ಬೆಂಗಳೂರಿನಲ್ಲಿ ಇನ್ನೆರಡು ದಿನಗಳಲ್ಲಿ ದಿನಸಿ ವಸ್ತುಗಳ ಅಭಾವ! ಆಮ್ ಆದ್ಮಿ ಪಕ್ಷ ಎಚ್ಚರಿಕೆ

ಬೆಂಗಳೂರು: ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ದಿನಸಿ ವಸ್ತುಗಳ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ಆಮ್‌ಆದ್ಮಿ ಪಕ್ಷ ಸರ್ಕಾರವನ್ನು ಎಚ್ಚರಿಸಿದೆ. ಬೆಂಗಳೂರಿನಲ್ಲಿರುವ ಸ್ಥಳೀಯ ದಿನಸಿ ಅಂಗಡಿಗಳಲ್ಲಿ ಇದುವರೆವಿಗೂ ದೊರಕುತ್ತಿರುವ ದಿನಸಿ ವಸ್ತುಗಳು ಮುಗಿಯುತ್ತಾ ಬಂದಿದ್ದು , ಇನ್ನೆರಡು ದಿವಸಗಳಲ್ಲಿ ಈ ಎಲ್ಲ ವಸ್ತುಗಳಿಗೆ ಅಭಾವ ತರುವ ಸಂಭವವಿದೆ ಎಂದು ಆಮ್ ಆದ್ಮಿ ಪಾರ್ಟಿಯ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ. ಭಾನುವಾರ ಬೆಳಗ್ಗಿನಿಂದ ಆಮ್ ಆದ್ಮಿ ಪಕ್ಷದ ಎಲ್ಲ ವಿಧಾನಸಭಾ ಕಾರ್ಯಕರ್ತರುಗಳು ತಮ್ಮತಮ್ಮ ವ್ಯಾಪ್ತಿಯಲ್ಲಿನ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯಾಪಾರಸ್ಥರ ಬಳಿ ಮಾತನಾಡಿಸಿದಾಗ ಈ ಅಂಶವು ಬೆಳಕಿಗೆ ಬಂದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎರಡು ದಿನಗಳಿಗಾಗುವಷ್ಟು ದಿನಸಿಗಳು ಮಾತ್ರ ನಮ್ಮಲ್ಲಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ದಿನಸಿ ವಸ್ತುಗಳ ಅಭಾವವಾಗುವ ಸಂಭವವಿದೆ ಎಂದು ತಮ್ಮ ಆತಂಕವನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಕಷ್ಟು ದಿವಸಗಾಗುವಷ್ಟು ದಿನಸಿಗಳು ಲಭ್ಯವಿದ್ದರೂ ಸಹ ಅಲ್ಲಿಂದ ನಗರದ ಸ್ಥಳೀಯ ಪ್ರದೇಶದ ಅಂಗಡಿಗಳಿಗೆ ತಲುಪಿಸುವ ವ್ಯವಸ್ಥೆಯು ತುಂಡಾಗಿರುವುದು ಇದಕ್ಕೆಲ್ಲಾ ಕಾರಣವೆಂದು ಹೇಳುತ್ತಾರೆ. ಇದಕ್ಕೆ ಮೂಲ ಕಾರಣ ಕೂಲಿ ಕಾರ್ಮಿಕರ ಅಭಾವವಾಗಿದೆ. ಪ್ರತಿ ದಿವಸವೂ ಸ್ಥಳೀಯ ಅಂಗಡಿಗಳಿಗೆ ಹಾಗೂ ಎಪಿಎಂಸಿ ಮಾರುಕಟ್ಟೆಗಳಿಗೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರುಗಳು ಏಕಾಏಕಿ ಲಾಕ್ ಡೌನ್ ನಿಂದಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಈ ಕೂಲಿ ಕಾರ್ಮಿಕರು ಗಳ ದಿನನಿತ್ಯದ ಕಷ್ಟ ಸುಖಗಳನ್ನು ಸರ್ಕಾರ ಇದುವರೆಗೂ ಕೇಳಿಲ್ಲ. ದೈನಂದಿನ ಕೂಲಿ ಮಾಡಿಕೊಂಡು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದ ಈ ಅಸಂಘಟಿತ ಕೂಲಿ ಕಾರ್ಮಿಕರುಗಳು ಇಂದು ತಮ್ಮ ದೈನಂದಿನ ಕಾರ್ಯ ನಿರ್ವಹಣೆಯನ್ನು ಮಾಡಲು ಮನಸ್ಸನ್ನು ತೋರುತ್ತಿಲ್ಲ ಎಂದು ಆರೋಪಿಸಿದೆ. ಆದುದರಿಂದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹಾಗೂ ಕಾರ್ಮಿಕ ಮಂತ್ರಿಗಳು, ಅಧಿಕಾರಿಗಳು ಈ ಕೂಡಲೇ ಈ ಕೂಲಿ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಅವರುಗಳ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಮೂಲಕ ಬೆಂಗಳೂರಿನ ಪ್ರತಿಯೊಂದು ಪ್ರದೇಶಗಳಲ್ಲಿಯೂ ದಿನಸಿ ವಸ್ತುಗಳು ಸುಲಲಿತವಾಗಿ ದೊರಕುವಂತೆ ಮಾಡಬೇಕೆಂಬುದು ಆಮ್ ಆದ್ಮಿ ಪಕ್ಷದ ಆಗ್ರಹಿಸಿದೆ.


from India & World News in Kannada | VK Polls https://ift.tt/2UI6C9I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...