ದೇಶಾದ್ಯಂತ ದಿನೇ ದಿನೇ ಕುಗ್ಗುತ್ತಿದೆ ಕೋವಿಡ್: ಅಂತ್ಯದತ್ತ ಕೊರೊನಾ 3ನೇ ಅಲೆ..?

: ಕಳೆದ ನಾಲ್ಕು ದಿನಗಳಿಂದ ನಿತ್ಯ ಸೋಂಕಿತರ ಸಂಖ್ಯೆ ಕಡಿಮೆ ದಾಖಲಾಗುತ್ತಿರುವುದು ಮತ್ತು ಕಳೆದೊಂದು ವಾರ ಸರಾಸರಿ ಪಾಸಿಟಿವಿಟಿ ಪ್ರಮಾಣ ಸ್ಥಿರವಾಗಿರುವ ಆಧಾರದ ಮೇಲೆ ದೇಶದಲ್ಲಿ ಕೊರೊನಾ ಮೂರನೇ ಅಲೆಯು ಅಂತ್ಯದತ್ತ ಸಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವಾರ ನಿತ್ಯ ಸೋಂಕಿತರ ಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚು ದಾಖಲಾದ ಬಳಿಕ ದೈನಂದಿನ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡು ಬಂದಿಲ್ಲ. ಬದಲಿಗೆ 2.5 ಲಕ್ಷದ ಆಸುಪಾಸಿನಲ್ಲಿ ಸ್ಥಿರವಾಗಿದೆ. ಪ್ರಮುಖವಾಗಿ ದಿಲ್ಲಿ, ಮುಂಬಯಿ, ಚೆನ್ನೈನಂಥ ಮಹಾನಗರಗಳಲ್ಲಿ ಓಮಿಕ್ರಾನ್‌ ಪ್ರೇರಿತ ಕೋವಿಡ್‌-19 ಸೋಂಕಿನ ಆರ್ಭಟ ಬಹಳಷ್ಟು ಕಡಿಮೆ ಆಗಿದೆ. ಸಾಮಾನ್ಯ ಜ್ವರ , ಸೌಮ್ಯ ರೋಗ ಲಕ್ಷಣಗಳಾದ ಕೆಮ್ಮು ಹಾಗೂ ಶೀತದಂತಹ ಚಳಿಗಾಲದ ಸಮಸ್ಯೆಗಳಿಂದ ಮಾತ್ರವೇ ಜನರು ಬಳಲುತ್ತಿದ್ದಾರೆ. ಮುಖ್ಯವಾಗಿ ಇವರೆಲ್ಲರೂ 4-5 ದಿನಗಳಲ್ಲಿ ಪೂರ್ಣವಾಗಿ ಚೇತರಿಕೆ ಕಾಣುತ್ತಿದ್ದಾರೆ. 'ದಕ್ಷಿಣ ಆಫ್ರಿಕಾ ಸೇರಿದಂತೆ ಅಮೆರಿಕ, ಯುರೋಪ್‌ಗಳಲ್ಲಿ ಮೂರನೇ ಅಲೆ ಕಾಣಿಸಿಕೊಂಡಿದ್ದಕ್ಕೂ, ನಮ್ಮ ದೇಶಕ್ಕೂ ಬಹಳ ವ್ಯತ್ಯಾಸವಿದೆ. ಹೆಚ್ಚಿನ ಜನರು ಕೊರೊನಾ ನಿರೋಧಕ ಲಸಿಕೆಯನ್ನು ಸೂಕ್ತ ಸಮಯಕ್ಕೆ ಪಡೆದಿರುವುದು ಮೂರನೇ ಅಲೆ ಕ್ಷೀಣಿಸಲು ಪ್ರಮುಖ ಕಾರಣ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ 2ನೇ ಅಲೆಯ ಆರ್ಭಟದ ವೇಳೆ ಉತ್ತುಂಗ ಸ್ಥಿತಿಯಲ್ಲಿ ದಿನವೊಂದಕ್ಕೆ ದೇಶಾದ್ಯಂತ ಸುಮಾರು 4 ಸಾವಿರ ಸೋಂಕಿತರು ಮೃತಪಡುತ್ತಿದ್ದರು. ಆದರೆ 3ನೇ ಅಲೆಯ ಉತ್ತುಂಗದಲ್ಲಿ ಈ ಪ್ರಮಾಣ 600ರಷ್ಟಿದೆ. ಎರಡನೇ ಅಲೆ ಉತ್ತುಂಗದಲ್ಲಿ ದೈನಂದಿನ ಕೇಸ್‌ ಗರಿಷ್ಠ 4.14 ಲಕ್ಷ (2021ರ ಮೇ 14) ತಲುಪಿದ್ದರೆ, ಮೂರನೇ ಅಲೆಯಲ್ಲಿ ಜನವರಿ 23ರಂದು 3.37 ಲಕ್ಷ ತಲುಪಿದ್ದು ಗರಿಷ್ಠವಾಗಿದೆ. ಆ ನಂತರ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ವಾರ ದೇಶಾದ್ಯಂತ ಸಕ್ರಿಯ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 22.5 ಲಕ್ಷ ಮುಟ್ಟಿತ್ತು. ಆದರೆ, ಬಳಿಕ ಕ್ರಮೇಣ ನಾಲ್ಕೇ ದಿನಗಳಲ್ಲಿ ಇಳಿಕೆಯಾಗಿ, ಸದ್ಯ 21 ಲಕ್ಷದ ಹತ್ತಿರ ಬಂದಿದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ. 1 ರಷ್ಟಿತ್ತು. ಬಳಿಕ ಏಕಾಏಕಿ ಶೇ. 16-17ರಷ್ಟಕ್ಕೆ ಏರಿಕೆ ಕಂಡಿದೆ. ಕಳೆದೊಂದು ವಾರದಿಂದ ಇದು ಸ್ಥಿರವಾಗಿರುವುದು ಮೂರನೇ ಅಲೆಯ ಉತ್ತುಂಗವನ್ನು ದೇಶ ದಾಟಿದೆ ಎನ್ನುವುದರ ಸುಳಿವು ಆಗಿರಬಹುದು ಎಂದು ತಜ್ಞರು ಆಶಾಭಾವ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಹೊಸ ರೂಪಾಂತರಿ ಪತ್ತೆ 2012 ರಿಂದ 2015ರ ನಡುವೆ ಮಧ್ಯ ಪ್ರಾಚ್ಯದಲ್ಲಿ ಶ್ವಾಸಕೋಶ ಸಂಬಂಧಿ ಗಂಭೀರ ಸೋಂಕಿಗೆ ಕಾರಣವಾದ ವೈರಾಣು ರೂಪಾಂತರ ಹೊಂದುವ ಮೂಲಕ ಹೊಸದಾಗಿ ದಾಳಿ ನಡೆಸಲು ಶುರು ಮಾಡಿದೆ ಎಂದು ಚೀನಾ ವಿಜ್ಞಾನಿಗಳು ಎಚ್ಚರಿಸಿದ್ದಾರೆ. 'ನಿಯೊಕೊವ್‌' (ಎನ್‌ಇಒಸಿಒವಿ) ಎಂದು ಕರೆಯಲಾಗಿರುವ ಈ ರೂಪಾಂತರಿ ವೈರಾಣು ಹೆಚ್ಚಾಗಿ ಬಾವಲಿಗಳಲ್ಲಿ ಕಾಣ ಸಿಗುತ್ತದೆ. ಬಾವಲಿಗಳಲ್ಲಿ ಕಿಣ್ವವೊಂದರ ಮೂಲಕ ಮನುಷ್ಯರ ದೇಹ ಹೊಕ್ಕುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಅನೇಕರಲ್ಲಿ ನಿಯೊಕೊವ್‌ ಸೋಂಕು ಹೆಚ್ಚಿದೆ. ಸಾಮಾನ್ಯ ಕೋವಿಡ್‌-19 ವೈರಾಣುವಿಗಿಂತ ಬೇರೆ ಮಾದರಿಯಲ್ಲಿ ಮನುಷ್ಯನ ದೇಹ ಹೊಕ್ಕುವ 'ನಿಯೊಕೊವ್‌' ಅತ್ಯಂತ ವೇಗವಾಗಿ ಪ್ರಸರಣ ಹೊಂದುವ ಜತೆಗೆ ಮಾರಣಾಂತಿಕ ರೋಗ ಲಕ್ಷಣಗಳನ್ನು ಸೋಂಕಿತರಲ್ಲಿ ಉಂಟು ಮಾಡುತ್ತಿದೆ ಎಂದು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ.


from India & World News in Kannada | VK Polls https://ift.tt/3gcGWvP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...