ವಾಷಿಂಗ್ಟನ್:ಹೃದಯ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿರುವ ಸರ್ವಾಧಿಕಾರಿ ಮೃತಪಟ್ಟಿರುವ ಕುರಿತು ವರದಿಗಳು ಬರುತ್ತಿವೆ. ಕಿಮ್ ಜಾಂಗ್ ಈಗಾಗಲೇ ನಿಧನ ಹೊಂದಿದ್ದು, ಉತ್ತರ ಕೊರಿಯಾ ಮಾತ್ರ ಇದುವರೆಗೂ ಆತನ ಸಾವನ್ನು ದೃಢಪಡಿಸಿಲ್ಲ ಎಂದು ಹಲವರು ವಾದ ಮಂಡಿಸಿದ್ದಾರೆ. ಈ ಮಧ್ಯೆ ಕಿಮ್ ಜಾಂಗ್ ಉನ್ ಮತ್ತು ಆತನ ಕುಟುಂಬ ವರ್ಗಕ್ಕಾಗಿ ಮೀಸಲಾಗಿರುವ ಉತ್ತರ ಕೊರಿಯಾದ ವೋನ್ಸನ್ ನಗರದಲ್ಲಿ ಕಾಣಿಸಿಕೊಂಡಿದ್ದು, ಈ ರೈಲಿನ ಓಡಾಟ ಆತನ ಸಾವಿನ ಸುದ್ದಿಗಳನ್ನು ಅಲ್ಲಗಳೆಯಲು ಸಾಕ್ಷಿಯಂತಿದೆ ಎನ್ನಲಾಗಿದೆ. ಈ ಕುರಿತು ಉತ್ತರ ಕೊರಿಯಾದ ಮೇಲೆ ನಿಗಾ ಇಡುವ ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಕಣ್ಗಾವಲು ಸಂಸ್ಥೆ ಮಾಹಿತಿ ನೀಡಿದ್ದು, ಕಿಮ್ ಜಾಂಗ್ ಅವರ ಈ ವಿಶೇಷ ರೈಲು ಕಳೆದ ಏ.21ರಿಂದ ಏ.23ರವರೆಗೆ ವೋನ್ಸನ್ ನಗರದಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದೆ. ಸ್ಯಾಟ್‌ಲೈಟ್ ಮೂಲಕ ಈ ವಿಶೇಷ ರೈಲಿನ ಇರುವಿಕೆಯನ್ನು ಪತ್ತೆ ಮಾಡಲಾಗಿದ್ದು, ಇದರ ಓಡಾಟ ಕಿಮ್ ಜಾಂಗ್ ಉನ್ ಇನ್ನೂ ಸತ್ತಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದೆ. ಅದಾಗ್ಯೂ ಸ್ಯಾಟ್‌ಲೈಟ್‌ನಲ್ಲಿ ಪತ್ತೆಯಾದ ಈ ರೈಲು ಕಿಮ್ ಜಾಂಗ್ ಉನ್ ಮತ್ತು ಆತನ ಕುಟುಂಬ ವರ್ಗಕ್ಕೆ ಮೀಸಲಿಟ್ಟ ವಿಶೇಷ ರೈಲು ಹೌದೋ ಅಲ್ಲವೋ ಎಂಬುದು ಇನ್ನೂ ಖಚಿತವಾಗಿದೆ ಎಂದೂ ಕಣ್ಗಾವಲು ಸಂಸ್ಥೆ ಸ್ಪಷ್ಟಪಡಿಸಿದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎನ್ನಲಾಗಿದ್ದು, ದಕ್ಷಿಣ ಕೊರಿಯಾ, ಹಾಗೂ ಚೀನಾ ಈ ಕುರಿತು ತೀವ್ರ ಕಟ್ಟೆಚ್ಚರದ ಸ್ಥಿತಿಯಲ್ಲಿ ಇವೆ. ಚೀನಾ ಈಗಾಗಲೇ ವೈದ್ಯಕೀಯ ತಂಡವೊಂದನ್ನು ಉ.ಕೊರಿಯಾಗೆ ಕಳುಹಿಸಿದ್ದು, ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಇದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳದಂತೆ ತೀವ್ರ ಕಟ್ಟೆಚ್ಚರವಹಿಸಿದೆ.
from India & World News in Kannada | VK Polls https://ift.tt/2KA0ESD