- ಆರ್. ತುಳಸಿಕುಮಾರ್, ಬೆಂಗಳೂರು ರಾಜ್ಯದಲ್ಲೇ ಮೊದಲ ಬಾರಿಗೆ ರೈತನ ಮನೆ ಬಾಗಿಲಿಗೇ ಬಿತ್ತನೆ ಬೀಜಗಳನ್ನು ಪೂರೈಸುವ ಕಾರ್ಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಕೈಹಾಕಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿಅಗತ್ಯ ವಸ್ತುಗಳಡಿ ಕೃಷಿ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದರೂ ತರಲು ಸ್ವಂತ ವಾಹನದಲ್ಲಿ ಹೋಗಲು ಹೆಚ್ಚಿನವರ ಬಳಿ ವಾಹನಗಳಿಲ್ಲ. ಬಾಡಿಗೆ ವಾಹನಗಳೂ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಮನಗಂಡೇ ವಿವಿಯು ಬಿತ್ತನೆ ಬೀಜಗಳನ್ನು ರೈತರ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ ರೂಪಿಸಿದೆ. ಬೀಜ ಪೂರೈಕೆ ಹೇಗೆ? ವಿವಿಯಿಂದ ಬೀಜ ಪೂರೈಕೆಯಾಗಬೇಕಿದ್ದಲ್ಲಿ ಗ್ರಾಮದವರೆಲ್ಲ ಸೇರಿ ಬೇಕಾದ ಬೀಜಗಳ ಬಗ್ಗೆ ಕನಿಷ್ಠ 8-10 ಕ್ವಿಂಟಾಲ್ ಬೇಡಿಕೆ ಸಲ್ಲಿಸಬೇಕು. ಹತ್ತಿರದ ಗ್ರಾಮಗಳ ರೈತರನ್ನಾದರೂ ಸೇರಿಸಿಕೊಂಡು ಪ್ರಸ್ತಾವನೆ ಸಲ್ಲಿಸಬಹುದು. ಈ ಮಾಹಿತಿ ತಲುಪಿಸಿದ ಸಮಯದಲ್ಲೇ ಬಿತ್ತನೆ ಬೀಜದ ಬಿಲ್ ಪಾವತಿಸಬೇಕು. ಆಯಾ ಬೆಳೆಗಳ ಹೆಸರು, ತಳಿ, ಬೀಜದ ಪ್ರಮಾಣ, ತಲುಪಿಸಬೇಕಾದ ಸ್ಥಳದ ಮಾಹಿತಿ ನೀಡಿದ 3-4 ದಿನಗಳಲ್ಲಿ ಮನೆ ಬಾಗಿಲಿಗೆ ಪೂರೈಸಲಾಗುತ್ತದೆ. ಹೀಗಾಗಿ ಸರಕಾರ ನೀಡುವ ರಿಯಾಯಿತಿ ವಿವಿಯ ಬಿತ್ತನೆ ಬೀಜಕ್ಕೆ ಸಿಗದು. ಬೀಜ ಪೂರೈಕೆಯಾಗುವ ಜಿಲ್ಲೆಗಳು
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ರಾಮನಗರ
- ಕೋಲಾರ
- ಚಿಕ್ಕಬಳ್ಳಾಪುರ
- ತುಮಕೂರು
- ಮಂಡ್ಯ
- ಹಾಸನ
- ಮೈಸೂರು
- ಚಾಮರಾಜನಗರ
from India & World News in Kannada | VK Polls https://ift.tt/3aMO0KQ