ಕರೋನಾ ವೈರಸ್ ಆರ್ಭಟಿಸುತ್ತಿದೆ. ಈ ಹೊತ್ತಲ್ಲಿ ಲಾಕ್ಡೌನ್ ದಿಸೆಯಿಂದ ಮನೆಯಲ್ಲಿ ಕುಳಿತಿರುವ ಜನರಲ್ಲಿ ಸುಪ್ತವಾಗಿ ಅಡಗಿದ್ದ ಕಲಾ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಓದುಗರಾದ ನಾಗರಾಜ್ ಎಂ ವಿ ಅವರು ಕೊರೊನಾ ಬಗ್ಗೆ ಒಂದು ಕವನವನ್ನೇ ಬರೆದಿದ್ದಾರೆ. ಅವರು ಕೊರೊನಾ ವೈರಸ್ ರೋಗಾಣುವನ್ನು ಗ್ರಹಿಸಿರುವ ರೀತಿ ನಿಜಕ್ಕೂ ವಿಭಿನ್ನವಾಗಿದೆ. ಈಶಾನ್ಯ ದೇಶದಿಂದು ಬಂದು ಅಪ್ಪಳಿಸಿರುವದಂ ಕೊರೋನಾ ವಿಷ ಕಾರ್ಕಕೊಟಕಂ ವೀರ ಬ್ರಹ್ಮೇಂದ್ರರ ಕಾಲಜ್ಞಾನ ನಿಜವಾಗಿರಲು ವಿಷಗಾಳಿ ಜಗತ್ತಿಗೆ ಕಂಟಕ ತಂದಿತೆಂದು ನುಡಿದಿರಲು ಭುವನದ ಮನುಜರ ಬದುಕು ಧುಸ್ತರವಾಗಿರಲು ಭಯದ ಕಾರ್ಮೋಡಗಳು ಸರನೆ ಎರಗಿರಲು ಪೆಂಡಭೂತದಿಂದ ಎಮ್ಮನು ಕಾಪಾಡೆಂದನು ಶ್ರೀ ಹರಿ !! ಎಲ್ಲೆ ಎಲ್ಲೆಗಳನ್ನ್ ಮೀರಿ ರಾಜ್ಯ ದೇಶದೊಳಲು ಒಳ ಹೊಕ್ಕು ಮರಣ ಮೃಂದಗಮವಂ ಭಾರಿಸಿ ತ್ತಿರುವದಂ ಈ ರಣ ಭಯಂಕರ ಹೆಮ್ಮಾರಿ ನರ ಮಾನವರ ಸಾವು ನೋವುಗಳನೆಲ್ಲ ಬಲ್ಲ ದೇವ ಈ ಪ್ರಪಾತದಿಂದ ಕಾಪಾಡೆಂದು ಬೇಡುತಿಹೆನು ಶ್ರೀ ಹರಿ !! ರೋಗಂ ಭಯಂಕರಂ ನಾಸಿಕದಿದೊಳ ಹೊಕ್ಕ ಶ್ವಾಸಕೋಶವಂ ಕೆಂಗಡಿಸಿ ಮನುಜರಂ ಧೃತಿಗೆಡಿಸಿ ನರಮಾನವರ ದೇಹಂಗಳ ಬಗೆದು ಮರಣದ ರಣ ಕೆಕೇ ಹಾಕಿರಲು ಮನುಜರಿಗೆ ಬಂದೆರಗಿದ ದುಃಖವಂ ತೊಡೆದುಹಾಕ್ಕೆಂದನು ಶ್ರೀ ಹರಿ !! ಮನುಕುಲದ ಮನುಜರ ಮನಸ್ಸುನು ಹೊಸೆದು ಹಾಕಿ ಭೂಮಂಡಳದೊಳಲು ಮರಣದ ಪ್ರವಾಹಂ ಎಳೆ ತಂದು ಕೋಲಾಹವಂ ಎಸೆದು ರಕ್ತ ಬೀಜಾಸುರಂತೆ ರಣ ರಾಕ್ಷಸರಂತೆವೂ ತಾಂಡವಾಡುತ್ತಿರಲು ಕಾರ್ಪಣ್ಯಗಳಿಂದ ಮನುಜರ ಒಡಲನು ಕಾಪಾಡೆಂದೆನು ಶ್ರೀ ಹರಿ !! ಮೇದಿನಿಯೋಳ್ ಆರ್ಭಟದ ಕೆನ್ನಾಲಿಗೆಯಂ ಚಾಚುತಾ ದೇಶ ದೇಶದೊಳಲು ಮರಣದ ಮೃದಂಗವಂ ಭಾರಿಸುತಂ ಮುನ್ನುಗ್ಗುತ್ತಿರಲು ಬಡವ ಶ್ರಿಮಂತರೆನ್ನದೆ ಬಂದು ಎರಗಿರಲು ರಾಜ ರಾಣಿಯರೆನ್ನದೆ ಬಡಿದು ಅಪ್ಪಳಿಸಿರಲು ಕಲಿಯುಗದ ವಿಷ ಕಾರ್ಕಕೊಟದಿಂದೆಮ್ಮನು ರಕ್ಷಿಸು ಎಂದು ಕೈ ಪಿಡಿದು ಬೇಡುತಿಹೆನು ಶ್ರೀ ಹರಿ !! - ನಾಗರಾಜ್ ಎಂ ವಿ, ಬೆಂಗಳೂರು
from India & World News in Kannada | VK Polls https://ift.tt/2S8cEyV