ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಆಟಾಟೋಪ ನಿಲ್ಲುವಂತೆ ಕಾಣಿಸುತ್ತಿಲ್ಲ. ಶನಿವಾರ ಒಟ್ಟು 26 ಜನರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದು ಸತತ ಎರಡನೇ ದಿನ ರಾಜ್ಯದಲ್ಲಿ 25ಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ 29 ಜನರಲ್ಲಿ ಸೋಂಕು ಇರುವುದು ಖಚಿತವಾಗಿತ್ತು.ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭರ್ತಿ 500ಕ್ಕೆ ತಲುಪಿದೆ. ಇವರಲ್ಲಿ 18 ಜನರು ಅಸುನೀಗಿದ್ದರೆ, 158 ಜನರು ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 324 ಸಕ್ರಿಯ ಪ್ರಕರಣಗಳಿದ್ದು, ಇವರಲ್ಲಿ 317 ಜನರ ಆರೋಗ್ಯ ಸ್ಥಿರವಾಗಿದೆ. ಇನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 7ಕ್ಕೆ ಏರಿದೆ.ರಾಜಧಾನಿಯಲ್ಲಿ 13, ಬೆಳಗಾವಿಯ 9 ಜನರಿಗೆ ಕೊರೊನಾ ಪಾಸಿಟಿವ್! ತಣ್ಣಗಾಗಿದ್ದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಕೊರೊನಾ ಆರ್ಭಟ ಹೆಚ್ಚಾಗಿದ್ದು ಗುರುವಾರ 10, ಶುಕ್ರವಾರ 11 ಪ್ರಕರಣಗಳು ವರದಿಯಾಗಿದ್ದವು. ಇದೀಗ ಶುಕ್ರವಾರ 13 ಜನರ ವರದಿ ಪಾಸಿಟಿವ್ ಬಂದಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
ಇನ್ನು ಬೆಳಗಾವಿಯ ಹಿರೇಬಾಗೇವಾಡಿಯ 9 ಜನರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದ್ದರೆ, ಮಂಡ್ಯ, ದಕ್ಷಿಣ ಕನ್ನಡದ ಬಂಟ್ವಾಳ, ಮೈಸೂರಿನ ನಂಜನಗೂಡು, ಚಿಕ್ಕಬಳ್ಳಾಪುರದಿಂದ ತಲಾ ಒಂದು ಪ್ರಕರಣ ವರದಿಯಾಗಿದೆ. ನಂಜನಗೂಡು ಮತ್ತು ಹಿರೇಬಾಗೇವಾಡಿಯಲ್ಲಿ ಕೊರೊನಾಗೆ ಇನ್ನೂ ಬ್ರೇಕ್ ಬಿದ್ದಿಲ್ಲ, ಇದೇ ವೇಳೆ ದಕ್ಷಿಣ ಕನ್ನಡದ ಬಂಟ್ವಾಳದಿಂದ ದಿನಕ್ಕೊಂದು ಪ್ರಕರಣ ಬೆಳಕಿಗೆ ಬರುತ್ತಿರುವುದು ಸೋಂಕು ಮುಕ್ತ ಹಾದಿಯಲ್ಲಿದ್ದ ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ. ಇದೇ ರೀತಿ ದೀರ್ಘ ಕಾಲ ಯಾವುದೇ ಪ್ರಕರಣ ವರದಿಯಾಗದೇ ಇದ್ದ ಗದಗದಲ್ಲಿ ಇತ್ತೀಚೆಗೆ ಮೂರು ಪ್ರಕರಣ ಕಾಣಿಸಿಕೊಂಡಿತ್ತು. ಇನ್ನು ನಿನ್ನೆಯಷ್ಟೇ ತುಮಕೂರಿನಲ್ಲೂ ಸುದೀರ್ಘ ಅವಧಿಯ ನಂತರ ಮೊದಲ ಪ್ರಕಣ ಕಾಣಿಸಿಕೊಂಡಿತ್ತು. ಈ ಮೂಲಕ ಸೋಂಕು ಮುಕ್ತವಾಗುವ ಹಾದಿಯಲ್ಲಿದ್ದ ಜಿಲ್ಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಜಿಲ್ಲಾವಾರು ಕೊರೊನಾ ವೈರಸ್ ಸೋಂಕಿತರ ಪಟ್ಟಿ
from India & World News in Kannada | VK Polls https://ift.tt/2VCuj3S