ಬಜೆಟ್‌ ಮೇಲಿದೆ ಪಂಚರಾಜ್ಯ ಚುನಾವಣೆಯ ಒತ್ತಡ: ನಿರೀಕ್ಷೆಗಳೇನು?

ಹೊಸದಿಲ್ಲಿ: ಮುಂಬರುವ ರಾಜ್ಯಗಳ ಚುನಾವಣೆ ದೃಷ್ಟಿಯಿಂದ 2022-23ರ ಕೇಂದ್ರ ಬಜೆಟ್‌, ಸಾರ್ವಜನಿಕ ಬಂಡವಾಳ ವೆಚ್ಚವನ್ನು ಗಣನೀಯ ಏರಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ಆಯವ್ಯಯವನ್ನು ಮಂಡಿಸಲಿದ್ದು, ನಾನಾ ವಲಯಗಳಿಗೆ ಸರಕಾರ ನೆರವು ನೀಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಕೋವಿಡ್‌ ಪಿಡುಗಿನ ಆರ್ಥಿಕ ದುಷ್ಪರಿಣಾಮಗಳನ್ನು ಹತ್ತಿಕ್ಕಲು ಸರಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಹೀಗಿದ್ದರೂ, ಹಲವು ಸವಾಲುಗಳು ಈಗಲೂ ಉಳಿದಿವೆ. ಇದನ್ನು ಬಗೆಹರಿಸಲು ಬಜೆಟ್‌ ಆದ್ಯತೆ ನೀಡಬಹುದು ಎನ್ನಲಾಗುತ್ತಿದೆ. ರಾಜ್ಯಗಳ ಚುನಾವಣೆ ಎಫೆಕ್ಟ್ ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿದೆ. ಅದೊಂದೇ ಅಲ್ಲದೆ, ಗೋವಾ, ಮಣಿಪುರ, ಪಂಜಾಬ್‌ ಮತ್ತು ಉತ್ತರಾಖಂಡ್‌ನಲ್ಲೂ ಚುನಾವಣೆ ನಡೆಯುತ್ತಿದೆ. ಫೆಬ್ರವರಿ 10ರಿಂದ ಆರಂಭವಾಗುತ್ತಿದೆ. ಹೀಗಾಗಿ ಕೇಂದ್ರ ಆಯವ್ಯಯವು 4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಕೆಲ ಜನಪ್ರಿಯ ಘೋಷಣೆಗಳನ್ನೂ ಹೊರಡಿಸುವ ನಿರೀಕ್ಷೆ ಇದೆ. ಬಜೆಟ್‌ನ ಇತ್ತೀಚಿನ ಸ್ವಾರಸ್ಯ ಫೆಬ್ರವರಿ 1ರಂದು ಮಂಡನೆಯಾಗಲಿರುವ ಆಯವ್ಯಯ ಪೇಪರ್‌ಲೆಸ್‌ ಆಗಿರಲಿದೆ. ಓಮಿಕ್ರಾನ್‌ ವೈರಸ್‌ ಪ್ರಸರಣ ಹಿನ್ನೆಲೆಯಲ್ಲಿ ಈ ಸಲ 'ಹಲ್ವ ಕಾರ್ಯಕ್ರಮ' ನಡೆಯಲಿಲ್ಲ. ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಕೋವಿಡ್‌-19 ಶಿಷ್ಟಾಚಾರ ಇರಲಿದೆ. ಕಾಂಗ್ರೆಸ್‌ ರೈತರ ವಿವಾದ, ಚೀನಾ ಸಂಘರ್ಷ, ಏರ್‌ ಇಂಡಿಯಾ ಬಂಡವಾಳ ಹಿಂತೆಗೆತವನ್ನು ಪ್ರಸ್ತಾಪಿಸಲು ಸಜ್ಜಾಗಿದೆ. ಮುಂಗಡಪತ್ರದ ನಿರೀಕ್ಷೆಗಳು ಸರಕಾರದ ಸಾರ್ವಜನಿಕ ಬಂಡವಾಳ ವೆಚ್ಚ ಗಣನೀಯ ಏರಿಕೆ ಸಂಭವ ಬೆಳವಣಿಗೆಗೆ ಉತ್ತೇಜನ ನೀಡಲು ಮೂಲ ಸೌಕರ್ಯಕ್ಕೆ ಅನುದಾನ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವು ಚುನಾವಣೆ ಹೊಸ್ತಿಲಿನಲ್ಲಿರುವ ರಾಜ್ಯಗಳಿಗೆ ಹೆಚ್ಚುವರಿ ಅನುದಾನ ರಿಯಲ್‌ ಎಸ್ಟೇಟ್‌ ವಲಯಕ್ಕೆ ತೆರಿಗೆ ವಿನಾಯಿತಿಯ ಉತ್ತೇಜನ ನಿರೀಕ್ಷೆ ಮಾಡಲಾಗಿದೆ. ಮಾರುಕಟ್ಟೆ ಮೇಲೆ ಪ್ರಭಾವ? ಬಜೆಟ್‌ಗೆ ಮುನ್ನ ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿದೆ. ರಷ್ಯಾ-ಉಕ್ರೇನ್‌ ಸಂಘರ್ಷ, ಹಣದುಬ್ಬರ, ಕಚ್ಚಾ ತೈಲ ಏರಿಕೆ ನಕಾರಾತ್ಮಕ ಪ್ರಭಾವ ಬೀರಿದೆ. ಹೀಗಿದ್ದರೂ ಭಾರತೀಯ ಷೇರು ಮಾರುಕಟ್ಟೆ ಇರುವುದರಲ್ಲಿ ಉತ್ತಮ ಪ್ರದರ್ಶನ ದಾಖಲಿಸಿವೆ. ಎಲ್‌ಐಸಿ ಐಪಿಒ ಕೂಡ ಮಾರ್ಚ್ 31ರೊಳಗೆ ನಡೆಯಲಿದೆ. ಒಟ್ಟಾರೆಯಾಗಿ ಏರಿಳಿತಗಳು ಮುಂದುವರಿಯಲಿದ್ದರೂ, ಬಜೆಟ್‌ ಒಂದೇ ಭಾರಿ ಪ್ರಭಾವ ಬೀರದು ಎನ್ನುತ್ತಾರೆ ತಜ್ಞರು.


from India & World News in Kannada | VK Polls https://ift.tt/AltvVnS6M

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...