Hubballi Dharwad Jobs: ಎಫ್ಎಮ್‌ಸಿಜಿ ತರಲಿದೆ ಹುಬ್ಬಳ್ಳಿ ಭಾಗಕ್ಕೆ ಉದ್ಯೋಗ: 400ಕ್ಕೂ ಹೆಚ್ಚು ಸ್ಟಾರ್ಟಪ್‌ಗಳೂ ಕಾರ್ಯಾರಂಭ

Hubballi Dharwad Jobs: ಸ್ಟಾರ್ಟ್‌ ಅಪ್ ಸೇರಿದಂತೆ, ಹೊಸ ಹೊಸ ಕೈಗಾರಿಕೆಗಳು ಹುಬ್ಬಳ್ಳಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಉದ್ಯಮಸ್ನೇಹಿ ಹಾಗೂ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯ ದೊರಕಿಸಿಕೊಟ್ಟ ಹಿನ್ನೆಲೆ ಕೈಗಾರಿಕಾ ಕ್ಷೇತ್ರದಲ್ಲಿ ಹುಬ್ಬಳ್ಳಿ-ಧಾರವಾಡ ದಾಪುಗಾಲು ಇಡುತ್ತಿದೆ.

from India & World News in Kannada | VK Polls https://ift.tt/N1uUlsD

2023 Election: ಕ್ಷೇತ್ರದಲ್ಲಿ ಮಹಿಳೆಯರಿಗೂ ಟಿಕೆಟ್ ಕೊಡಿ- ರಾಯಚೂರಿನಲ್ಲಿ ಮಹಿಳಾ ಅಕಾಂಕ್ಷಿಗಳಿಂದ ಒತ್ತಾಯ

2023 Election: 2023 ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷದಿಂದ ಮಹಿಳಾ ಅಭ್ಯರ್ಥಿಗಳಿಗೂ ಟಿಕೆಟ್‌ ನೀಡಿ ಎಂದು ರಾಯಚೂರು ಜಿಲ್ಲೆಯ, ಎರಡು ಪಕ್ಷದ ಮಹಿಳಾ ಘಟಕ ಒತ್ತಾಯಿಸಿದೆ.

from India & World News in Kannada | VK Polls https://ift.tt/HdTRrmj

ಇಟ್ಟ ಹೆಜ್ಜೆ ಹಿಂದಿಡಲಾರೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಕ್ತಿ ತೋರಿಸಿಕೊಡುವೆ: ಜನಾದರ್ನ ರೆಡ್ಡಿ

Janardhana Reddy in Bidar: ಕಲ್ಯಾಣ ಕಾರ್ನಾಟಕ ಭಾಗದಲ್ಲಿ ತಮ್ಮ ಹೊಸ ಪಕ್ಷವನ್ನು ವಿಸ್ತರಿಸಿಕೊಳ್ಳುತ್ತಿರುವ ಜನಾದರ್ನ ರೆಡ್ಡಿ ಅವರು ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ. ಅವರ ಹೊಸ ಪಕ್ಷದಿಂದಾಗಿ ಬಿಜೆಪಿಗೆ ತಡೆಯಾಗುವ ಸಾಧ್ಯತೆ ಇದ್ದು, ರಾಜಕೀಯ ಕುತೂಹಲಕ್ಕೂ ಕಾರಣವಾಗಿದೆ. ತಾನು ಮಾಡಿರುವ ಪ್ರಯತ್ನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ರಾಜಕೀಯವಾಗಿ ತುಳಿತಕ್ಕೆ ಒಳಗಾಗಿರುವುದಾಗಿ ಸಮಾವೇಶಗಳಲ್ಲಿ ಹೇಳಿಕೊಂಡಿದ್ದಾರೆ.

from India & World News in Kannada | VK Polls https://ift.tt/I7Fm9Hn

KS Eshwarappa- ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಲೇ ಕಾಂಗ್ರೆಸ್ ನಿರ್ನಾಮವಾಗುತ್ತಿದೆ

ಮಂಗಳೂರಿನ ಕಾವೂರಿನಲ್ಲಿ ಭಾನುವಾರ ಸಂಜೆ ನಡೆದ ವಿಜಯ ಸಂಕಲ್ಪ ಯಾತ್ರೆ ಸಮಾರಂಭದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ಕೇಂದ್ರ ಸರಕಾರ ನೀಡಿದ ಅಕ್ಕಿಯನ್ನು ಅನ್ನಭಾಗ್ಯದ ಮೂಲಕ ಸಿದ್ದರಾಮಯ್ಯ ವಿತರಿಸಿ ತನ್ನದೆಂದು ಹೇಳಿಕೊಂಡಿದ್ದಾರೆ. ಯಾರದೋ ಕೂಸಿಗೆ ಇವರ ಹೆಸರು ಎಂದು ಮೂದಲಿಸಿದ್ದಾರೆ. ಸಿದ್ದರಾಮಯ್ಯಗೆ ಚುನಾವಣೆ ಹತ್ತಿರ ಬಂದಾಗ ಹಿಂದೂಗಳ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ತಮ್ಮನ್ನು ತಾವು ಜಾತ್ಯತೀತರು ಎನ್ನುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನಕ್ಕಾಗಿ ತಮ್ಮ ಸಮುದಾಯದವರನ್ನು ಓಲೈಸುತ್ತಾರೆ ಎಂದು ಟೀಕೆ ಮಾಡಿದರು.

from India & World News in Kannada | VK Polls https://ift.tt/tOXNCEH

Bengaluru - Mysuru Expressway Bandh: ಮೋದಿ ಕಾರ್ಯಕ್ರಮ; ಬೆಳಿಗ್ಗೆಯಿಂದಲೇ ಮೈಸೂರು ಬೆಂಗಳೂರು ದಶಪಥದಲ್ಲಿ ವಾಹನ ಸಂಚಾರ ಬಂದ್‌

Bengaluru - Mysuru Expressway: ಪ್ರಧಾನಿ ಮೋದಿ ಮೈಸೂರು ಬೆಂಗಳೂರು ದಶಪಥ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆ ಭದ್ರತಾ ದೃಷ್ಠಿಯಿಂದ ಭಾನುವಾರ ದಿನವಿಡೀ ದಶಪಥವನ್ನು ಬಂದ್‌ ಮಾಡಲಾಗಿದೆ. ಈ ಮಾರ್ಗದ ವಾಹನಗಳಿಗೆ ಬದಲಿಮಾರ್ಗ ಸೂಚಿಸಲಾಗಿದೆ.

from India & World News in Kannada | VK Polls https://ift.tt/efqgNF1

PM Modi Road Show Mandya: ಮೋದಿ ರೋಡ್‌ಶೋ ಮಾರ್ಗದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರದ ಹೆಸರು ರಾತ್ರೋರಾತ್ರಿ ತೆರವು

PM Modi Road Show Mandya: ಪ್ರಧಾನಿ ರೋಡ್‌ ಶೋ ಹಿನ್ನೆಲೆ ಮಂಡ್ಯದಲ್ಲಿ ಟಿಪ್ಪು ಕೊಂದಿದ್ದಾರೆ ಎಂದು ಬಿಂಬಿಸಲಾಗಿರುವ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರ ಹೆಸರಿನ ಮಹಾದ್ವಾರವನ್ನು ನಿರ್ಮಿಸಲಾಗಿತ್ತು. ಈ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬೆನ್ನೆಲ್ಲೆ ತೆರವು ಮಾಡಲಾಗಿದೆ.

from India & World News in Kannada | VK Polls https://ift.tt/Gm6lBZx

Bengaluru Hospitals: ಬೆಂಗಳೂರಲ್ಲಿ 28 ಸ್ಮಾರ್ಟ್‌ ವರ್ಚುಯಲ್‌ ಕ್ಲಿನಿಕ್‌ಗೆ ಚಾಲನೆ

Bengaluru Hospitals: ಬಿಬಿಎಂಪಿಯಲ್ಲಿ ಸ್ಮಾರ್ಟ್‌ ವರ್ಚುವಲ್ ಕ್ಲಿನಿಕ್‌ಗಳು ಕಾರ್ಯಾರಂಭಗೊಳ್ಳಲಿವೆ. ಆನ್‌ಲೈನ್‌ ಮೂಲಕ ಆರೋಗ್ಯ ಸೇವೆ ಲಭ್ಯವಿದ್ದು, ಸುಧಾರಿತ ಚಿಕಿತ್ಸಾ ಕ್ರಮಗಳು ಇರಲಿವೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲೇ ಈ ಸೇವೆ ಲಭ್ಯ ಇರಲಿದೆ.

from India & World News in Kannada | VK Polls https://ift.tt/V3HpJX4

KS Eshwarappa- ಪತ್ರಕರ್ತರೇ ಬರೀಬೇಡಿ... ಎನ್ನುತ್ತಲೇ ಪುತ್ತೂರಲ್ಲಿ ಅಶ್ಲೀಲ ಪದ ಪ್ರಯೋಗಿಸಿದ ಈಶ್ವರಪ್ಪ! ಮೌನವಾದ ಸಭೆ

ಕೋಲಾರ ಸಂಸದ ಮುನಿಸ್ವಾಮಿ ಬಳಿಕ ಇದೀಗ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ವಿವಾದಕ್ಕೀಡಾಗಿದ್ದಾರೆ. ಪದ ಪ್ರಯೋಗ ಮಾಡುವ ಮೊದಲೇ ಇದನ್ನು ಬರೀಬೇಡಿ ಎಂದು ವಿನಂತಿಸಿದರು. ಮಾತನಾಡಿದ ಬಳಿಕ ಇದನ್ನು ಬರೆದರೂ ನನಗೇನೂ ಚಿಂತೆಯಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಇಂತಹ ಪದ ಪ್ರಯೋಗ ಮಾಡಿದ್ದರು ಎಂದು ಅವರೆಡೆಗೆ ಗುರಿಯಾಗಿರಿಸಿ ವಾಗ್ದಾಳಿ ನಡೆಸಿದರು. ಹಿಂದುತ್ವ, ಮೋದಿ, ರಾಷ್ಟ್ರೀಯತೆ ಎಂದೆಲ್ಲಾ ಈಶ್ವರಪ್ಪ ಹೇಳುವಾಗ ಚಪ್ಪಾಳೆ ತಟ್ಟಿದ ಜನತೆ ಅಶ್ಲೀಲ ಪದ ಪ್ರಯೋಗ ಕೇಳಿದೊಡನೆ ಮೌನಕ್ಕೆ ಶರಣಾಗಿದ್ದರು.

from India & World News in Kannada | VK Polls https://ift.tt/DFJbSB4

Dhruvanarayana - ಧ್ರುವನಾರಾಯಣ ಅಂತಿಮ ದರ್ಶನಕ್ಕೆ ಜನಸಾಗರ; ಗಳಗಳನೆ ಅತ್ತ ಪ್ರತಾಪ್ ಸಿಂಹ

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹಠಾತ್ ನಿಧನ ಅವರ ಕಾಂಗ್ರೆಸ್ ಪಾಳೇಯವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ರಾಜಕೀಯ ವಿರೋಧಿಗಳನ್ನೂ ಅಕ್ಷರಶಃ ಕಣ್ಣೀರಾಗಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಾದ ಕಾಂಗ್ರೆಸ್ ಸದಸ್ಯರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಸದ ಶ್ರೀನಿವಾಸ ಪ್ರಸಾದ್, ವಸತಿ ಸಚಿವ ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಸಂಸದ ಪ್ರತಾಪ್ ಸಿಂಹ ಅವರಂತೂ ಪಾರ್ಥಿವ ಮುಂದೆ ಗಳಗಳನೆ ಅತ್ತರು.

from India & World News in Kannada | VK Polls https://ift.tt/nPNAuy8

R Dhruvanarayana: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ಹೃದಯಾಘಾತದಿಂದ ಸಾವು

R Dhruvanarayana Passes Away: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಮಾಜಿ ಸಂಸದ ಧ್ರವ ನಾರಾಯಣ್‌ ಮೃತಪಟ್ಟಿದ್ದಾರೆ. ಶನಿವಾರ ಬೆಳಿಗ್ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ರಕ್ತ ವಾಂತಿ ಮಾಡಿದ್ದರು. ಮೈಸೂರಿನ ಡಿಆರ್‌ಎಂಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

from India & World News in Kannada | VK Polls https://ift.tt/FzwnRWB

Karnataka Village Roads : ಎಕ್ಸ್‌ಪ್ರೆಸ್‌ ವೇ, ಎನ್‌ಎಚ್‌ಗೆ ಬೆಣ್ಣೆ, ಗ್ರಾಮ ಸಡಕ್‌ಗೆ ಸುಣ್ಣ- ರಾಜ್ಯದಲ್ಲಿವೆ 11,479 ಕಿ.ಮೀ ಮಣ್ಣಿನ ರಸ್ತೆಗಳು!

Undeveloped Village Roads: ರಾಜ್ಯದಲ್ಲಿ ವಿಮಾನನಿಲ್ದಾಣ, ವಂದೇ ಭಾರತ ರೈಲು ಸಂಚಾರ, ಶರವೇಗದ ಸಂಚಾರಕ್ಕೆ ಯೋಗ್ಯವಾದ ಎಕ್ಸ್‌ಪ್ರೆಸ್‌ ವೇ, ರಾಷ್ಟ್ರೀಯ ಹೆದ್ದಾರಿ, ಮೆಟ್ರೋ ರೈಲು ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ಯತದೆ. ಆದರೆ, ಇಂದಿಗೂ ಗ್ರಾಮೀಣ ರಸ್ತೆಗಳು ಕಚ್ಚಾ ರಸ್ತೆಗಳಾಗಿಯೇ ಉಳಿದಿವೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಆಮೆಗತಿಯಲ್ಲಿ ಸಾಗಿದೆ.

from India & World News in Kannada | VK Polls https://ift.tt/v0DMoxn

BJP Strategy: ರೆಡ್ಡಿಗೆ ಸೆಡ್ಡು ಹೊಡೆಯಲು ಬಿಜೆಪಿ ತಂತ್ರ: ಮಾ.14ರಂದು ಗಂಗಾವತಿಯಲ್ಲಿ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಸಮಾವೇಶ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಸೆಡ್ಡು ಹೊಡೆದು ತಮ್ಮದೇ ಪಕ್ಷ ಕಟ್ಟಿಕೊಂಡು 12 ವರ್ಷಗಳ ಬಳಿಕ ರಾಜಕೀಯ ಮರು ಹುಟ್ಟು ಪಡೆಯಲು ಶ್ರಮ ವಹಿಸುತ್ತಿದ್ದಾರೆ. ಈಗಾಗಲೇ ಅಧಿಕೃತವಾಗ ಕೆಆರ್‌ಪಿಪಿ ಪಕ್ಷ ಕಟ್ಟಿಕೊಂಡು ಪ್ರಚಾರ ಶುರು ಮಾಡಿರುವ ಗಾಲಿ ಜನಾರ್ದನ ರೆಡ್ಡಿ 30 ಕ್ಷೇತ್ರಗಳನ್ನ ಗೆಲ್ಲುವ ಪ್ಲಾನ್‌ ಮಾಡಿದ್ದಾರೆ. ಹೈದರಾಬಾದ್‌ ಕರ್ನಾಟಕದ ಭಾಗದ ಜಿಲ್ಲೆಗಳ ಮೇಲೆ ಕಣ್ಣಿಟ್ಟಿರುವ ಗಣಿಧನಿ ಗಂಗಾವತಿ ಮೂಲಕ ತಮ್ಮ ರಾಜಕೀಯ ನೆಲೆಗಟ್ಟು ಮರು ಸ್ಥಾಪಿಸಲು ಮುಂದಾಗಿದ್ದಾರೆ. ಬಿಜೆಪಿಯಿಂದ ರೆಬಲ್‌ ಆಗಿರುವ ರೆಡ್ಡಿಯನ್ನ ಕಟ್ಟಿ ಹಾಕಲು ಬಿಜೆಪಿ ತಂತ್ರ ಮಾಡಿದೆ. ಗಂಗಾವತಿಯಲ್ಲಿ ಸರಣಿ ಸಭೆ, ಸಮಾರಂಭಗಳನ್ನ ಮಾಡುವ ಮೂಲಕ ರೆಡ್ಡಿಗೆ ತಿರುಗೇಟು ನೀಡಲು ಸಜ್ಜಾಗಿದೆ.

from India & World News in Kannada | VK Polls https://ift.tt/Wfo8JXM

ಮಧ್ಯ ಪ್ರದೇಶ: ವಿದ್ಯಾರ್ಥಿಗಳಿಗೆ ಬೈಬಲ್‌ ಪಾಠ, ಚರ್ಚ್‌ಗೆ ಕರೆದೊಯ್ಯುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ

Bible teaching for students in Madhya Pradesh: ಶಾಲೆಯಲ್ಲಿ ಪಾಠದ ಜೊತೆಗೆ ಬೈಬಲ್‌ ಅನ್ನೂ ಬೋಧಿಸುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಮಾಡಿರುವುದು ಹಾಗೂ ಅವರನ್ನು ಚರ್ಚ್‌ಗೆ ಕರೆದೊಯ್ದಿರುವ ಆರೋಪಗಳ ಮೇಲೆ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಸ್ಟೆಲ್‌ನ ಅಧೀಕ್ಷಕರನ್ನು ಬಂಧಿಸಲಾಗಿದ್ದು, ಮುಖ್ಯೋಪಾಧ್ಯಾಯ ತಲೆ ಮರೆಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್‌, ಬಾಲ ಕಾರ್ಮಿಕ ಕಾಯ್ದೆ, ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

from India & World News in Kannada | VK Polls https://ift.tt/W0UYk9q

MP Sumalatha likely to Announce: ಸುಮಲತಾ ನಿಲುವು ಇಂದು ಪ್ರಕಟ ? ಮೋದಿ ಭೇಟಿ ವೇಳೆಯಲ್ಲೇ ನಿರ್ಧಾರ!

MP Sumalatha likely to Announce: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಯಾವ ಪಕ್ಷ ಸೇರುತ್ತಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಶುಕ್ರವಾರ ಮಂಡ್ಯಕ್ಕೆ ಭೇಟಿ ನೀಡುವ ವೇಳೆಯಲ್ಲೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

from India & World News in Kannada | VK Polls https://ift.tt/slhnT1U

Karnataka Election 2023: ಸೀರೆ-ಕುಕ್ಕರ್‌, ಬಾಡೂಟ, ಪ್ರವಾಸದ ಬಳಿಕ ಈಗ ಉಚಿತ ನಿವೇಶನದ ಆಮಿಷ!

Karnataka Election 2023: ಕುಕ್ಕರ್ ಹಂಚಿಕೆ, ಸೀರೆ ಹಂಚಿಕೆಯಿಂದ ಆರಂಭವಾದ ಮತ ಆಮಿಷ, ಈಗ ಸೈಟ್ ಹಂಚುವವರೆಗೂ ತಲುಪಿದೆ. ತೀರ್ಥಕ್ಷೇತ್ರಕ್ಕೆ ಟೂರ್, ಚಿfನನದ ಮೂಗುತಿ, ಕ್ಷೀರದ ಮೇಲೆ ಆಣೆ ಪ್ರಮಾಣ ಹೀಗೆ ಮುಂದುವರೆದು ಲಕ್ಷಾಂತರ ರುಪಾಯಿ ಮತ ಆಮಿಷವಾದ ಸೈಟ್ ಹಂಚಿಕೆ ಬಗ್ಗೆ ಜನಪ್ರತಿನಿಧಿಗಳು ಆಮಿಷ ಒಡ್ಡಿದ್ದಾರೆ.

from India & World News in Kannada | VK Polls https://ift.tt/aTqFMc5

Shivanagouda Nayak : ಕುಮಾರಸ್ವಾಮಿಗೆ ಒಬ್ಬರಲ್ಲ ಹೆಂಡತಿ ಇರೋದು, ಎಂಟು ಜನರು ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ ಶಿವನಗೌಡ ನಾಯಕ

ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಅವನಿಗೆ ಒಬ್ಬಳು ಪತ್ನಿ ಅಲ್ಲ ಇರೋದು ಏಳು ಜನರ ಪ್ರತ್ನಿಯರು ಇರೋದು, ಅವನಿಗೆ ಅವನ ಕುಟುಂಬದ ಸಮಸ್ಯೆಯನ್ನೇ ಬಗಹರಿಸಿಕೊಳ್ಳಲು ಆಗಲ್ಲ. ಶಿವನಗೌಡ ನಾಯಕನನ್ನು ಸೋಲಿಸಿ ಎಂದು ಕರೆ ಕೊಟ್ಟಿದ್ದಾನೆ. ತಾಕತ್‌ ಇದ್ದರೆ ಈ ಬಾರಿ ನನ್ನನ್ನು ಸೋಲಿಸಿ ತೋರಿಸು, ತಂದೆ, ಮಗ, ಹೆಂಡತಿಗೆ ರಾಜಕಾರಣ ಬೇಕು, ಒಂದು ಕಡೆ ಮಗ ಸೋತಾ, ದೇವೇಗೌಡರು ಸೋತರು. ಆದರೂ ಕುಮಾರಸ್ವಾಮಿಗೆ ಬುದ್ದಿಯಿಲ್ಲ, ನನ್ನನ್ನು ಸೋಲಿಸುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

from India & World News in Kannada | VK Polls https://ift.tt/anyMkvH

Gali Janardhana Reddy- ಹೊಸ ಪಕ್ಷ ಕಟ್ಟಿ ಚುನಾವಣೆಗೆ ರೆಡಿಯಾಗುತ್ತಿರುವ ಜನಾರ್ದನ ರೆಡ್ಡಿಗೆ ಹೊಸ ಸಂಕಷ್ಟ; ರೆಡ್ಡಿ ವಿದೇಶಿ ಹೂಡಿಕೆ ವಿವರ ಸಂಗ್ರಹಕ್ಕೆ ಕೋರ್ಟ್‌ ಅಸ್ತು

ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿ ಮುಂದಿನ ವಿಧಾನ ಸಭೆ ಚುನಾವಣೆಗಾಗಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ವಿದೇಶದಲ್ಲಿ ಅವರು ಹೂಡಿಕೆ ಮಾಡಿರುವ ಮತ್ತು ಠೇವಣಿ ಇಟ್ಟಿರುವ ಹಣದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಅವರ ಹಣದ ವಿವರ ನೀಡುವಂತೆ ಸ್ವಿಟ್ಜರ್ಲೆಂಡ್, ಸಿಂಗಾಪುರ, ಐಲ್ ಆಫ್ ಮ್ಯಾನ್ ಮತ್ತು ಯುಎಇ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಸಿಬಿಐ ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿದೆ.

from India & World News in Kannada | VK Polls https://ift.tt/GYLhyVW

'ನನಗೇನೂ ಗೊತ್ತಿಲ್ಲ, ನಾನು ತಪ್ಪು ಮಾಡಿಲ್ಲ'-ಲೋಕಾಯುಕ್ತ ವಿಚಾರಣೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ, ಶುಕ್ರವಾರವೂ ಹಾಜರ್ ಆಗಲು ಸೂಚನೆ

MLA Madal Virupakshappa in Lokayukta office: ಕೆಎಸ್‌ಡಿಎಲ್‌ ಟೆಂಡರ್‌ಗೆ ಸಂಬಂಧಿಸಿದಂತೆ ನಲವತ್ತು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆಸಿ, ಪ್ರಶಾಂತ್‌ ಮಾಡಾಳ್‌ ಅವರನ್ನು ಬಂಧಿಸಿತ್ತು. ಕಚೇರಿ ಮತ್ತು ನಿವಾಸದಲ್ಲಿ ಪರಿಶೀಲನೆ ನಡೆಸಿ ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿತ್ತು. ಗುರುವಾರ ಸಂಜೆಯಿಂದ ಸುಮಾರು ನಾಲ್ಕು ತಾಸು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸ್ಪಷ್ಟ ಉತ್ತರ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.

from India & World News in Kannada | VK Polls https://ift.tt/fXeon54

ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಗೆ ನಮನ, ಗಾಂಧಿನಗರದಲ್ಲಿ ಹೋಳಿ ಸಂಭ್ರಮ: ಭಾರತದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಟೊನಿ ಅಲ್ಬನೀಸ್

Australia-India Education Qualification Recognition Mechanism: ಆಸ್ಟ್ರೇಲಿಯಾ ಪ್ರಧಾನಿ ಆಂಟೊನಿ ಅಲ್ಬನೀಸ್‌ ಗಾಂಧಿನಗರದಲ್ಲಿ ಹೋಳಿ ಆಚರಣೆಯಲ್ಲಿ ಭಾಗಿಯಾದವರು. ಹೂವು ಮತ್ತು ಬಣ್ಣಗಳ ಹೋಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅದಕ್ಕೂ ಮುನ್ನ ಸಾಬರಮತಿ ಆಶ್ರಮದಲ್ಲಿ ಸುಮಾರು ಇಪ್ಪತ್ತು ನಿಮಿಷ ಕಳೆದರು. ಗಾಂಧೀಜಿ ಅವರು ಇದ್ದ ಸ್ಥಳದ ಮಹತ್ವವನ್ನು ತಿಳಿದುಕೊಂಡರು ಚರಕದ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದರು. ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಶೈಕ್ಷಣಿಕ ಒಪ್ಪಂದದ ಬಗ್ಗೆ ಘೋಷಿಸಿದರು.

from India & World News in Kannada | VK Polls https://ift.tt/B7k2oaV

Lack of Nandini products: ನಂದಿನಿ ಉತ್ಪನ್ನಗಳ ಕೊರತೆ, ಸಮಸ್ಯೆ ಪರಿಹಾರಕ್ಕೆ ಉದ್ದಿಮೆದಾರರ ಮನವಿ, ಹೋಟೆಲ್‌ ಉದ್ಯಮಕ್ಕೆ ತಟ್ಟಿದ ಹಾಲಿನ ಬಿಸಿ

ರಾಜ್ಯದಲ್ಲಿ ನಂದಿನಿ ಹಾಲಿ ಉತ್ಪನ್ನಗಳಲ್ಲಿ ಬೇಡಿಕೆ ಹೆಚ್ಚಾದ ಕಾರಣ ಕೊರತೆ ಕಂಡು ಬಂದಿದೆ. ಈ ಮೂಲಕ ರಾಜ್ಯ ಮತ್ತು ಬೆಂಗಳೂರಿನ ಹೋಟೆಲ್‌ ಮಾಲೀಕರಿಗೆ ಹೊಡೆತ ಬಿದ್ದಿದೆ. ಚರ್ಮಗಂಟು ರೋಗ, ನೆರೆ ಪರಿಸ್ಥಿತಿಯಿಂದಾಗಿ ಉತ್ತರ ಭಾರತದಲ್ಲಿ ಹಾಲಿನ ಉತ್ಪನ್ನಗಳ ಉತ್ಪಾದನೆ ಗಣನೀಯ ಇಳಿಕೆಯಾಗಿದೆ. ಹೀಗಾಗಿ ಉತ್ತರ ಭಾರತದ ಕೆಲ ರಾಜ್ಯಗಳಿಗೆ ಕೆಎಂಎಫ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು, ಮೊಸರು ಮತ್ತು ಹಾಲಿನ ಉತ್ಪನ್ನಗಳನ್ನ ಖರೀದಿ ಮಾಡುತ್ತಿವೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ನಂದಿನ ಹಾಲು, ಮೊಸರು ಮತ್ತು ತುಪ್ಪ ಸಿಗುತ್ತಿಲ್ಲ. ಹೀಗಾಗಿ ಮೊದಲು ಸ್ಥಳಿಯರಿಗೆ ಆದ್ಯತೆ ಮೇರೆಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನ ಪೂರೈಕೆ ಮಾಡಿ ಎಂದು ಮನವಿ ಮಾಡಿಕೊಂಡಿವೆ.

from India & World News in Kannada | VK Polls https://ift.tt/TNcFZWL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...