ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 31 ಸಾವಿರ ಗಡಿ ದಾಟಿದೆ. ಸಾವಿನ ಸಂಖ್ಯೆಯೂ ಸಾವಿರ ಗಡಿ ದಾಟಿದೆ. ಈ ಪೈಕಿ 7696 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹಾಗೆಯೇ 22,629 ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಇನ್ನು 1007 ಮಂದಿ ಮೃತಪಟ್ಟಿದ್ದಾರೆ. ಭಾರತದ ಕೊರೊನಾಲಜಿ: ಸೋಂಕಿತರ ಸಂಖ್ಯೆ: 31,332 ಸಕ್ರಿಯ ಪ್ರಕರಣಗಳು: 22,629 ಗುಣಮುಖ: 7,696 ಮರಣ: 1,007 ರಾಜ್ಯದಲ್ಲಿ ಒಂದೇ ದಿನ 11 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆಯಾಗಿದೆ. ಹಾಗೆಯೇ ಇದುವರೆಗೆ 20 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕಂಟೇನ್ಮೆಂಟ್ ವಲಯಗಳು ಯಾವುದು? ಏತನ್ಮಧ್ಯೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಮಧ್ಯ ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ ಮುಂದುವರಿದಿದೆ. ತಮಿಳುನಾಡಿನಲ್ಲಿ ಮಂಗಳವಾರ ಒಂದೇ ದಿನ 120 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಚೆನ್ನೈ ನಗರವೊಂದರಲ್ಲೇ ದಾಖಲೆ 103 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 5 ದಿನಗಳ ಹಸುಗೂಸಿನಿಂದ ಹಿಡಿದು 5 ವರ್ಷದ ಒಳಗಿನ ನಾಲ್ವರು ಸೇರಿದ್ದಾರೆ. ಗುಜರಾತ್ನಲ್ಲೂ 226 ಹೊಸ ಪ್ರಕರಣಗಳು ದಾಖಲಾಗಿದೆ. ಮುಂಬಯಿ ಧಾರಾವಿ ಕೊಳಗೇರಿಯಲ್ಲಿ ಇನ್ನೂ 42 ಹೊಸ ಪ್ರಕರಣಗಳು ಪತ್ತೆಯಾಗಿರುವುದು ಸಾಮೂಹಿಕ ಸೋಂಕಿನ ಆತಂಕ ಹೆಚ್ಚಿಸಿದೆ. ಅಂದ ಹಾಗೆ ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷ ಗಡಿ ದಾಟಿದೆ. ಜಾಗತಿಕವಾಗಿ 30,89,811 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 2,12,890 ಮಂದಿ ಸಾವಿಗೆ ಶರಣಾಗಿದ್ದಾರೆ.
from India & World News in Kannada | VK Polls https://ift.tt/2ySAFTX