆ? ನಮಗೆ ಆ ಅರ್ಹತೆ ಇಲ್ಲವೇ?’; ರೇಣುಕಾಚಾರ್ಯ

ಹೊನ್ನಾಳಿ: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅವರೇ ಮಂತ್ರಿಗಳಾಗಬೇಕೆ? ನಮಗೆ ಆ ಅರ್ಹತೆಯೇ ಇಲ್ಲವೇ?’ ಹೀಗಂತ ತಾಳ್ಮೆಯ ಕಟ್ಟೆಯೊಡೆಯುವಂತೆ ಪ್ರತಿಕ್ರಿಯೆ ನೀಡಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮಗೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇವೆ, ಮಾರ್ಚ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಬೇಡ, ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿ. ಅಗತ್ಯ ಬಿದ್ದರೆ ನಾವೂ ದಿಲ್ಲಿಗೆ ಹೋಗುತ್ತೇವೆ’ ಎಂದು ಕಡ್ಡಿ ತುಂಡಾಗುವಂತೆ ಹೇಳಿದರು. ಸಚಿವ ಸಂಪುಟದಲ್ಲಿ ಈಗ ನಾಲ್ಕು ಸ್ಥಾನಗಳು ಖಾಲಿ ಇವೆ. ಹಲವು ಬಾರಿ ಸಚಿವರಾದವರು ಹೊಸಬರಿಗೆ ಅವಕಾಶ ಮಾಡಿಕೊಡುವ ಔದಾರ್ಯ ತೋರಬೇಕು. ಇದು ಚುನಾವಣಾ ವರ್ಷ. ಹಾಗಾಗಿ ವಿಳಂಬ ಮಾಡಿ ಸಚಿವ ಸ್ಥಾನ ನೀಡಿದರೆ ಉಪಯೋಗವಿಲ್ಲ. ಕೊಡುವುದಾದರೆ ಬೇಗ ಕೊಡಿ’ ಎಂದು ಆಗ್ರಹಿಸಿದರು. ‘ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರ ಪತನವಾಗಲು ನಾನು, ಯತ್ನಾಳ್‌ ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು. ಆ ಹಿನ್ನೆಲೆಯಲ್ಲಿ ನಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದ ಎಂಪಿ ರೇಣುಕಾಚಾರ್ಯ, ‘ಸಮಸ್ಯೆಗಳ ಜೊತೆಗೆ ಆಗಬೇಕಾದ ಕೆಲಸಗಳ ಬಗ್ಗೆ ಹೇಳೋಣವೆಂದರೆ ಕೆಲ ಸಚಿವರು ಫೋನ್‌ ಕೂಡ ತೆಗೆಯುವುದಿಲ್ಲ. ಶಾಸಕರು ಪತ್ರಗಳನ್ನು ಕೊಟ್ಟರೆ ಸಚಿವರು ಉತ್ತರ ಕೊಡುವ ಬದಲು, ಅವರ ಆಪ್ತ ಸಹಾಯಕರು ಷರಾ ಬರೆಯುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವರಿಷ್ಠರ ನಿಗಾದಲ್ಲಿಸಂಪುಟ ವಿಸ್ತರಣೆಬೆಂಗಳೂರು: ಸಂಪುಟ ವಿಸ್ತರಣೆ ವಿಚಾರ ವರಿಷ್ಠರ ಗಮನದಲ್ಲಿದೆ ಎಂದು ಸಿಎಂ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನದ ಬಗ್ಗೆ ಆಕಾಂಕ್ಷಿಗಳಿಗೆ ನಿರೀಕ್ಷೆಯಿದ್ದರೆ ಅದು ತಪ್ಪಲ್ಲ. ಆದರೆ, ಯಾವಾಗ ಈ ಪ್ರಕ್ರಿಯೆ ಕೈಗೊಳ್ಳಬೇಕು? ಹೇಗೆ ಕೈಗೊಳ್ಳಬೇಕು ಎನ್ನುವುದು ವರಿಷ್ಠರ ಗಮನದಲ್ಲಿದೆ. ಅದರಂತೆ ಮುಂದಿನ ತೀರ್ಮಾನವಾಗಲಿದೆ’ ಎಂದರು. ‘ಸಂಪುಟದಲ್ಲಿ4 ಸ್ಥಾನಗಳು ಖಾಲಿಯಿವೆ. ಈ ಪ್ರಕ್ರಿಯೆ ಹೇಗೆ ನಡೆಯಬೇಕು ಎನ್ನುವುದು ಪಕ್ಷದ ವರಿಷ್ಠರ ಗಮನದಲ್ಲಿದೆ. ನಾನು ಕೂಡ ಅವರ ಗಮನಕ್ಕೆ ತರುತ್ತೇನೆ. ವರಿಷ್ಠರು ಕರೆದು ಮಾತನಾಡುವಾಗ ಎಲ್ಲ ವಿವರ ನೀಡುತ್ತೇನೆ’ ಎಂದರು. ಇನ್ನು ‘ನಿಗಮ ಮಂಡಳಿ ನೇಮಕ ಸಂಬಂಧ ಪಕ್ಷದ ಕಡೆಯಿಂದ ಪಟ್ಟಿ ಸಿದ್ಧವಾಗಿ ಬಂದ ಮೇಲೆ ಪ್ರಕ್ರಿಯೆ ನಡೆಯಲಿದೆ. ಇದು ಪಕ್ಷದಲ್ಲಿ ನಡೆಯುವ ಚರ್ಚೆಯ ಮೇಲೆ ಅವಲಂಬಿತವಾಗಿರುತ್ತದೆ. ಈವರೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಪಕ್ಷದಿಂದ ವರದಿ ಬಂದ ಬಳಿಕ ಅದರ ಆಧಾರದಲ್ಲಿ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಸಿಎಂ ತಿಳಿಸಿದರು.


from India & World News in Kannada | VK Polls https://ift.tt/3AvEU3t

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...