ಲಾಕ್‌ಡೌನ್ ಉಲ್ಲಂಘಿಸುವವರನ್ನು ಬಂಧಿಸುವ ನೂತನ ಲಾಠಿ: ಪೊಲೀಸರು ಫುಲ್ ಖುಷ್!

ಚಂಡೀಗಢ: ಉಲ್ಲಂಘಿಸುವವರನ್ನು ಹಿಡಿಯುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಸತತ ಮನವಿಯ ಹೊರತಾಗಿಯೂ ಮನೆಯಿಂದ ಹೊರಬರುವ ಕೆಲವರು ತಮ್ಮನ್ನೂ ಹಾಗೂ ಪೊಲೀಸರನ್ನೂ ಅಪಾಯಕ್ಕೆ ದೂಡುತ್ತಿದ್ದಾರೆ. ಆದರೆ ಚಂಡೀಗಢ ಪೊಲೀಸರು ಇದಕ್ಕೆ ಉಪಾಯವೊಂದನ್ನು ಕಂಡುಹಿಡಿದಿದ್ದು, ಲಾಕ್‌ಡೌನ್ ಉಲ್ಲಂಘಿಸುವವರನ್ನು ದೂರದಿಂದಲೇ ಸೆರೆ ಹಿಡುಯುವ ವಿನೂತನ ಲೋಹದ ಲಾಠಿಯೊಂದನ್ನುಆವಿಷ್ಕರಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಚಂಡೀಗಢ ಡಿಜಿಪಿ ಸಂಜಯ್ ಬನಿವಾಲ್, ಈ ವಿನೂತನ ಲಾಕ್‌ಡೌನ್ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪರಿಣಾಮಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಸುಮಾರು ಐದು ಅಡಿ ಉದ್ದದ ಲೋಹದ ಲಾಠಿಯನ್ನು ಆವಿಷ್ಕರಿಸಲಾಗಿದ್ದು, ಮುಂಭಾಗದಲ್ಲಿ ಸರಳುಗಳು ತೆರೆದು ವ್ಯಕ್ತಿಯನ್ನು ಚೌಕಾಕಾರದ ಸರಳುಗಳ ನಡುವೆ ಸುಲಭವಾಗಿ ಬಂಧಿಸಬಹುದಾಗಿದೆ. ಲಾಠಿಯ ಮತ್ತೊಂದು ತುದಿಯನ್ನು ಪೊಲೀಸರು ತಮ್ಮ ಕೈಯೊಳಗೆ ಸಿಕ್ಕಿಸಿ ಮಧ್ಯಭಾಗದಲ್ಲಿರುವ ಜಾಮರ್ ಎಳೆದರೆ ಮುಂದಿರುವ ವ್ಯಕ್ತಿ ಲಾಠಿಯ ಸರಳುಗಳಲ್ಲಿ ಬಂಧಿಯಾಗುತ್ತಾನೆ. ಈ ವಿನೂತನ ಲೋಹದ ಲಾಠಿ ಪೊಲೀಸರನ್ನೂ ಅಪಾಯದಿಂದ ದೂರ ಇಡುತ್ತದೆ ಎನ್ನಲಾಗಿದ್ದು, ಈ ಲಾಠಿಗಳನ್ನು ಪಡೆದ ಪೊಲೀಸರು ಇದೀಗ ಯಾವುದೇ ಮುಲಾಜಿಲ್ಲದೇ ಲಾಕ್‌ಡೌನ್ ಉಲ್ಲಂಘಿಸುವವರನ್ನು ಸುಲಭವಾಗಿ ಬಂಧಿಸಬಹುದಾಗಿದೆ.


from India & World News in Kannada | VK Polls https://ift.tt/3eUQwBJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...