ಸೊಪ್ಪು ದುಬಾರಿ, ತರಕಾರಿ ದರ ಇಳಿಕೆ: ಇಲ್ಲಿದೆ ಹಾಪ್‌ಕಾಮ್ಸ್‌ ದರ ಪಟ್ಟಿ

ಬೆಂಗಳೂರು: ಲಾಕ್‌ಡೌನ್ ಪರಿಣಾಮ ಕೊತ್ತಂಬರಿ ಸೊಪ್ಪು ಹೊರತುಪಡಿಸಿ ಇತರ ಸೊಪ್ಪುಗಳ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ಮಳೆ ಬಿದ್ದು ಕೆಲವೆಡೆ ಸೊಪ್ಪಿನ ಬೆಳೆ ಹಾಳಾದರೆ, ಮತ್ತೆ ಕೆಲವೆಡೆ ವಾತಾವರಣದಲ್ಲಿಉಷ್ಣಾಂಶ ಏರಿಕೆಯಾಗಿ ಒಂದಷ್ಟು ಬೆಳೆ ಹಾಳಾಗಿದೆ. ಜತೆಗೆ ಇದೀಗ ಸೊಪ್ಪು ಕಿತ್ತು ಮಾರುಕಟ್ಟೆಗೆ ತರಲು ಕೂಲಿಕಾರರು ಇಲ್ಲ. ಅನುಕೂಲಕರ ವ್ಯವಸ್ಥೆಯೂ ಇಲ್ಲ. ಹೀಗಾಗಿ, ಸೊಪ್ಪಿನ ದರ ಏರಿದೆ. ಹಾಪ್‌ಕಾಮ್ಸ್ ನಲ್ಲಿ ಕಳೆದ ತಿಂಗಳು ಕೆ.ಜಿ.ಗೆ 60-70 ರೂ. ಇದ್ದ ಮೆಂತ್ಯ ಸೊಪ್ಪು ಇದೀಗ 135 ರೂ.ಗೆ ಏರಿದೆ. ಸಬ್ಬಸಿಗೆ ಸೊಪ್ಪು 65 ರೂ. ಇದ್ದದ್ದು 98ರೂ. ತಲುಪಿದೆ. ಅದೇ ರೀತಿ ಇತರೆ ಸೊಪ್ಪುಗಳ ದರವೂ ಏರಿಕೆಯಾಗಿದೆ. ಇದೇ ವೇಳೆ ತರಕಾರಿ ದರ ಇಳಿಕೆಯಾಗಿದೆ. ಬೀನ್ಸ್ ಕೆ.ಜಿ.ಗೆ 54 ರೂ., ಟೊಮೇಟೊ 12 ರೂ., ಕ್ಯಾಪ್ಸಿಕಂ 18ರೂ., ಬೀಟ್‌ರೂಟ್‌ 25 ರೂ., ಎಲೆಕೋಸು 16 ರೂ. ಇದೆ. ನಗರದ ಜನರಿಗೆ ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆಯು ಮೊಬೈಲ್‌ ವಾಹನದ ಮೂಲಕ ತರಕಾರಿ, ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಆದರೆ ಅದು ಕೆಲವು ರಸ್ತೆ ಹಾಗೂ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಎಲ್ಲಾ ಗ್ರಾಹಕರಿಗೂ ಸೌಲಭ್ಯ ಸಿಗುತ್ತಿಲ್ಲ. ಇದೀಗ ಕೆಎಂಎಫ್‌ ಮಳಿಗೆಗಳ ಬಳಿಯೂ ರೈತರಿಂದ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗಿನ ವೇಳೆ ಹಾಲು ತರಲು ಹೋದವರು ತರಕಾರಿ, ಹಣ್ಣು ಮತ್ತಿತರ ಉತ್ಪನ್ನಗಳನ್ನು ಖರೀದಿಸಿ ತರುತ್ತಿದ್ದಾರೆ. ತಾಜಾ ತರಕಾರಿಯಿಲ್ಲ ಹಲವು ತರಕಾರಿ ಮಳಿಗೆಗಳಲ್ಲಿ ತಾಜಾ ತರಕಾರಿಯಿಲ್ಲ. ಒಂದು ದಿನ ತಂದರೆ ಅದನ್ನು 2-3 ದಿನ ಮಾರುತ್ತಾರೆ. ಯಾಕೆಂದರೆ ಖರೀದಿಸುವವರು ಹೆಚ್ಚಾಗಿ ಬರುತ್ತಿಲ್ಲ. ಹೀಗಾಗಿ, ವ್ಯಾಪಾರಿಗಳು ಸಂಗ್ರಹಿಸಿಟ್ಟುಕೊಂಡು ಹಳೆಯದನ್ನೇ ಮಾರುತ್ತಾರೆ.


from India & World News in Kannada | VK Polls https://ift.tt/3cUntfM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...