ಕೊರೊನಾ ಪರೀಕ್ಷೆಯನ್ನೇ ಕಡಿಮೆ ಮಾಡಿವೆ ಹಲವು ರಾಜ್ಯಗಳು..! ಇದು ಸರಿಯಲ್ಲ ಎಂದಿದೆ ಕೇಂದ್ರ ಸರ್ಕಾರ

: ವೈರಸ್ ರೂಪಾಂತರಿ ತಳಿ ಓಮಿಕ್ರಾನ್‌ ಹಾವಳಿಯ ನಡುವೆಯೇ, ಹಲವು ರಾಜ್ಯಗಳಲ್ಲಿ ಶಂಕಿತ ಸೋಂಕಿತರ ಟೆಸ್ಟಿಂಗ್‌ ಸಂಖ್ಯೆಯನ್ನು ಕಡಿಮೆ ಮಾಡಲಾಗಿರುವುದು ಗಮನಕ್ಕೆ ಬಂದಿದೆ. 'ಇದು ಸರಿಯಲ್ಲ. ಪಾಸಿಟಿವಿಟಿ ಪ್ರಮಾಣ ಸರಿಯಾಗಿ ಅರಿತು ಕ್ರಮ ಕೈಗೊಳ್ಳಲು ಪ್ರದೇಶವಾರು ಟೆಸ್ಟಿಂಗ್‌ ಸಂಖ್ಯೆ ಹೆಚ್ಚಬೇಕು' ಎಂದು ಎಲ್ಲಾ ರಾಜ್ಯ ಸರಕಾರಗಳಿಗೆ ಮಂಗಳವಾರ ನಿರ್ದೇಶನ ನೀಡಿದೆ. ಕೊರೊನಾ ವೈರಾಣು ಪ್ರಸರಣ ವೇಗ ಹಾಗೂ ಸಾಂಕ್ರಾಮಿಕ ಮುಗಿಯುತ್ತಿದೆಯೋ ಅಥವಾ ಹೊಸ ಅಲೆ ಏಳುತ್ತಿದೆಯೋ ಎಂದು ಅರಿಯಲು ಇರುವ ನಿಖರ ಮಾರ್ಗವೆಂದರೆ, ದಿನ ನಿತ್ಯ ಹೆಚ್ಚೆಚ್ಚು ಸಂಖ್ಯೆಯಲ್ಲಿ ಕೊರೊನಾ ಟೆಸ್ಟಿಂಗ್‌ ನಡೆಸುವುದು ಮಾತ್ರವೇ ಆಗಿದೆ. ಸೋಂಕಿತರ ಚಿಕಿತ್ಸೆಗೆ ಪೂರಕವಾದ ಮಾರ್ಗ ಸೂಚಿಗಳನ್ನು ಪರಿಷ್ಕರಿಸಿ, ಪರಿಣಾಮಕಾರಿಯಾಗಿ ಜಾರಿ ಮಾಡಲು ಕೂಡ ಟೆಸ್ಟಿಂಗ್‌ ಅತಿ ಹೆಚ್ಚು ಸಂಖ್ಯೆಯಲ್ಲಿ ನಡೆಯಬೇಕಿದೆ ಎಂದು ಸಚಿವಾಲಯವು ತಿಳಿಸಿದೆ. ಒಂದು ವೇಳೆ ಸೋಂಕಿತರಲ್ಲಿ ಕೆಮ್ಮು ಹೆಚ್ಚಾದರೆ ವೈದ್ಯರು ಕ್ಷಯ ರೋಗದ ಪರೀಕ್ಷೆಯನ್ನು ಕೂಡ ನಡೆಸಬೇಕು. ಚಿಕಿತ್ಸೆಗಾಗಿ ಸ್ಟಿರಾಯ್ಡ್‌ಗಳ ಬಳಕೆ ಬೇಡವೇ ಬೇಡ ಎಂದು ಸಚಿವಾಲಯವು ಖಡಕ್‌ ನಿರ್ದೇಶನ ನೀಡಿದೆ. ಮಂಗಳವಾರ ಬೆಳಗ್ಗೆ ವರದಿಯಾದಂತೆ, ಹಿಂದಿನ 24 ಗಂಟೆಗಳಲ್ಲಿ ದೇಶಾದ್ಯಂತ 2.38 ಲಕ್ಷ ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ಸೋಮವಾರದ ಹೋಲಿಕೆಯಲ್ಲಿ ಸುಮಾರು 20 ಸಾವಿರ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. 50 ಲಕ್ಷ ಮುಂಜಾಗ್ರತೆ ಡೋಸ್‌: ಆರೋಗ್ಯ ಸೇವೆ ಸಿಬ್ಬಂದಿ ಸೇರಿದಂತೆ ಫ್ರಂಟ್‌ ಲೈನ್‌ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ಗಂಭೀರ ಕಾಯಿಲೆಯುಳ್ಳವರಿಗೆ ನೀಡಲಾಗುತ್ತಿರುವ ಮುಂಜಾಗ್ರತೆ ಡೋಸ್‌ ಸಂಖ್ಯೆ 50 ಲಕ್ಷ ದಾಟಿದೆ. ಮಂಗಳವಾರ ಒಂದೇ ದಿನ 80 ಲಕ್ಷ ಡೋಸ್‌ ಕೊರೊನಾ ನಿರೋಧಕ ಲಸಿಕೆ ನೀಡಲಾಗಿದೆ. ಒಟ್ಟಾರೆಯಾಗಿ 158 ಕೋಟಿಗೂ ಹೆಚ್ಚು ಡೋಸ್‌ ದೇಶಾದ್ಯಂತ ಜನರು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರು ಹೇಳಿದ್ದಾರೆ. 50% ಮಕ್ಕಳಿಗೆ ಲಸಿಕೆ: 15 ರಿಂದ 18 ವರ್ಷಗಳ ನಡುವಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನದ ಅಡಿಯಲ್ಲಿ ದೇಶದ ಒಟ್ಟಾರೆ ಮಕ್ಕಳ ಜನಸಂಖ್ಯೆಯ ಪೈಕಿ ಶೇ.50ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಇವರೆಲ್ಲರೂ ಕೊರೊನಾ ದಾಳಿಯನ್ನು ಸಮರ್ಥವಾಗಿ ಎದುರಿಸುವ ಭರವಸೆ ಇದೆ ಎಂದು ಸಚಿವ ಮಂಡಾವಿಯ ಅವರು ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/3tHH92a

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...