ಕೊರೊನಾ ನಾಶಕ್ಕೆ ಅಲ್ಟ್ರಾ ವಯೋ­ಲೆಟ್ ಪದ್ಧತಿ, ಟ್ರಂಪ್ ಇಂಗಿತಕ್ಕೆ ತಜ್ಞರ ವಿರೋಧ

ವಾಷಿಂಗ್ಟನ್‌: ಮಾನವನ ದೇಹ ಸೇರಿರುವ ವೈರಸ್‌ ನಾಶಕ್ಕೆ ಸೋಂಕು ನಿವಾರಕ ಇಂಜೆಕ್ಷನ್‌ ಅಥವಾ ಕಿರಣ ಹಾಯಿಸುವ ಪದ್ಧತಿಯನ್ನು ಜಾರಿಗೊಳಿಸುವ ಇಂಗಿತವನ್ನು ಅಮೆರಿಕದ ಅಧ್ಯಕ್ಷ ಟೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ. ಆದರೆ, ಅಮೆರಿಕದ ಆರೋಗ್ಯ ತಜ್ಞರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾ­ಲಜಿ ಸಂಸ್ಥೆಯು, ಬಿಸಿಲು ಹೆಚ್ಚಿರುವ ಪ್ರದೇಶ ಹಾಗೂ ಶಾಖಕ್ಕೆ ಕೊರೊನಾ ವೈರಸ್‌ ಬೇಗ ನಾಶ­ವಾಗುತ್ತದೆ ಹಾಗೂ ಐಸೋಪ್ರೊಪಿಲ್‌ ಮದ್ಯ­ಸಾರ ಕೂಡ ವೈರಸ್‌ ನಿವಾರಣೆ ಮಾಡಬಲ್ಲದು ಎಂಬ ವರದಿ ನೀಡಿತ್ತು. ಶ್ವೇತ ಭವನದಲ್ಲಿ ನಡೆದ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ಈ ವರದಿ ಉಲ್ಲೇಖಿಸಿದರಲ್ಲದೆ, ಸೋಂಕು ನಿವಾರಕ­ಗಳ ಬಳಕೆ ಹಾಗೂ ಅಲ್ಟ್ರಾ ವಯೋ­ಲೆಟ್ ಬೆಳಕು ಹಾಯಿಸುವ ಮೂಲಕ ರೋಗಿಯನ್ನು ಗುಣಪಡಿಸುವ ವಿಧಾನ ಅಳ­ವಡಿಸಿಕೊಳ್ಳುವುದು ಉತ್ತಮ ಎಂಬ ಅಭಿ­ಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೊರೊನಾ ದಿಂದ 52,200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆರು ಜನರಲ್ಲಿ ಒಬ್ಬರಿಗೆ ಉದ್ಯೋಗ ನಷ್ಟ! ವಾಷಿಂಗ್ಟನ್‌: ಅಮೆರಿಕದಲ್ಲಿ1930ರ ಆರ್ಥಿಕ ಬಿಕ್ಕಟ್ಟನ್ನು ಮೀರಿಸುವಂಥ ಬಿಕ್ಕಟ್ಟು ಈಗ ಸೃಷ್ಟಿಯಾಗಿದೆ. ಆರು ಜನರಲ್ಲಿಒಬ್ಬನು ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡಿದ್ದಾನೆ ಎಂದು ಸಮೀಕ್ಷೆಯೊಂದರಲ್ಲಿ ಹೇಳಲಾಗಿದೆ. ಕಳೆದ ಕೆಲವು ವಾರಗಳಲ್ಲಿ2.6 ಕೋಟಿ ಜನರು ನಿರುದ್ಯೋಗ ಪ್ರಯೋಜನಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯದಲ್ಲಿಯೇ ಈ ಸಂಖ್ಯೆ 4 ಕೋಟಿ ಮುಟ್ಟಲಿದೆ. ಈ ನಡುವೆ, ಅಮೆರಿಕ ಆರ್ಥಿಕತೆಗೆ ಕೊರೊನಾದಿಂದ ತೀವ್ರ ಹೊಡೆತ ಬಿದ್ದಿದ್ದು, ಈಗ ದೇಶದ ಆರ್ಥಿಕ ಚಟುವಟಿಕೆಗಳು ಮರು ಆರಂಭಗೊಳ್ಳಬೇಕು ಎನ್ನುವ ಇಂಗಿತವನ್ನು ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ. ವಿಶ್ವ ಬ್ಯಾಂಕ್‌ ಮತ್ತು ಐಎಂಎಫ್‌ಗಳು 2020ರಲ್ಲಿಅಮೆರಿಕ ಆರ್ಥಿಕತೆಯು ನಕಾರಾತ್ಮಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜು ಮಾಡಿವೆ.


from India & World News in Kannada | VK Polls https://ift.tt/3cQOIb1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...