ಕೊರೊನಾ ಗೆದ್ದ 55 ವರ್ಷದ ಬ್ರಿಟನ್ ಪ್ರಧಾನಿ ನಾಳೆಯಿಂದ ಕೆಲಸಕ್ಕೆ ಹಾಜರ್..!

ಲಂಡನ್‌: ಕೊರೊನಾ ವೈರಸ್‌ ವಿರುದ್ಧದ ಸುದೀರ್ಘ ಕದನದಲ್ಲಿ ಜಯಗಳಿಸಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ನಾಳೆಯಿಂದ ಪ್ರಧಾನಿ ಕಚೇರಿಗೆ ತೆರಳಿ ವಿವಿಧ ಕಾರ್ಯ ಕಲಾಪಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆ ಲಂಡನ್‌ನಲ್ಲಿರುವ ಸೈಂಟ್‌ ಥೋಮಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಾನ್ಸನ್‌ ಇದೇ ತಿಂಗಳ 12 ರಂದು ಡಿಸ್ಚಾರ್ಜ್‌ ಆಗಿದ್ದರು. ಈ ವೇಳೆ ವೈದ್ಯರುಗಳ ತಂಡಕ್ಕೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದರು. ಇದೀಗ ಸುದೀರ್ಘ ರೆಸ್ಟ್‌ ಬಳಿಕ ಪ್ರಧಾನಿ ಬೋರಿಸ್‌ ಜಾನ್ಸನ್‌ ಕಚೇರಿಗೆ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಸಾವಿರಾರು ಕೊರೊನಾ ಸೋಂಕು ಬಾಧಿತರಿಗೆ 55 ವರ್ಷದ ಬೋರಿಸ್‌ ಜಾನ್ಸನ್ ಸ್ಪೂರ್ತಿಯಾಗಲಿದ್ದಾರೆ. ಪ್ರಧಾನಿ ಕಚೇರಿ ಇರುವ ಡ್ರೌನಿಂಗ್‌ ಸ್ಟ್ರೀಟ್‌ಗೆ ನಾಳೆ ಬೆಳಗ್ಗೆ ತೆರಳಲಿರುವ ಪ್ರಧಾನಿ ಬೋರಿಸ್‌ ಜಾನ್ಸನ್‌ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಕೊರೊನಾ ವೈರಾಣು ಸೋಂಕಿನಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಪ್ರಧಾನಿ ಬೋರಿಸ್‌ ಜಾನ್ಸನ್‌ ಮೂರು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂರು ದಿನಗಳ ಬಳಿಕ ಅವರ ಆರೋಗ್ಯ ಸುಧಾರಣೆ ಕಂಡಿತ್ತು. ಪ್ರಧಾನ ಮಂತ್ರಿ ಅನಾರೋಗ್ಯದ ಹಿನ್ನೆಲೆ ಸರ್ಕಾರದ ಜವಾಬ್ಧಾರಿಯನ್ನು ವಿದೇಶಾಂಗ ಸಚಿವ ಡೊಮಿನಿಕ್‌ ರಾಬ್‌ ಹೊತ್ತಿದ್ದರು.


from India & World News in Kannada | VK Polls https://ift.tt/2VAXlkl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...