ಮತ್ತಿಬ್ಬರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ; ಮುಂದುವರಿದ ಕಾರ್ಯಾಚರಣೆ

ಶೋಪಿಯಾನ್ (): ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಿರಂತರ ಕಾಳಗ ಮುಂದುವರಿದಿದೆ. ತಾಜಾ ವರದಿಗಳ ಪ್ರಕಾರ ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಭಾರತೀಯ ಭದ್ರತಾ ಪಡೆ ಯಶಸ್ವಿಯಾಗಿದೆ. ಮಂಗಳವಾರ ಆರಂಭಗೊಂಡ ಕಾರ್ಯಾಚರಣೆಯು ಈಗಲೂ ಮುಂದುವರಿದಿದೆ. ಮೂರನೇ ಉಗ್ರನಿಗಾಗಿ ಭಾರತೀಯ ಭದ್ರತಾ ಪಡೆ ಆಪರೇಷನ್ ಮುಂದುವರಿಸಿದೆ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೂ ಕಾರ್ಯಾಚರಣೆ ಈಗಲೂ ಜಾರಿಯಲ್ಲಿದೆ ಎಂಬುದನ್ನು ತಿಳಿಸಿದೆ. ಇನ್ನೊಬ್ಬ ಭಯೋತ್ಪಾದಕ ಅಡಗಿ ಕುಳಿತಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಮಂಗಳವಾರದಂದು ಶೋಪಿಯಾನ್ ಜಿಲ್ಲೆಯ ಜೈನಾಪೋರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದೆ. ಮಂಗಳವಾರ ರಾತ್ರಿ ಭಾರತೀಯ ಸೇನೆಯ 55 ರಾಷ್ಟ್ರೀಯ ರೈಫಲ್ಸ್ (ಆರ್‌ಆರ್), ಶೋಪಿಯಾನ್ ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯು (ಸಿಆರ್‌ಪಿಎಫ್) ಜಂಟಿ ಕಾರ್ಯಾಚರಣೆಯನ್ನು ನಡೆಸಿದೆ. ಕೊರೊನಾ ವೈರಸ್ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮಧ್ಯೆಯೂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ನಿಯಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ, ನಿರಂತರ ದಾಳಿ ನಡೆಸುತ್ತಲೇ ಇದೆ. ಇದರ ವಿರುದ್ಧ ಭಾರತ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.


from India & World News in Kannada | VK Polls https://ift.tt/3f2U0T1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...