ದೇಶದಲ್ಲಿ ಪಿಪಿಇ ಕಿಟ್‌ಗಳ ಅರ್ಧದಷ್ಟು ನಮ್ಮ ಬೆಂಗಳೂರಿನಲ್ಲೇ ತಯಾರಿ!

ಹೊಸದಿಲ್ಲಿ: ವಾರಿಯರ್ಸ್‌ಗೆ ಜೀವ ರಕ್ಷಣೆಯನ್ನು ಒದಗಿಸುವಲ್ಲಿ ವೈಯಕಿಕ್ತ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು ಮಹತ್ವದ ಪಾತ್ರ ವಹಿಸುತ್ತದೆ. ಇದು ದೇಹವನ್ನು ಸಂಪೂರ್ಣವಾಗಿ ರಕ್ಷಿಸುವ ಮೂಲಕ ಸೋಂಕು ಹರಡದಂತೆ ತಡೆಗಟ್ಟುತ್ತದೆ. ಅಂದ ಹಾಗೆ ದೇಶದಲ್ಲಿ ದೈನಂದಿನ ಒಂದು ಲಕ್ಷದಷ್ಟು ಪಿಪಿಇ ಕಿಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಬಹುಪಾಲನ್ನು ಬೆಂಗಳೂರಿನಲ್ಲಿ ತಯಾರಿಸಲಾಗುತ್ತದೆ ಎಂಬ ಬಗ್ಗೆ ಜವಳಿ ಸಚಿವಾಲಯವು ಮಾಹಿತಿಯನ್ನು ನೀಡಿದೆ. ಬೆಂಗಳೂರಿನಲ್ಲಿ ಮಾತ್ರವಾಗಿ ಶೇಕಡಾ 50ರಷ್ಟು ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಮಾಹಿತಿ ನೀಡಿದೆ. ಕೋವಿಡ್ ಸೋಂಕು ಎದುರಿಸಲು ದೇಶದಲ್ಲಿ ಪಿಪಿಇ ಕಿಟ್ ಉತ್ಪಾದನೆಯಲ್ಲಿ ಪ್ರಮುಖ ಕೇಂದ್ರವಾಗಿ ಮಾರ್ಪಾಟ್ಟಿದೆ. ಅಲ್ಲದೆ ದೇಶದ ಒಟ್ಟು ಉತ್ಪಾದನೆಯ ಶೇಕಡಾ 50ರಷ್ಟು ಬೆಂಗಳೂರಿನಿಂದಲೇ ತಯಾರಿಯಾಗುತ್ತಿದೆ ಎಂದು ಜವಳಿ ಸಚಿವಾಲಯ ತಿಳಿಸಿದೆ. ಪಿಪಿಇ ಕಿಟ್ ಆರೋಗ್ಯ ಸಿಬ್ಬಂದಿಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಆಸ್ಪತ್ರೆ ಹಾಗೂ ಆರೋಗ್ಯ ಸಂಸ್ಥೆಗಳಿಗೆ ಪೂರೈಸುತ್ತಿದೆ. ಬೆಂಗಳೂರು ಹೊರತಾಗಿ ಪಿಪಿಇ ಕಿಟ್‌ಗಳನ್ನು ತಮಿಳುನಾಡಿನ ತಿರುಪುರ್, ಚೆನ್ನೈ, ಕೊಯಂಬತ್ತೂರು, ಗುಜರಾತ್‌ನ ಅಹಮಾದಾಬಾದ್, ವಡೋದರಾ, ಪಂಜಾಬ್‌ನ ಫಗ್ವಾರಾ, ಲುಧಿಯಾನ, ಮಹಾರಾಷ್ಟ್ರದ ಕುಸುಮ್‌ನಗರ, ಭಿವಂಡಿ, ರಾಜಸ್ಥಾನದ ದುಂಗಾರ್‌ಪುರ ಮತ್ತು ಕೋಲ್ಕತ್ತಾ, ದಿಲ್ಲಿ, ನೋಯ್ಡಾ ಹಾಗೂ ಗುರ್ಗಾಂವ್‌ನಲ್ಲಿ ಉತ್ಪಾದಿಸಲಾಗುತ್ತಿದೆ. ಏತನ್ಮಧ್ಯೆ ಅತೀವ ಬೇಡಿಕೆಯ ಮೆರೆಗೆ ಪಿಪಿಇ ಕಿಟ್ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಇದನ್ನು ಅಗತ್ಯ ರಾಜ್ಯಗಳಿಗೆ ಪೂರೈಸಲಾಗುವುದು.


from India & World News in Kannada | VK Polls https://ift.tt/2VES3UR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...