ಪ್ಲಾಸ್ಮಾ ಥೆರಪಿ ಮೂಲಕ ಕೊರೊನಾ ಶಮನಕ್ಕೆ ರಾಜ್ಯ ಸಜ್ಜು, ಫಸ್ಟ್‌ ದಾನಿ ಯಾರು..?

ಬೆಂಗಳೂರು: ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‌ಗೆ ಇನ್ನು ಯಾವುದೇ ಔಷಧ ಕಂಡುಹಿಡಿದಿಲ್ಲ. ಆದ್ರೆ ಕೊರೊನಾ ಸೋಂಕಿತ ರೋಗಿಗಳನ್ನು ಬಚಾವ್ ಮಾಡಲು ಪ್ಲಾಸ್ಮಾ ಥೆರಪಿ ಉತ್ತಮ ರಾಮಾಬಾಣ ಎನ್ನಲಾಗುತ್ತಿದೆ. ಇದು ಕೊರೊನಾಗೆ ಪರ್ಯಾಯ ಚಿಕಿತ್ಸೆಯ ಭರವಸೆ ಸಿಕ್ಕಿದಂತಾಗಿದೆ. ಇದೀಗ ನಮ್ಮ ರಾಜ್ಯ ಕೂಡ ಪ್ಲಾಸ್ಮಾ ಚಿಕಿತ್ಸೆಯ ಮೊರೆ ಹೋಗಿದ್ದು ಈಗಾಗಲೇ ಕೇಂದ್ರ ಸರ್ಕಾರದಿಂದ ಇದಕ್ಕೆ ಅನುಮತಿ ಪಡೆದು ಚಾಲನೆ ನೀಡಿದೆ. ಇದರ ಮುಂದುವರಿದ ಭಾಗವಾಗಿ ನಾಳೆಯಿಂದ ಸಂಪೂರ್ಣವಾಗಿ ಇದರ ಪ್ರಕ್ರಿಯೆಗಳು ಆರಂಭವಾಗಲಿದೆ. ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದವರ ಸ್ಯಾಂಪಲ್ಸ್‌ಗಳನ್ನ ಕಲೆಕ್ಟ್ ಮಾಡಿ, ಇವರು ಪ್ಲಾಸ್ಮಾ ದಾನಿಗಳು ಆಗಲು ಸಾಧ್ಯವಿದೆಯೆ ಎನ್ನುವ ಪರೀಕ್ಷೆಗಳು ನಡೆಯಲಿದೆ. ಪ್ರಾಯೋಗಿಕವಾಗಿ ಈ ಚಿಕಿತ್ಸೆ ರಾಜ್ಯದಲ್ಲಿ ನಡೆಯಲಿದ್ದು, ವೆಂಟಿಲೇಟರ್‌ನಲ್ಲಿರುವ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗುತ್ತೆ. ಬೆಂಗಳೂರಿನ ವ್ಯಕ್ತಿ ಮೊದಲ ಡೋನರ್‌..! ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿರುವ ಬೆಂಗಳೂರಿನ 40 ವರ್ಷದ ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ತಗೆಯಲಾಗುತ್ತೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಪ್ಲಾಸ್ಮಾ ಡೊನೇಟ್‌ ಮಾಡುವ ಮೊದಲ ವ್ಯಕ್ತಿ ಇವರಾಗಲಿದ್ದಾರೆ. ಕೇರಳ ಮೂಲದ ವ್ಯಕ್ತಿ ಸಿಲಿಕಾನ್‌ ಸಿಟಿಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ದುಬೈಯಿಂದ ಬೆಂಗಳೂರಿಗೆ ಬಂದಿದ್ದರು. ಇವರಿಗೆ ಈ ವೇಳೆ ಸೋಂಕು ತಗುಲಿತ್ತು ಸದ್ಯ ಗುಣಮುಖರಾಗಿರುವ ಇವರು ಪ್ಲಾಸ್ಮಾ ದಾನ ಮಾಡಲು ಸಿದ್ಧವಾಗಿರೋದಾಗಿ ತಿಳಿಸಿದ್ದಾರೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿರುವವರಿಗೆ ರೋಗಿಗಳಿಗೆ ಪ್ಲಾಸ್ಮಾ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ರಾಜ್ಯ ಸಚಿವರುಗಳಾದ ಡಾ.ಸುಧಾಕರ್‌ ಹಾಗೂ ಬಿ.ಶ್ರೀರಾಮುಲು ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದ್ದು ಹಲವರು ಇವರಿಗೆ ಕರೆ ಮಾಡಿ ಡೊನೇಟ್‌ ಮಾಡಲು ರೆಡಿ ಇದ್ದೇವೆ ಎಂದು ತಿಳಿಸಿದ್ದಾರೆ. ಬೆಂಗಳೂರು ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಕೇಂದ್ರ(ಬಿಎಂಸಿಆರ್‌ಐ) ಹಾಗೂ ಹೆಚ್‌ಜಿಸಿ ಆಸ್ಪತ್ರೆಯ ಸಹಯೋಗದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಪ್ರಯೋಗ ಆರಂಭವಾಗಲಿದೆ. ಏನಿದು ಪ್ಲಾಸ್ಮಾ ಥೆರಪಿ ? ಗುಣಮುಖರಾಗಿರುವ ಕೊರೊನಾ ರೋಗಿಗಳ ದೇಹದಿಂದ ಪ್ಲಾಸ್ಮಾ (ದ್ರವ ರೂಪದ ರೋಗ ನಿರೋಧಕ ಕಣಗಳು)ನ್ನು ತೆಗೆದು ಮತ್ತೊಬ್ಬ ರೋಗಿಯ ದೇಹಕ್ಕೆ ಸೇರಿಸುವ ಪ್ರಕ್ರಿಯೆಯನ್ನ ಪ್ಲಾಸ್ಮಾ ಥೆರಪಿ ಎನ್ನುತ್ತಾರೆ. ಈ ಥೆರಪಿಯಿಂದ ರೋಗಿಯ ರೋಗ ನಿರೋಧಕ ಶಕ್ತಿ ಜಾಸ್ತಿಯಾಗಿ ವೈರಸ್‌ ವಿರುದ್ಧ ಹೋರಾಡುವಂತೆ ಮಾಡುತ್ತೆ. ರಕ್ತದ ರೀತಿಯಲ್ಲೇ ಈ ದಾನ ಪ್ರಕ್ರಿಯೆ ನಡೆಯಲಿದೆ. ಆದ್ರೆ ಪ್ಲಾಸ್ಮಾಗೆ ರಕ್ತದ ಬಣ್ಣವಿರುವುದಿಲ್ಲ. ಒಬ್ಬ ಮನುಷ್ಯನ ದೇಹದಲ್ಲಿ ಶೇ.55ರಷ್ಟು ಪ್ಲಾಸ್ಮಾ ಇರುತ್ತೆ. ಈಗಾಗಲೇ ಕೇರಳ ಹಾಗೂ ದೆಹಲಿಯಲ್ಲಿ ಪ್ರಯೋಗಿಕವಾಗಿ ಈ ಚಿಕಿತ್ಸೆ ಆರಂಭವಾಗಿದೆ.


from India & World News in Kannada | VK Polls https://ift.tt/2S7VKQN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...