ಬೆಂಗಳೂರು: ಏಪ್ರಿಲ್ 26 . ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಗಿತ್ತಿದೆ. ಬೆಂಗಳೂರಿನಲ್ಲಿ ಬಸವ ಸಮಿತಿ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಭಾಗಿಯಾಗಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಸವ ಜಯಂತಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಬಿಎಸ್‌ವೈ “ಸಾಮಾಜಿಕ ಸಮಾನತೆಯನ್ನು ಆಚರಣೆಯಲ್ಲೂ ತಂದ ಮಹಾನ್ ಸಮಾಜ ಸುಧಾರಕ ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಾನವತಾವಾದಿ ಬಸವೇಶ್ವರ ತತ್ವಗಳಿಂದ ಪ್ರೇರಣೆ ಪಡೆಯೋಣ” ಎಂದಿದ್ದಾರೆ. ಬಸವ ಜಯಂತಿಯ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿದ್ದು ಬಡವರು, ಶೋಷಿತರು,ಜಾತಿ ತಾರತಮ್ಯದಿಂದ ನರಳಿದವರು, ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ, ಇಂದು ಹಾಗೂ ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು.ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು ಎಂದಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕೂಡಾ ಟ್ವಿಟ್ಟರ್‌ನಲ್ಲಿ ಬಸವ ಜಯಂತಿ ನಮನಗಳನ್ನು ಸಲ್ಲಿಸಿದ್ದಾರೆ. ಸಮಸ್ತ ಜನತೆಗೆ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು.ಶೋಷಣೆರಹಿತ ಸಮಾನತೆಯ ಸಮಾಜಕ್ಕಾಗಿ ಹೋರಾಡಿದ ಬಸವೇಶ್ವರರ ಆದರ್ಶಗಳು ಉತ್ತಮಮಾರ್ಗದಲ್ಲಿ ನಡೆಯಲು ಇರುವ ಬೆಳಕಿನಂತೆ.ಬಸವಣ್ಣನವರ ವಚನಗಳು ಇಡೀ ಜಗತ್ತಿಗೇ ಪ್ರಸ್ತುತವಾಗಿದ್ದು ಮಾನವ ಕುಲಕ್ಕೆ ಜಾತ್ಯತೀತ ಸಂವಿಧಾನವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
from India & World News in Kannada | VK Polls https://ift.tt/2Y5K456