ಕೊರೊನಾ ವಿರುದ್ಧದ ಹೋರಾಟ ಜನತಾ ಚಳುವಳಿಯಾಗಿ ಮಾರ್ಪಟ್ಟಿದೆ: ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಭಾರತದ ಹೋರಾಟ ಜನತಾ ಚಳುವಳಿಯಾಗಿ ಮಾರ್ಪಟ್ಟಿದ್ದು, ಈ ಚಳುವಳಿಯನ್ನು ಅತ್ಯಂತ ಬಲಿಷ್ಠವಾಗಿ ಮುನ್ನಡೆಸುತ್ತಿರುವ ರಾಷ್ಟ್ರದ ಜನತೆಗೆ ತಲೆಬಾಗಿ ನಮಸ್ಕರಿಸುವುದಾಗಿ ಹೇಳಿದ್ದಾರೆ. ತಮ್ಮ 64ನೇ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ನಿರ್ವಹಿಸಿದ ಪಾತ್ರ ಅತ್ಯಂತ ಶ್ಲಾಘನೀಯ ಎಂದು ಹೇಳಿದರು. ಪ್ರಧಾನಿ ಮೋದಿ 64ನೇ ಮನ್ ಕಿ ಬಾತ್ ಕಾರ್ಯಕ್ರಮದ ಮುಖ್ಯಾಂಶಗಳು:
  • ಕೊರೊನಾ ವೈರಸ್ ವಿರುದ್ಧದ ಭಾರತದ ಹೋರಾಟ ಜನತಾ ಳುವಳಿಯಾಗಿ ಮಾರ್ಪಟ್ಟಿದ್ದು, ಭವಿಷ್ಯದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಕೊರೊನಾ ವೈರಸ್ ಕುರಿತು ಚರ್ಚೆಯಾದರೂ ಭಾರತದ ಏಕತೆಯ ಕುರಿತು ಖಂಡಿತ ಪ್ರಸ್ತಾಪವಾಗಲಿದೆ.
  • ಭಾರತ ಕೊರೊನಾ ವೈರಸ್ ವಿರುದ್ಧ ಯುದ್ಧ ಸಾರಿದ್ದು, ಈ ಯುದ್ಧದಲ್ಲಿ ಪ್ರತಿಯೊಬ್ಬ ಭಾರತೀಯನೂ ಸೈನಿಕನೇ ಎಂದಿರುವ ಪ್ರಧಾನಿ, ಈ ಸಮರದಲ್ಲಿ ನಾವು ಸೋಲುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
  • ಕೊರೊನಾ ವೈರಸ್ ಸಂದಿಗ್ಧ ಸಂದರ್ಭದಲ್ಲಿ ಭಾರತ ಹಸಿವಿನಿಂದ ಬಳಲದಂತೆ ನಿತ್ಯವೂ ದುಡಿಯುತ್ತಿರುವ ರೈತಾಪಿ ವರ್ಗದ ಶ್ರಮವನ್ನು ದೇಶ ಗೌರವಿಸುತ್ತದೆ. ರೈತನ ನಿಸ್ವಾರ್ಥ ಸೇವೆಯನ್ನು ನಾವು ಮರೆಯುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
  • ಲಾಕ್‌ಡೌನ್ ಪರಿಣಾಮವಾಗಿ ಎಲ್ಲರೂ ಹೊಸ ಕಾರ್ಯ ವಿಧಾನಗಳನ್ನು ಅಳವಡಿಸಿಕೊಂಡಿದ್ದು, ಈ ಹೊಸ ವಿಧಾನ ಭವಿಷ್ಯದಲ್ಲೂ ಭಾರತದ ನೆರವಿಗೆ ಬರಲಿರುವುದು ಖಚಿತ ಎಂದು ಮೋದಿ ನುಡಿದಿದ್ದಾರೆ.
  • ಮೂಲಕ ವೈದ್ಯಕೀಯ ಸಮುದಾಯ, ಸ್ವಯಂಸೇವಕರ ಗುಂಪು, ಆರೋಗ್ಯ ಸಿಬ್ಬಂದಿ ಹೀಗೆ ಎಲ್ಲರೂ ಸೇರಿ ಸುಮಾರು 1.25 ಕೋಟಿ ಜನ ಒಗ್ಗಟ್ಟಾಗಿದ್ದಾರೆ. ನೀವೂ ಕೂಡ ಇದರ ಮೂಲಕ ಕೊರೊನಾ ವಾರಿಯರ್ ಆಗಬಹುದು.
  • ಇಂದು ಜಗತ್ತು ಥ್ಯಾಂಕ್ಯೂ ಇಂಡಿಯಾ' ಎಂದು ಹೇಳುತ್ತಿರುವುದಕ್ಕೆ ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. ಭಾರತ ತನ್ನನ್ನೂ ರಕ್ಷಿಸಿಕೊಂಡು ಜಗತ್ತನ್ನೂ ರಕ್ಷಿಸುವಷ್ಟು ಬಲ ಪಡೆದುಕೊಂಡಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಮೋದಿ ಹೇಳಿದರು.
  • ರಂಜಾನ್ ತಿಂಗಳ ಈ ಶುಭ ಸಂದರ್ಭದಲ್ಲಿ ಈದ್ ಹಬ್ಬಕ್ಕೂ ಮೊದಲು ಈ ಮಾರಕ ವೈರಾಣು ಈ ದೇಶದಿಂದ ತೊಲಗಲಿ ಎಂದು ಪ್ರಾರ್ಥಿಸೋಣ ಎಂದು ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
  • ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದ್ದು, ದೇಶದ ಎಲ್ಲಾ ರಾಜ್ಯ ಸರ್ಕಾರಗಳ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಮೋದಿ ಕೊಂಡಾಡಿದರು.
  • ಆರೋಗ್ಯ ಸಿಬ್ಬಂದಿಯ ಕಾರ್ಯವನ್ನು ಇಡೀ ದೇಶವೇ ಕೊಂಡಾಡುತ್ತಿದ್ದು, ಅವರು ಸಾಗುವ ದಾರಿಯಲ್ಲಿ ಹೂಮಳೆ ಸುರಿಸಲಾಗುತ್ತಿದೆ. ಇದಕ್ಕೂ ಮೊದಲು ಇವರ ಸೇವೆಯನ್ನು ಯಾರೂ ಅಷ್ಟಾಗಿ ಗುರುತಿಸುತ್ತಿರಲಿಲ್ಲ ಎಂದು ಪ್ರಧಾನಿ ನುಡಿದರು.
  • ಇಮ್ಯುನಿಟಿ ಹೆಚ್ಚಿಸಲು ಸಾಧ್ಯವಾದ ಎಲ್ಲವನ್ನೂ ಮಾಡಿ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಆರೋಗ್ಯ ಹಿತರಕ್ಷಣೆಗೆ ಅಗತ್ಯ ಎಲ್ಲ ಕ್ರಮಗಳನ್ನೂ ಕೈಗೊಂಡು ಸುರಕ್ಷಿತವಾಗಿರಿ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಕೊರೊನಾ ವೈರಸ್ ಮತ್ತು ಅದರ ವಿರುದ್ಧ ಭಾರತ ಹೋರಾಡುತ್ತಿರುವ ಪರಿಯನ್ನು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ತಿಳಿಸಿಕೊಟ್ಟ ಪ್ರಧಾನಿ ಮೋದಿ, ಈ ಹೋರಾಟದಲ್ಲಿ ಭಾರತ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/2yGA9Iu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...