ಹೊಸದಿಲ್ಲಿ: ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ. ಈ ನಡುವೆ ಈ ಬಿಕ್ಕಟ್ಟಿನ ಸಮಯದಲ್ಲಿ ಶುಭ ಸಮಾಚಾರವೊಂದನ್ನು ನೀಡಿರುವ ಕೇಂದ್ರ ಆರೋಗ್ಯ ಸಚಿವ ಡಾ. , ಕಳೆದೊಂದು ವಾರದಲ್ಲಿ ದೇಶದ 80 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬುದನ್ನು ತಿಳಿಸಿದ್ದಾರೆ. ಕಳೆದ ಏಳು ದಿನಗಳಲ್ಲಿ ದೇಶದ 80 ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ ಪ್ರಕರಣ ದಾಖಲಾಗಿಲ್ಲ. ಅಂತೆಯೇ 14 ದಿನಗಳಿಂದ 47 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾಗೆಯೇ 21 ದಿನಗಳಿಂದ 39 ಜಿಲ್ಲೆಗಳು ಹಾಗೂ 28 ದಿನಗಳಿಂದ 17 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ ಎಂಬುದನ್ನು ಅವರು ಸೇರಿಸಿದರು. ಅದೇ ಹೊತ್ತಿಗೆ 129 ಜಿಲ್ಲೆಗಳನ್ನು ಹಾಟ್ಸ್ಪಾಟ್ಗಳಾಗಿ ಗುರುತಿಸಲಾಗಿದೆ. ಹಾಗೆಯೇ ಹಾಟ್ ಸ್ಪಾಟ್ಗಳಲ್ಲದ ಜಿಲ್ಲೆಗಳ ಪಟ್ಟಿಯಲ್ಲಿ 300 ಜಿಲ್ಲೆಗಳಿವೆ ಎಂಬುದನ್ನು ವಿವರಿಸಿದರು. ಇನ್ನು ಕಳೆದ 24 ತಾಸಿನಲ್ಲಿ 16 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಏತನ್ಮಧ್ಯೆ ಕಳೆದ 14 ದಿನಗಳಲ್ಲಿ ಕೊರೊನಾ ವೈರಸ್ ದ್ವಿಗುಣಗೊಳ್ಳುವ ಪ್ರಮಾಣವು 8.7 ದಿನಗಳಾಗಿತ್ತು. ಇದು ಕಳೆದ ಏಳು ದಿನಗಳಲ್ಲಿ 10.2 ದಿನಗಳಿಗೆ ಮತ್ತು ಕಳೆದ ಮೂರು ದಿನಗಳಲ್ಲಿ 10.9 ದಿನಗಳಿಗೆ ಏರಿಕೆಯಾಗಿದೆ ಎಂಬ ಮಾಹಿತಿಯನ್ನು ವಿಡಿಯೋ ಕಾನ್ಫೆರೆನ್ಸಿಂಗ್ ವೇಳೆಯಲ್ಲಿ ಹರ್ಷ ವರ್ಧನ್ ಬಹಿರಂಗಪಡಿಸಿದರು. ಮಂಗಳವಾರದ ವೇಳೆಗೆ ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,435ಕ್ಕೆ ಏರಿಕೆಯಾಗಿದೆ. ಇದರಲ್ಲಿ 21,632 ಸಕ್ರಿಯ ಪ್ರಕರಣಗಳು ಸೇರಿವೆ. ಹಾಗೆಯೇ ಇದುವರೆಗೆ 6869 ಮಂದಿ ಗುಣಮುಖರಾಗಿದ್ದು, 934 ಸಾವಿನ ಪ್ರಕರಣಗಳು ಸಂಭವಿಸಿದೆ ಎಂಬುದನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲಾಣ್ಯ ಸಚಿವಾಲಯವು ತಿಳಿಸಿದೆ.
from India & World News in Kannada | VK Polls https://ift.tt/2Sg2gVI