ಟೆಸ್ಟ್‌ ಕ್ರಿಕೆಟ್‌ನ ನಂ.1 ವೇಗಿಗೆ ಪುಜಾರ ಎದುರು ಬೌಲಿಂಗ್‌ ಮಾಡುವುದು ಕಷ್ಟವಂತೆ!

ಸಿಡ್ನಿ: ಅವರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದಿಂದ ಮಿಂದಿದ್ದ ಟೀಮ್‌ ಇಂಡಿಯಾ, 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಬರೆದಿತ್ತು. ಇದಾದ ಒಂದು ವರ್ಷದ ಬಳಿಕ ಮಾತಿಗಿಳಿದ ಟೆಸ್ಟ್‌ ಕ್ರಿಕೆಟ್‌ನ ನಂ.1 ವೇಗಿ , ಭಾರತ ತಂಡದ ತಡೆಗೋಡೆ ಪೂಜಾರ ಎದುರು ಬೌಲಿಂಗ್‌ ಮಾಡುವುದು ಬಲು ಕಷ್ಟ ಎಂದಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಆಯೋಜಿಸಿದ್ದ ಲೈವ್‌ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಿನ್ಸ್‌, ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಠಿಣ ಬಬ್ಯಾಟ್ಸ್‌ಮನ್‌ ಯಾರೆಂದು? ಕೇಳಲಾದ ಪ್ರಶ್ನೆಗೆ ಭಾರತ ಟೆಸ್ಟ್ ತಂಡದ 3ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರನ್ನು ಹೇಳಿದ್ದಾರೆ. "ಅಂದಹಾಗೆ ಹಲವು ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ನಾನು ಸಂಪೂರ್ಣ ವಿಭಿನ್ನ ಬ್ಯಾಟ್ಸ್‌ಮನ್‌ನ ಆಯ್ಕೆ ಮಾಡಿಕೊಳ್ಳಲಿದ್ದೇನೆ. ಅದು ಟೀಮ್ ಇಂಡಿಯಾದ ಚೇತೇಶ್ವರ್ ಪೂಜಾರ. ಅವರು ನಮ್ಮೆಲ್ಲರಿಗೂ ಬಹಳ ನೋವಾಗಿ ಪರಿಣಮಿಸಿದ್ದರು," ಎಂದು 26 ವರ್ಷದ ಅನುಭವಿ ವೇಗದ ಬೌಲರ್‌ ಹೇಳಿದ್ದಾರೆ. "ಆ ಸರಣಿಯಲ್ಲಿ ಪೂಜಾರ ನಿಜಕ್ಕೂ ಭಾರತ ತಂಡದ ಪರವಾಗಿ ಬಂಡೆಯಂತೆ ನಿಂತಿದ್ದರು. ಅವರನ್ನು ಔಟ್‌ ಮಾಡುವುದು ಬಹಳ ಕಷ್ಟವಾಗಿತ್ತು. ದಿನಪೂರ್ತಿ ಅವರ ಏಕಾಗ್ರತೆ ನಿಜಕ್ಕೂ ಅದ್ಭುತ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸದ್ಯಕ್ಕೆ ಅವರೇ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌," ಎಂದಿದ್ದಾರೆ. ನಡುವೆ 2018-19ರ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ ಪರ ಗರಿಷ್ಠ ರನ್‌ ಸ್ಕೋರರ್ ಎನಿಸಿಕೊಂಡ ಪೂಜಾರ 1258 ಎಸೆತಗಳನ್ನು ಎದುರಿಸಿ 521 ರನ್‌ಗಳನ್ನು ಗಳಿಸಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಬೌಲರ್‌ಗಳಾದ ನೇಥನ್‌ ಲಯಾನ್‌ ಮತ್ತು ಜಾಶ್‌ ಹೇಝಲ್‌ವುಡ್‌ ಕೂಡ ಪೂಜಾರ ಅವರನ್ನು ಔಟ್‌ ಮಾಡುವಷ್ಟರಲ್ಲಿ ಜಿಗುಪ್ಸೆ ಬಂದಿರುತ್ತದೆ ಎಂದು ಹೇಳಿದ್ದರು. ಅದರಲ್ಲೂ ಹೇಝಲ್‌ವುಡ್‌ ಪೂಜಾರ ವಿಕೆಟ್‌ ಪಡೆಯಲು ತಾವು ಮಂಕಡ್‌ ಕೂಡ ಮಾಡಲು ಸಿದ್ದ, ಮುಂದಿನ ಸರಣಿಯಲ್ಲಿ ಇದನ್ನು ಖಂಡಿತಾ ಮಾಡುವುದಾಗಿ ಹೇಳಿಕೊಂಡಿದ್ದರು. ಇನ್ನು ಭಾರತ ತಂಡ ಇದೇ ವರ್ಷದ ಅಂತ್ಯಕ್ಕೆ ಮತ್ತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ಬಾರಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಭಾಗವಾಗಿ 5 ಟೆಸ್ಟ್‌ಗಳ ಸರಣಿಯನ್ನಾಡುವ ಸಾಧ್ಯತೆ ಇದೆ. ಕಳೆದ ಬಾರಿ ಆಸ್ಟ್ರೇಲಿಯಾ ತಂಡ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅನುಪಸ್ಥಿತಿಯಲ್ಲಿ ಆಡಿ ಟೆಸ್ಟ್‌ ಸರಣಿ ಸೋತಿತ್ತು. ಈದೀಗ ಇಬ್ಬರೂ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಮರಳಿದ್ದು, ಮಾರ್ನಸ್‌ ಲಾಬುಶೇನ್‌ ಅವರಂತಹ ಯುವ ಪ್ರತಿಭೆಯ ಉಗಮವೂ ಆಗಿದೆ. ಒಟ್ಟಾರೆ ಕಳೆದ ಬಾರಿ ಪ್ರಶಸ್ತಿ ಗೆದ್ದಿರುವ ಭಾರತ ತಂಡಕ್ಕೆ ಈ ಬಾರಿ ಅಂಥದ್ದೇ ಫಲಿತಾಂಶ ಸಿಗುವುದು ಕೊಂಚ ಅನುಮಾನವೆ. ಆದರೆ ಎಲ್ಲಕ್ಕಿಂತಲೂ ಮೊದಲು ಕೊರೊನಾ ವೈರಸ್ ಭೀತಿ ದೂರವಾದರೆ ಮಾತ್ರ ಕ್ರಿಕೆಟ್‌ ಚಟುವಟಿಕೆ ಶುರುವಾಗುವುದು ಸಾಧ್ಯವಾಗಲಿದೆ. ಭಾರತ-ಆಸ್ಟ್ರೇಲಿಯಾ ನಡುವಣ ದ್ವಿಪಕ್ಷೀಯ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಯೋಜನೆಯಾಗಬೇಕಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cOGkZL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...