ನನ್ನನ್ನು ಕೆಣಕಿ ಗೋಪಾಲಯ್ಯ ಮರ್ಯಾದೆ ಕಳೆದುಕೊಳ್ಳೋದು ಬೇಡ ! ಡಿಕೆಶಿ ಗರಂ

ಬೆಂಗಳೂರು: ನನ್ನನ್ನು ಕೆಣಕಿ ಸಚಿವ ಗೋಪಾಲಯ್ಯ ಮರ್ಯಾದೆ ಕಳೆದುಕೊಳ್ಳೋದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಬಡವರಿಗೆ ಉಚಿತವಾಗಿ ನೀಡಲು ಕೇಂದ್ರ ಸರ್ಕಾರದಿಂದ ಬಂದಿದ್ದ ಅಕ್ಕಿಯನ್ನು ತಮಿಳುನಾಡಿಗೆ ಅಕ್ರಮ ಮಾರಾಟ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ಆಹಾರ ಮತ್ತು ಸರಬರಾಜು ಸಚಿವ ಕೆ. ಗೋಪಾಲಯ್ಯ ಅವರ ವಿರುದ್ಧ ಕಿಡಿಕಾರಿದರು. ಅಕ್ಕಿ ಅಕ್ರಮ ಮಾರಾಟ ವಿಚಾರವಾಗಿ ಗೋಪಾಲಯ್ಯ ಅವರು ಅಧಿಕಾರಿಗಳನ್ನು ಮುಚ್ಚಿಟ್ಟುಕೊಳ್ಳಬೇಕು ಅದಕ್ಕಾಗಿ ಈ ಸಮರ್ಥನೆ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗೋಪಾಲಯ್ಯ ಮುಂಚಿತವಾಗಿ ನಾನು ಮಂತ್ರಿ ಆಗಿದ್ದವನು, ಯಾಕೆ ನೂರಾರು ಗೋಡಾನ್ ಘೋಷಣೆ ಮಾಡಿದ್ರು ಎಂದು ಪ್ರಶ್ನಿಸಿದ ಡಿಕೆಶಿ ಸಚಿವ ಗೋಪಾಲಯ್ಯ ಇವಾಗ ನನ್ನ ಕೆಣಕುವುದು ಬೇಡ, ಸರ್ಕಾರ ಸಿಸ್ಟಮ್ ಹೇಗೆ ನಡೆಯುತ್ತದೆ ಎಂಬುವುದು ನನಗೆ ಗೊತ್ತಿದೆ. ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳೊದು ಬೇಡ ಎಂದು ಗರಂ ಆದರು. ಇನ್ನು ಮಂಡ್ಯದಲ್ಲಿ ಎಂಎಲ್ ಸಿ ಮತ್ತು ಅವರ ಪುತ್ರನ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳು ಎಲ್ಲರನ್ನು ಸಮಾನವಾಗಿ ನೋಡಬೇಕು. ಮಂಗಳೂರಿನವರು, ಚಿಕ್ಕಮಗಳೂರಿನವರು, ದಾವಣಗೆರೆ ಅವರು ಏನು ಮಾಡಿದ್ರು ಏನು ಮಾತಾಡಿದ್ದಾರೆ ಎಲ್ಲಾ ಗೊತ್ತು. ಇದು ತಪ್ಪು ತಾನೆ, ಅಧಿಕಾರಿಗಳು ಮಾಡುತ್ತಾರೆ ಎಂದು ನೀವು ಮಾಧ್ಯಮಗಳು ಮಾಡಬೇಡಿ ಬೇರೆ ಬೇರೆ ಪಕ್ಷಗಳ ಶಾಸಕರ ಹೇಳಿಕೆಗಳನ್ನು ನಡೆಗಳನ್ನು ಮಾಧ್ಯಮಗಳು ತಾರತಮ್ಯದಲ್ಲಿ ಬಿತ್ತರಿಸುತ್ತಿವೆ ಎಂದು ಆರೋಪ ಮಾಡಿದ ಡಿಕೆಶಿ ಕಾನೂನು ಎಲ್ಲರಿಗೂ ಒಂದೇ , ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಿ ತಾರತಮ್ಯ ಮಾಡಿ ನೋಡಬಾರದು ಎಂದರು.


from India & World News in Kannada | VK Polls https://ift.tt/2xcHMpK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...