ಪಡಿತರ ಚೀಟಿಗಾಗಿ ಕಾದಿದ್ದವರಿಗೆ ಖುಷಿ ಸುದ್ದಿ: ಬಾಕಿ ಉಳಿದ ಅರ್ಜಿಗಳಿಗೆ ರೇಷನ್ ಕಾರ್ಡ್ ವಿತರಣೆ

ಎಚ್‌.ಪಿ. ಪುಣ್ಯವತಿ ಬೆಂಗಳೂರು: ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಬಾಕಿ ಇದ್ದ ಲಕ್ಷಾಂತರ ಮಂದಿಗೆ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳನ್ನು ಮಂಜೂರು ಮಾಡಿದೆ. ಅರ್ಹತೆಯಿಲ್ಲದವರೂ ಎಪಿಎಲ್‌ ಕಾರ್ಡ್‌ಗಳನ್ನು ಪಡೆದು ಇಲಾಖೆಗೆ ವಂಚಿಸುತ್ತಿದ್ದರು. ಕೆಲವರು ಅನಧಿಕೃತವಾಗಿ ಕಾರ್ಡ್‌ಗಳನ್ನು ಹೊಂದಿದ್ದು, ಪಡಿತರ ಪಡೆದು ಮಾರಿಕೊಳ್ಳುತ್ತಾ, ಅರ್ಹರ ಅನ್ನಕ್ಕೆ ಹೊಡೆತ ನೀಡಿದ್ದರು. ಹೀಗಾಗಿ ಎಪಿಎಲ್‌ ಕಾರ್ಡ್‌ ಹಿಂಪಡೆದು, ಬಿಪಿಎಲ್‌ ಪಟ್ಟಿಗೆ ಸೇರಿಸುವುದು, ಅರ್ಹರಲ್ಲದಿದ್ದರೂ ಯಾರದೋ ಹೆಸರನ್ನು ಪಟ್ಟಿಗೆ ಸೇರಿಸುವುದು ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿದ್ದವು. ಹೀಗಾಗಿ ಅವುಗಳನ್ನು ತಡೆದು, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಇಲಾಖೆಯು ಹೊಸದಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಯನ್ನು 2017ರಿಂದ ತಡೆಹಿಡಿದಿತ್ತು. ಆದರೆ 2019-2020ರ ವೇಳೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಯಿತು. ತೀರಾ ಅಗತ್ಯವುಳ್ಳ ಅರ್ಜಿಗಳ ವಿಲೇವಾರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ 2017ರಿಂದ 2021ರವರೆಗೆ ಬಂದ 3.93 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದವು. ಇವುಗಳ ಕುರಿತು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅರ್ಹ ಅರ್ಜಿದಾರರಿಗೆ ಬಿಪಿಎಲ್‌ ಹಾಗೂ ಇತರರಿಗೆ ಎಪಿಎಲ್‌ ಕಾರ್ಡ್‌ ನೀಡಲು ಆಹಾರ ಇಲಾಖೆ ಮುಂದಾಗಿದೆ. ಅದರಂತೆ ಇದೀಗ ಬಾಕಿಯಿದ್ದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯುಳ್ಳ 1.55 ಲಕ್ಷ ಅರ್ಜಿದಾರರಿಗೆ ಎಪಿಎಲ್‌ ಕಾರ್ಡ್‌ ಮತ್ತು 2.76 ಲಕ್ಷ ಅರ್ಜಿದಾರರಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ವಿತರಿಸಲು ಕಳೆದ ತಿಂಗಳು ಮಂಜೂರಾತಿ ನೀಡಿದೆ. ಹೀಗಾಗಿ ಕಾರ್ಡ್‌ಗಳ ವಿತರಣೆ ಕಾರ್ಯ ಆರಂಭವಾಗಿದೆ. ಪಡೆಯುವುದೆಲ್ಲಿ?ತಾಲೂಕು ಕಚೇರಿಗಳಲ್ಲಿರುವ ಆಹಾರ ಇಲಾಖೆ ಶಾಖೆ ಅಥವಾ ಆಯಾ ಕ್ಷೇತ್ರದ ಆಹಾರ ಇಲಾಖೆಯ ಉಪ ಕಚೇರಿಗಳಲ್ಲಿ ಸ್ವೀಕೃತಿ ಪತ್ರದೊಂದಿಗೆ ಹೊಸ ಕಾರ್ಡ್‌ಗಳನ್ನು ಪಡೆಯಬಹುದು. ಹೊಸ ಕಾರ್ಡ್‌/ತಿದ್ದುಪಡಿಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹಾಗೂ ಕಾರ್ಡ್‌ನಲ್ಲಿ ಮಕ್ಕಳು ಅಥವಾ ಇತರೆ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಹಾಗೂ ಅರ್ಜಿದಾರರ ಕುಟುಂಬಗಳ ಪರಿಶೀಲನೆ ಹಿನ್ನೆಲೆಯಲ್ಲಿ ಆನ್‌ಲೈನ್‌ ಪೋರ್ಟಲ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮನೆಯ ಸದಸ್ಯರ ಹೆಸರು ಸೇರ್ಪಡೆ ಮಾಡುವುದು, ತಿದ್ದುಪಡಿ ಅಥವಾ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ ಪೋರ್ಟಲ್‌ನ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ರಾಜ್ಯ ಜಂಟಿ ನಿರ್ದೇಶಕ ಡಾ. ಕೆ. ರಾಮೇಶ್ವರಪ್ಪ. ಹೊಸ ಕಾರ್ಡ್‌ಗೆ ಬೇಕಾದ ದಾಖಲೆಗಳು* ಆಧಾರ್‌ ಕಾರ್ಡ್‌ ಮತ್ತು ಮನೆಯಲ್ಲಿಹಿರಿಯ ಮಹಿಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯ. * ಕಾರ್ಡ್‌ನಲ್ಲಿ ಹೆಸರು ಸೇರಿಸಬೇಕಾದರೆ ಆಧಾರ್‌ ನಂಬರ್‌ ಜತೆಗೆ ಜಾತಿ ಮತ್ತು ಆದಾಯ ಪತ್ರ ಕಡ್ಡಾಯವಾಗಿರಬೇಕು. ಇದರಲ್ಲಿ ಆರು ವರ್ಷದೊಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕೆಂದರೆ ಮೊಬೈಲ್‌ ನಂಬರ್‌ ಜೋಡಣೆಯಾಗಿರುವ ಆಧಾರ್‌ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯ. * ಬೆಂಗಳೂರು ಒನ್‌ ಅಥವಾ ಸೈಬರ್‌ ಸೆಂಟರ್‌ಗಳಲ್ಲಿ ಹೊಸ ಕಾರ್ಡ್‌ ಮತ್ತು ಸೇರ್ಪಡೆ ಮಾಡಬಹುದು. ಇಲ್ಲವೇ ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಸ್ವಯಂ ಆಗಿ ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ಎಪಿಎಲ್‌ (ಆದ್ಯತೇತರ ಕುಟುಂಬದ ಪಡಿತರ ಚೀಟಿ) ಕಾರ್ಡ್‌ ಪಡೆಯುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಹಾಗೆಯೇ ಕಾರ್ಡ್‌ ಪಡೆಯಬಹುದು.


from India & World News in Kannada | VK Polls https://ift.tt/3n5UVHI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...