ಕೊರೊನಾ ವಾರಿಯರ್‌ಗಳಾಗಿ ಬದಲಾದ ತಬ್ಲಿಘಿಗಳು: ಇದೊಂದು ಕುತಂತ್ರವೆಂದ ನಖ್ವಿ

ನವದೆಹಲಿ: ಕೊರೊನಾ ಸೋಂಕಿಗೆ ಇದುವರೆಗೆ ಎಲ್ಲೂ ಔಷಧಿ ಕಂಡುಹಿಡಿಯಲಾಗಿಲ್ಲ. ಆದ್ರೆ ರೋಗಿಗಳನ್ನ ರಕ್ಷಿಸಲು ರಾಮಬಾಣ ಎಂದೇ ಖ್ಯಾತಿಯಾಗಿರುವ ಪ್ಲಾಸ್ಮಾ ಚಿಕಿತ್ಸೆ ಆರಂಭವಾಗಿದೆ. ಗುಣಮುಖಗೊಂಡ ರೋಗಿಗಳು ಪ್ಲಾಸ್ಮಾ ದಾನ ಮಾಡೋದಕ್ಕೆ ರೆಡಿಯಾಗಿದ್ದಾರೆ. ಇತ್ತೀಚೆಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ತಬ್ಲಿಘಿ ಸದಸ್ಯರು ಕಾರಣ ಎಂಬ ವ್ಯಾಪಕ ಟೀಕೆಯ ನಡುವೆ ಗುಣಮುಖರಾದವರು ತಮ್ಮ ಪ್ಲಾಸ್ಮಾ ದಾನಕ್ಕೆ ಮುಂದಾಗಿರುವುದು ಧನಾತ್ಮಕ ನಡೆಗೆ ಕಾರಣವಾಗಿದೆ ಆದ್ರೆ ತಬ್ಲಿಘಿಗಳ ದಾನಕ್ಕೆ ಸಂಬಂಧಪಟ್ಟಂತೆ ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್‌ ಅಬ್ಬಾಸ್‌ ನಖ್ವಿ ಕಿಡಿಕಾರಿದ್ದು ಕೊರೊನಾ ಹರಡಿ ಪಾಪ ಮಾಡಿರುವ ಅವರಿಗೆ ನಾಚೀಕೆಯಾಗಬೇಕು ಎಂದು ಹೇಳಿದ್ದಾರೆ. ತಮ್ಮ ಅಪರಾಧಿ ನಡತೆಯಿಂದ ಯಾವೆಲ್ಲ ತಬ್ಲಿಘಿಗಳು ಕೊರೊನಾ ಹರಡೋ ಪಾಪ ಮಾಡಿದ್ದಾರೋ ಅವರು ಈಗ ತಮ್ಮನ್ನ ತಾವು ಕೊರೊನಾ ವಾರಿಯರ್ಸ್‌ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಅಪರಾಧ ಮಾಡಿರೋ ಅವರು ನಾಚೀಕೆ ಪಡೋ ಬದಲು ಲಕ್ಷ ಕೊರೊನಾ ವಾರಿಯರ್ಸ್‌ಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೇಳೋದು ಕದಿಯೋದು ಕದ್ದು, ನಂತರ ತಮ್ಮನ್ನ ತಾವು ಹೊಗಳೋದು ಅಂತ ಟೀಕಿಸಿದ್ದಾರೆ. ಅಲ್ಲದೆ ಮತ್ತೊಂದು ಟ್ವೀಟ್‌ ಮಾಡಿರುವ ಸಚಿವರು, ಕೆಲವು ದೇಶಭಿಮಾನವಿರುವ ಭಾರತೀಯ ಮುಸ್ಲಿಂರು ಅಗತ್ಯ ಇರೋ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿದ್ದಾರೆ. ಅವರನ್ನು ತಬ್ಲಿಘಿಗಳು ಎಂದು ಕರೆಯೋದು ತಪ್ಪು ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/2W116P4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...