ವಿದೇಶದಲ್ಲಿ ಮಿಂಚಲು ಅದೃಷ್ಟ ಬೇಕು: ರವಿಚಂದ್ರನ್ ಅಶ್ವಿನ್

ಚೆನ್ನೈ: ಎಷ್ಟೇ ಪರಿಣತ ಬೌಲರ್‌ ಆಗಿದ್ದರೂ ವಿದೇಶದಲ್ಲಿ ಯಶಸ್ಸುಗಳಿಸಲು ಕೊಂಚ ಅದೃಷ್ಠ ಬೇಕೇ ಬೇಕು ಎಂದು ಭಾರತ ಟೆಸ್ಟ್‌ ತಂಡದ ಸ್ಟಾರ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅಭಿಪ್ರಾಯ ಪಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡಿರುವ ಅಶ್ವಿನ್‌, ಭಾರತದ ಪರ ಅತಿ ವೇಗವಾಗಿ 250, 300 ಮತ್ತು 350 (ಜಂಟಿ) ಟೆಸ್ಟ್‌ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಆದರೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಶ್ವಿನ್‌ ಕಡೆಗಣನೆಗೆ ಒಳಪಟ್ಟಿದ್ದಾರೆ. "ಭಾರತ ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದು ಕೊಟ್ಟಿದ್ದೇನೆ. ಇದೇ ರೀತಿ ವಿದೇಶದಲ್ಲೂ ಸ್ಥಿರ ಪ್ರದರ್ಶನ ನೀಡಬೇಕೆಂಬುದು ನನ್ನ ಬಯಕೆ. ಅದರಲ್ಲೂ ಇಂಗ್ಲೆಂಡ್‌ ನೆಲದಲ್ಲಿ ಬೌಲಿಂಗ್‌ ಮಾಡುವಾಗ ನನ್ನ ಅರಿವಿಗೆ ಬಂದ ವಿಚಾರ ಏನೆಂದರೆ, ಅಂತಹ ಅಪರಿಚಿತ ಪಿಚ್‌ಗಳಲ್ಲಿ ಯಶಸ್ಸು ಗಳಿಸಬೇಕಿದ್ದರೆ, ಇಂದೇ ಲಯದಲ್ಲಿ ಬೌಲಿಂಗ್‌ ಮಾಡುವುದರ ಜೊತೆಗೆ ಕೊಂಚ ಅದೃಷ್ಟವೂ ಇರಬೇಕು ಎಂಬುದು. ವಿದೇಶದಲ್ಲಿ ನನ್ನ ಶ್ರೇಷ್ಠ ಪ್ರದರ್ಶನಗಳು ಹೊರಬರುವುದು ಬಾಕಿ ಇದೆ," ಎಂದು ಇಎಸ್‌ಪಿಎನ್‌ ಕ್ರಿಕ್‌ ಇನ್ಫೋದ ವಿಡಿಯೋ ಚಾಟ್‌ ಲಾರ್ಯಕ್ರಮದಲ್ಲಿ ಅಶ್ವಿನ್‌ ಹೇಳಿದ್ದಾರೆ. ಕೇರಮ್‌ ಬಾಲ್‌ ಸ್ಪೆಷಲಿಸ್ಟ್‌ ಆಗಿರುವ ಆರ್‌ ಅಶ್ವಿನ್‌ ಭಾರತ ತಂಡದ ಪರ 71 ಟೆಸ್ಟ್‌, 111 ಒಡಿಐ ಮತ್ತು 46 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 365, 150 ಮತ್ತು 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಪ್‌ ತಂಡವನ್ನು ಮುನ್ನಡೆಸಿದ್ದ ಅಶ್ವಿನ್‌, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೇರಿದ್ದಾರೆ. ಇನ್ನು ತಮ್ಮ ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ತಂಡದ ಪರ ಆಡಿದ್ದ ಅಶ್ವಿನ್‌, 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್‌ನಲ್ಲಿ ಯಶಸ್ಸು ಗಳಿಸಲು ತಾವು ಪರದಾಟ ನಡೆಸಿದ್ದಾಗಿಯೂ ಆಕಾಶ್‌ ಛೋಪ್ರಾ ಎದುರು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಸ್ಪಿನ್ನರ್‌ ಸಕ್ಲೇನ್‌ ಮುಷ್ತಾಕ್‌ ಕೂಡ ಅಶ್ವಿನ್‌ ಅವರಂತಹ ಕ್ಲಾಸ್‌ ಸ್ಪಿನ್ನರ್‌ಗೆ ಭಾರತ ತಂಡ ಸೀಮಿತ ಓವರ್‌ಗಳಲ್ಲಿ ಆಡಿಸದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದರು. "ಭಾರತ ತಂಡದಲ್ಲಿ ಕ್ಲಾಸ್‌ ಸ್ಪಿನ್ನರ್‌ಗಳು ಈಗ ಇಲ್ಲ. ಕ್ಲಾಸ್‌ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅಶ್ವಿನ್‌ ಅವರನ್ನು ಸೀಮಿತ ಓವರ್‌ಗಳ ತಂಡದಲ್ಲಿ ಆಡಿಸದೇ ಇರುವುದಕ್ಕೆ ಕಾರಣವೇನು?," ಎಂದು ಮುಷ್ತಾಕ್‌ ಪ್ರಶ್ನೆ ಮಾಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2VFatVw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...