ಕೊರೊನಾ ವೈರಸ್ ಎಫೆಕ್ಟ್‌: ಪೊಲೀಸ್ ಠಾಣೆ ಎದುರಲ್ಲೇ 'ಸಾಮಾಜಿಕ ಅಂತರ'ದ ಮದುವೆ..!

ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ಮುಂದೂಡಿಕೆಯಾಗುತ್ತಿವೆ. ಈ ನಡುವೆ ಜೋಡಿಯೊಂದು ಸರ್ಕಾರದ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಿ ಮಾಡಿಕೊಂಡು ಗಮನ ಸೆಳೆದಿದೆ..! ಸಾಮಾಜಿಕ ಅಂತರದ ಮದುವೆ..! ಈ ಮದುವೆಯಲ್ಲಿ ಗಂಡು-ಹೆಣ್ಣು ಬಿಟ್ಟರೆ ಬೇರೆ ಯಾರೂ ಸಂಬಂಧಿಕರೇ ಇರಲಿಲ್ಲ..! ಗಂಡು-ಹೆಣ್ಣಿನ ಮನೆ ಕಡೆಯವರೂ ಈ ಮದುವೆಯಲ್ಲಿ ಭಾಗಿ ಆಗಿರಲಿಲ್ಲ. ಈ ಮದುವೆಗೆ ಕಲ್ಯಾಣ ಮಂಟಪವನ್ನೂ ಬುಕ್ ಮಾಡಿರಲಿಲ್ಲ. ಠಾಣೆಯ ಎದುರೇ ಈ ಮದುವೆ ನಡೆದುಹೋಯ್ತು. ಪುರೋಹಿತರು, ಗಟ್ಟಿಮೇಳದ ಸದ್ದು ಇಲ್ಲಿ ಇರಲೇ ಇಲ್ಲ. ವಧು-ವರ ಹಾರ ಬದಲಾಯಿಸಿಕೊಂಡರು ಅಷ್ಟೇ. ಗುರು-ಹಿರಿಯರ ಸ್ಥಾನದಲ್ಲಿ ಠಾಣೆಯ ಪೊಲೀಸರೇ ಇದ್ದರು. ವಿವಾಹದ ಬಳಿಕ ಠಾಣೆಯ ಪೊಲೀಸ್ ಅಧಿಕಾರಿಗಳ ಕಾಲಿಗೆರಗಿದ ವಧು-ವರರು ಅವರಿಂದ ಆಶೀರ್ವಾದ ಪಡೆದರು. ಬಳಿಕ, ಪೊಲೀಸರಿಗೆ ಹಾಗೂ ಅಲ್ಲಿನ ಕೆಲವೇ ಕೆಲವು ಸ್ಥಳೀಯರಿಗೆ ಸಿಹಿ ಹಂಚಿದ ಜೋಡಿ, ತಮ್ಮ ಮನೆ ಕಡೆಗೆ ಹೆಜ್ಜೆ ಹಾಕಿತು. ಸಾಮಾಜಿಕ ಅಂತರ ಮರೆಯಲಿಲ್ಲ..! ವಿವಾಹದ ಆರಂಭದಿಂದ ಹಿಡಿದು, ಕಾರ್ಯಕ್ರಮದ ಅಂತ್ಯದವರೆಗೆ ಈ ಜೋಡಿ ಸಾಮಾಜಿಕ ಅಂತರ ಮರೆಯಲಿಲ್ಲ. ಒಂದು ಮೀಟರ್ ದೂರದಲ್ಲೇ ನಿಂತು ಪೊಲೀಸರ ನೆರವಿನೊಂದಿಗೆ ನಡೆದ ಈ ಮದುವೆ ಕಾರ್ಯಕ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


from India & World News in Kannada | VK Polls https://ift.tt/2Uz1Awd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...