ಹೊಸದಿಲ್ಲಿ: ಹರಿಣಗಳ ನಾಡಲ್ಲಿ ಏಕದಿನ ಕ್ರಿಕೆಟ್ ಸರಣಿಯಲ್ಲಿ ಎದುರು 3-0 ಅಂತರದ ವೈಟ್‌ವಾಷ್ ಸೋಲಿನ ಮುಖಭಂಗ ಅನುಭವಿಸಿತು. ಇದರ ಬೆನ್ನಲ್ಲೇ ಸರಣಿಯಲ್ಲಿ ಕಳಾಹೀನ ಪ್ರದರ್ಶನ ನೀಡಿದ ಅನುಭವಿ ಬೌಲರ್‌ಗಳಾದ ಮತ್ತು ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಭಾರತ ತಂಡ ಈಗ ತಾಯ್ನಾಡಿನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು ತಲಾ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳಲ್ಲಿ ಪೈಪೋಟಿ ನಡೆಸಲಿದ್ದು, ಈ ಸರಣಿಗೆ ಟೀಮ್ ಇಂಡಿಯಾ ಬಳಗದಿಂದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಕೈಬಿಡಲಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 6ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ಮೂರೂ ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಕೊರೊನಾ ವೈರಸ್ ಕಾರಣ ಮುಚ್ಚಿದ ಕ್ರೀಡಾಂಗಣಗಳಲ್ಲಿ ಸರಣಿ ಆಯೋಜನೆಗೆ ಬಿಸಿಸಿಐ ನಿರ್ಧರಿಸಿದೆ. ಟಿ20 ಕ್ರಿಕೆಟ್ ಸರಣಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಆಯೋಜನೆ ಆಗಲಿದೆ. ಈ ಮಹತ್ವದ ಸರಣಿ ಸಲುವಾಗಿ ಬಿಸಿಸಿಐ ಆಯ್ಕೆ ಸಮಿತಿ ಜ.25ರಂದೇ ಭಾರತ ತಂಡವನ್ನು ಪ್ರಕಟ ಮಾಡಬೇಕಿತ್ತು. ಈಗ ಎರಡು ದಿನಗಳ ನಂತರ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಲಿದ್ದು, ವಿಂಡೀಸ್ ವಿರುದ್ಧದ ಸರಣಿಗೆ ತಂಡಗಳನ್ನು ಆಯ್ಕೆ ಮಾಡಿದೆ. ಕಳೆದ ವರ್ಷ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡುವ ಮೂಲಕ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಆರ್ ಅಶ್ವಿನ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದರಾದರೂ, ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಯಲ್ಲಿ ಸಂಪೂರ್ಣ ವಿಫಲರಾದರು. ಹೀಗಾಗಿ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಬೇಕಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಿಗೆ ಭಾರತ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆಯುವುದು ಅನುಮಾನವಾಗಿದೆ. ಇದು ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿಗೆ ಬಿಟ್ಟ ನಿರ್ಧಾರವಾಗಿದೆ. ಭಾರತ ತಂಡ ವಿಂಡೀಸ್ ವಿರುದ್ಧದ ಸರಣಿ ಬಳಿಕ ಪ್ರವಾಸಿ ಶ್ರೀಲಂಕಾ ವಿರುದ್ಧ 2 ಟೆಸ್ಟ್‌ಗಳ ಕ್ರಿಕೆಟ್ ಸರಣಿಯನ್ನಾಡಲಿದೆ. ಇನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಗಾಯಗೊಂಡಿದ್ದ ರೋಹಿತ್ ಶರ್ಮಾ ಈಗ ಸಂಪೂರ್ಣ ಚೇತರಿಸಿದ್ದು, ವಿಂಡೀಸ್ ಎದುರು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ. ಆದರೆ, ಗಾಯದಿಂದ ಚೇತರಿಸದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಸರಣಿಯಿಂದ ಹೊರಗುಳಿದಿದ್ದಾರೆ. ಅನುಭವಿ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಿಗೆ ಈ ಸರಣಿಯಲ್ಲಿ ವಿಶ್ರಾಂತಿ ಕೊಡಲಾಗಿದೆ. ಕಳಪೆ ಲಯದಲ್ಲಿರುವ ಭುವನೇಶ್ವರ್ ಕುಮಾರ್ ಅವರಿಗೂ ಭಾರತ ತಂಡದ ಬಾಗಿಲು ಬಹುತೇಕ ಮುಚ್ಚಿದಂತ್ತಾಗಿದೆ. ವಿರುದ್ಧದ ಸರಣಿಯ ಪರಿಷ್ಕೃತ ವೇಳಾಪಟ್ಟಿ ಮೊದಲ ಒಡಿಐ, ಫೆಬ್ರವರಿ 6 (ಅಹ್ಮದಾಬಾದ್) ಎರಡನೇ ಒಡಿಐ, ಫೆಬ್ರವರಿ 9 (ಅಹ್ಮದಾಬಾದ್) ಮೂರನೇ ಒಡಿಐ, ಫೆಬ್ರವರಿ 11 (ಅಹ್ಮದಾಬಾದ್) ಮೊದಲ ಟಿ20, ಫೆಬ್ರವರಿ 16 (ಕೋಲ್ಕತಾ) ಎರಡನೇ ಟಿ20, ಫೆಬ್ರವರಿ 18 (ಕೋಲ್ಕತಾ) ಮೂರನೇ ಟಿ20, ಫೆಬ್ರವರಿ 20 (ಕೋಲ್ಕತಾ)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3u3Ojhp