ಸಿಆರ್‌ಪಿಎಫ್‌ ಯೋಧ ಸಚಿನ್‌ ಬಂಧಿಸಿದ್ದು ಸೈನಿಕರಿಗೆ ತೋರಿದ ಅಗೌರವ: ಗಣೇಶ್‌ ಕಾರ್ಣಿಕ್‌ ಆಗ್ರಹ

ಮಂಗಳೂರು: ಬೆಳಗಾವಿಯಲ್ಲಿ ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಅವರನ್ನು ಬಂಧಿಸಿರುವುದನ್ನು ಮಾಜಿ ವಿಧಾನ ಪರಿಷತ್‌ ಸದಸ್ಯ ತೀವ್ರವಾಗಿ ಖಂಡಿಸಿದ್ದಾರೆ. ಈತನನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಣೇಶ್‌ ಕಾರ್ಣಿಕ್ ಆಗ್ರಹಿಸಿದ್ದಾರೆ. ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಮನೆಯ ಆವರಣದಲ್ಲಿ ವಾಹನ ತೊಳೆಯುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಅವರನ್ನು ಸಾರ್ವಜನಿಕವಾಗಿ ಹಿಂಸಿಸಿ 'ಕೋಳ ಹಾಗೂ ಚೈನ್' ಮೂಲಕ ಬಂಧಿಸಿ ಪೊಲೀಸ್ ಸ್ಟೇಷನಿನಲ್ಲಿರಿಸಿದ ವರ್ತನೆ ಸರಿಯಲ್ಲ. ಇದು ಖಂಡನೀಯ ಎಂದರು. ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಅತ್ಯಂತ ಶ್ಲಾಘನೆಗೆ ಪಾತ್ರರಾದ ಪೊಲೀಸ್ ಇಲಾಖೆ ಇಂತಹ ಕೆಲವೇ ಕೆಲವು ಬೇಜವಾಬ್ದಾರಿ ಪೊಲೀಸ್ ಸಿಬ್ಬಂದಿಗಳಿಂದ ಆಪಾದನೆಗೆ ಒಳಗಾಗುತ್ತಿರುವುದು ವಿಷಾದನೀಯ, ಯಾವ ನಾಗರಿಕರೊಂದಿಗೆ ಪೊಲೀಸ್ ಸಿಬ್ಬಂದಿಗಳ ಈ ರೀತಿಯ ವರ್ತನೆ ಸಮರ್ಥನೀಯವಲ್ಲ ಎಂದು ಗಣೇಶ್‌ ಕಾರ್ಣಿಕ್‌ ತಿಳಿಸಿದರು. ಸಚಿನ್ ಸಾವಂತ್ ಅರೆ ಮಿಲಿಟರಿ ಪಡೆಗೆ ಸೇರಿದ ಸೈನಿಕರೆಂದು ತಿಳಿದ ನಂತರವೂ ಮತ್ತು ಮಾಸ್ಕ್ ಧರಿಸದೆ ಇರುವ ಒಂದೇ ಒಂದು ಕಾರಣಕ್ಕಾಗಿ ಒಬ್ಬ ನಿರಪರಾಧಿಯನ್ನು ಅತ್ಯಂತ ಅಮಾನುಷವಾಗಿ ಹಿಂಸಿಸಿರುವುದು ದೇಶದ ಕಾನೂನಿಗೆ, ಸೈನಿಕರಿಗೆ ತೋರಿದ ಅಗೌರವ. ರಾಜ್ಯದ ಪೊಲೀಸ್ ಇಲಾಖೆಗೆ ಒಂದು ಕಪ್ಪುಚುಕ್ಕೆ. ಕೂಡಲೇ ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಅವರನ್ನು ಗೌರವದಿಂದ ಬಿಡುಗಡೆ ಮಾಡಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇನ್ನು ಮುಂದೆ ಈ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯದಂತೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಎಲ್ಲ ಸೈನಿಕ ಹಾಗೂ ಮಾಜಿ ಸೈನಿಕರ ಪರವಾಗಿ ಮುಖ್ಯಮಂತ್ರಿಗಳನ್ನು ಮತ್ತು ಗೃಹಮಂತ್ರಿಗಳನ್ನು ವಿನಂತಿಸುತ್ತೇನೆ ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ.


from India & World News in Kannada | VK Polls https://ift.tt/2Yg4vfs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...