ಸಂಕ್ರಾಂತಿಗೆ ಈ ಊರಿನ ಕಬ್ಬು ಫೇಮಸ್‌! ಕರಿ ಕಬ್ಬಿಗೆ ಭಾರೀ ಡಿಮ್ಯಾಂಡ್‌; ರೈತರ ಮುಖದಲ್ಲಿ ಸಂತಸ

ಹೊಸಕೋಟೆ: ಸುಗ್ಗಿ ಕಾಲದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಕರಿ ಕಬ್ಬಿಗೆ ತುಂಬಾ ಬೇಡಿಕೆ ಇದೆ. ರಾಜ್ಯದ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯುತ್ತಿದ್ದರೂ ಸಂಕ್ರಾಂತಿಗೆ ಬಹುತೇಕರ ಆಯ್ಕೆ ಈ ಕರಿ ಕಬ್ಬು. ಆದರೆ, ಈ ರೀತಿಯ ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ಮಾತ್ರ ರಾಜ್ಯದಲ್ಲಿ ಅತೀ ವಿರಳ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ಗ್ರಾಮಗಳು ಕರಿ ಕಬ್ಬು ಬೆಳೆಯುವ ಮೂಲಕ ಗಮನ ಸೆಳೆಯುತ್ತಿವೆ. ತಾಲೂಕಿನ ಕೆ.ಮಲ್ಲಸಂದ್ರ ಹಾಗೂ ಭಕ್ತರಹಳ್ಳಿ ಗ್ರಾಮಗಳಲ್ಲಿ ಕರಿಕಬ್ಬು ಬೆಳೆಯುವಲ್ಲಿ ರೈತರು ಮುಂದಿದ್ದು, ಉತ್ತಮ ಇಳುವರಿ ಹೊಂದುತ್ತಿದ್ದಾರೆ. ಸುಮಾರು 80ರಿಂದ 100 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಹೊರ ರಾಜ್ಯದ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಒಂದು ಜೊಲ್ಲೆ ಕಬ್ಬಿನ ಬೆಲೆ 30 ರಿಂದ 35 ರೂ ಇದೆ. ಮುಂಬೈ, ಸೂರತ್‌, ಗುಜರಾತ್‌, ಆಂಧ್ರಪ್ರದೇಶ , ನೆರಯ ತಮಿಳುನಾಡಿನ ಹೊಸೂರಿನಿಂದ ವರ್ತಕರು ಇಲ್ಲಿನ ತೋಟಗಳಿಗೆ ಮುಗಿಬಿದ್ದು ಕಬ್ಬಿನ್ನು ಖರೀದಿ ಮಾಡಿರುವುದರಿಂದ ಸಂಕ್ರಾಂತಿಗೆ ಮುಂಚೆಯೇ ಶೇ.80 ರಷ್ಟು ಕಬ್ಬು ಮಾರಾಟವಾಗಿದೆ. ಕೊರೊನಾತಂಕದ ಮಧ್ಯೆ ಕಬ್ಬು ಉತ್ತಮ ಬೆಲೆಗೆ ಮಾರಾಟವಾಗಿರುವುದು ರೈತರ ಮೊಗದಲ್ಲಿ ಸಂತಸ ತಂದಿದೆ. ಹೊರ ರಾಜ್ಯಗಳಿಂದ ಬೇಡಿಕೆ: ವಾರ್ಷಿಕ ಬೆಳೆಯಾದ ಈ ಕರಿ ಕಬ್ಬು ದೇಶದ ಹಲವಾರು ಭಾಗಗಳಿಗೆ ರಫ್ತು ಆಗುತ್ತಿತ್ತು. ಕೊರೊನಾ ಲಾಕ್‌ಡೌನ್‌ನಿಂದ ಉಂಟಾಗಿದ್ದ ಆರ್ಥಿಕ ಪರಿಸ್ಥಿತಿ ಮಧ್ಯೆ ಕಬ್ಬು ಖರೀದಿ ಮಾಡಲು ವರ್ತಕರು ಬರುತ್ತಾರೋ ಇಲ್ಲವೋ ಎಂಬ ಭಯ ಕಾಡಿತ್ತು. ಆದರೆ, ಹೊರ ರಾಜ್ಯಗಳಿಂದ ಕಬ್ಬು ಖರೀದಿಗೆ ಬೇಡಿಕೆ ಬಂದಿರುವುದು ನಮ್ಮಗೆ ಸಂತಸವನ್ನುಂಟು ಮಾಡಿದೆ ಅಂತಾರೆ ರೈತರು. ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಸುಮಾರು 50 ರಿಂದ 60 ಸಾವಿರ ಖರ್ಚಾಗುತ್ತದೆ. 1.50 ಲಕ್ಷಗಳಿಗೂ ಹೆಚ್ಚು ಲಾಭ ದೊರೆಯುತ್ತದೆ ಎಂಬುದು ಕಬ್ಬು ಬೆಳೆಗಾರರ ಮಾತು. ಈ ಬಾರಿ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರಿನ ಕೊರತೆ ನೀಗಿದೆ. ಈಗಾಗಲೆ ಇಲ್ಲಿ ಬೆಳೆದಿರುವ ಕಬ್ಬು ಶೇ. 80 ರಷ್ಟು ಖಾಲಿಯಾಗಿದೆ. ಇನ್ನೊಂದು ವಾರದೊಳಗಾಗಿ ಸಂಪೂರ್ಣವಾಗಿ ಕಬ್ಬಿನ ತೋಟಗಳು ಖಾಲಿಯಾಗಲಿವೆ. ಸರಕಾರ ಕರಿ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ಕಬ್ಬು ಬೆಳೆಗಾರ ಉಮೇಶ್‌ ಗೌಡ


from India & World News in Kannada | VK Polls https://ift.tt/3zZAQIt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...